Advertisement

ಸೇವಾ ಭದ್ರತೆ: ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ

05:24 PM Dec 24, 2021 | Team Udayavani |

ಮುದಗಲ್ಲ: ಸೇವಾ ಭದ್ರತೆ ಒದಗಿಸಿ ಇಲ್ಲವೇ ನಮ್ಮನ್ನು ಕಾಲೇಜು ಸೇವೆಯಿಂದ ಮುಕ್ತಿಗೊಳಿಸಿ ಎನ್ನುವ ಬೇಡಿಕೆಯನ್ನಿಟ್ಟುಕೊಂಡು ರಾಜ್ಯಾದ್ಯಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂದೆ ಸಾಂಕೇತಿಕವಾಗಿ ಅನಿರ್ದಿಷ್ಟಾವಧಿ ಧರಣಿ ಬೆಂಬಲಿಸಿ ಸ್ಥಳೀಯ ಎಸ್‌ಪಿಆರ್‌ಡಿಪಿಆರ್‌ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ಧರಣಿ ಸತ್ಯಾಗ್ರಹ ನಡೆಸಿದರು.

Advertisement

ಅತಿಥಿ ಉಪನ್ಯಾಸಕಿ ಸಿದ್ದಮ್ಮ ಮಾತನಾಡಿ, 10ನೆ ತಾರೀಖೀನಿಂದ ಧಾರವಾಡ, ಬೆಳಗಾವಿಯಲ್ಲಿ ಧರಣಿ ಆರಂಭಿಸಿದ್ದಾರೆ. ಬೆಳಗಾವಿಯಲ್ಲಿ ಸಚಿವ ಅಶ್ವಥನಾರಾಯಣ ನಮ್ಮ ಬೇಡಿಕೆಗಳ ಕುರಿತು ಮಾತನಾಡದೇ ತಮ್ಮ ಸರಕಾರದ ಸಾಧನೆಗಳನ್ನು ಹೇಳಿ ಹೊರಟು ಹೋದರು. ನಾವು ಸ್ಥಳೀಯ ಕಾಲೇಜು ಸೇರಿದಂತೆ ತಾಲೂಕು, ಜಿಲ್ಲಾ ಮತ್ತು ರಾಜ್ಯ ಕೇಂದ್ರ ಸ್ಥಾನದಲ್ಲಿ ಹೋರಾಟ ಮಾಡಲು ನಾವು ಸಿದ್ಧರಾಗಿದ್ದೇವೆ. ಸರಕಾರಗಳು ಸಮೀತಿಗಳನ್ನು ರಚಿಸುವದರಲ್ಲಿಯೇ ಕಾಲ ಹರಣ ಮಾಡುತ್ತಿವೆ ಎಂದು ಆರೋಪಿಸಿದರು.

ಹರಿಯಾಣ, ಪಶ್ಚಿಮ ಬಂಗಾಳ ಮತ್ತು ದೇಹಲಿ ರಾಜ್ಯ ಸರಕಾರಗಳು ಅನುಸರಿಸಿದ ನಿಯಮಾವಳಿಗಳನ್ನು ಅನುಸರಿಸಿದರೂ ನಮ್ಮ ಅಭ್ಯಂತರವಿಲ್ಲ. ಒಟ್ಟಾರೆ ನಮಗೆ ಸೇವಾ ಭದ್ರತೆ ಒದಿಗಿಸಿ ಇಲ್ಲವೇ ನಮ್ಮನ್ನು ಕಾಲೇಜಿನಿಂದ ತೆಗೆದು ಹಾಕಿ ಎಂದು ಸರಕಾರಕ್ಕೆ ಒತ್ತಾಯಿಸಿದರು.

ಈ ಸಮಯದಲ್ಲಿ ಅತಿಥಿ ಉಪನ್ಯಾಸಕರಾದ ಡಾ| ದೇವಪ್ಪ ಎಚ್‌ ಬಿರಾದಾರ, ಭೀಮಣ್ಣ, ರಡ್ಡೆಪ್ಪ, ಸರಸ್ವತಿ, ನಾಜಿಯಾ, ಪೂಜಾ, ನಾಗರಾಜ ಆನೆಹೊಸುರ, ಮುದಕಪ್ಪ, ಶಾಹೀನ, ದಾವಲಸಾಬ, ಆದಪ್ಪ, ಬಸವರಾಜ, ಮಲ್ಲಪ್ಪ, ದೇವರಾಜ, ರೇಖಾ, ದೇವಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next