ಸಿರುಗುಪ್ಪ: ನಗರದ ಎಪಿಎಂಸಿ ಆವರಣದಲ್ಲಿ ಆರಂಭವಾದ ಭತ್ತ ಖರೀದಿ ಕೇಂದ್ರದಲ್ಲಿ ಭತ್ತ ಖರೀದಿಗೆ ರೈತರು ನೋಂದಣಿ ಮಾಡಿಸಲು ಬರುತ್ತಿದ್ದಾರೆ. ಆದರೆ ಖರೀದಿ ಕೇಂದ್ರದಲ್ಲಿಸರ್ವರ್ ಸಮಸ್ಯೆಯಿಂದ ರೈತರು ಅರ್ಜಿಗಳನ್ನು ಖರೀದಿ ಕೇಂದ್ರದ ಅಧಿಕಾರಿಗಳ ಕೈಗೆ ಕೊಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಡಿ.30 ರ ವರೆಗೆ ಭತ್ತ ಮಾರಾಟ ಮಾಡಲು ಬರುವ ರೈತರು ಖರೀದಿ ಕೇಂದ್ರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿದವರಿಗೆ ಮಾತ್ರ ಭತ್ತ ಮಾರಾಟ ಮಾಡಲು ಅವಕಾಶವಿದೆ ಎನ್ನುವ ಆದೇಶದ ಹಿನ್ನೆಲೆಯಲ್ಲಿ ರೈತರು ನೋಂದಣಿ ಮಾಡಿಸಲು ಖರೀದಿ ಕೇಂದ್ರಕ್ಕೆ ಬರುತ್ತಿದ್ದಾರೆ.
ಆದರೆ ಕಳೆದ 2 ದಿನಗಳಿಂದ ನೋಂದಣಿ ಮಾಡಿಸುವ ಸರ್ವರ್ ಕೆಲಸ ನಿರ್ವಹಿಸದ ಕಾರಣ ನೋಂದಣಿಗೆ ಬಂದಿದ್ದ ರೈತರಿಂದ ಅಧಿಕಾರಿಗಳು ನೋಂದಣಿಗೆ ಬೇಕಾದ ದಾಖಲೆ ಪತ್ರಗಳ ಅರ್ಜಿಗಳನ್ನು ಪಡೆದು ಸರ್ವರ್ ಕಾರ್ಯಾರಂಭ ಮಾಡಿದ ನಂತರ ನಿಮಗೆ ದೂರವಾಣಿ ಕರೆ ಮಾಡಿಅರ್ಜಿ ಸ್ವೀಕೃತಿ ರಸೀದಿಯನ್ನು ನೀಡುವುದಾಗಿ ಹೇಳಿ ಕಳುಹಿಸುತ್ತಿದ್ದಾರೆ.
ಡಿ.2ರ ವರೆಗೆ ಒಟ್ಟು 130 ರೈತರುನೋಂದಣಿಗಾಗಿ ಅಧಿಕಾರಿಗಳಿಗೆ ಅರ್ಜಿ ನೀಡಿದ್ದಾರೆ. ಡಿ.2 ರಂದು 11 ರಿಂದ 12:30ರ ವರೆಗೆ ನೋಂದಣಿ ಕಾರ್ಯ ನಿರ್ವಹಿಸಿದ್ದು, 59 ರೈತರಅರ್ಜಿಯನ್ನು ನೋಂದಣಿ ಮಾಡಲಾಗಿದ್ದು, ಮತ್ತೆ ಸರ್ವರ್ ಸಮಸ್ಯೆಯಿಂದ ಇನ್ನುಳಿದ ಅರ್ಜಿಗಳು ನೋಂದಣಿ ಮಾಡಿಲ್ಲವೆಂದು ಖರೀದಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಭತ್ತ ಖರೀದಿ ನೋಂದಣಿಗೆ ಸರ್ವರ್ ಸಮಸ್ಯೆ ಉಂಟಾಗಿದ್ದು, ರೈತರಿಗೆ ಯಾವುದೇ ರೀತಿಯಲ್ಲಿತೊಂದರೆ ಉಂಟಾಗದಂತೆ ನೋಂದಣಿಮಾಡಿಕೊಡುವಂತೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ರಾಹುಲ್ ಸಂಕನೂರು ತಿಳಿಸಿದ್ದಾರೆ.
ಒಟ್ಟು 130 ರೈತರು ನಮ್ಮ ಕೇಂದ್ರಕ್ಕೆ ಅರ್ಜಿ ನೀಡಿದ್ದು, ಇದರಲ್ಲಿ 59 ಅರ್ಜಿಗಳನ್ನು ಆನ್ ಲೈನ್‌ನಲ್ಲಿ ನೋಂದಣಿ ಮಾಡಲಾಗಿದೆ. ಮತ್ತೆಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ರೈತರಿಗೆ ಅರ್ಜಿಗಳನ್ನು ಕೊಟ್ಟು ಹೋಗುವಂತೆ ತಿಳಿಸಿದ್ದೇವೆ,ಸರ್ವರ್ ಆನ್ ಆದ ನಂತರ ನೋಂದಣಿ ಮಾಡಿತಿಳಿಸುತ್ತೇವೆಂದು ಆಹಾರ ಮತ್ತು ನಾಗರಿಕಸರಬರಾಜು ಇಲಾಖೆ ಗೋದಾಮು ಅಧಿಕಾರಿ ಬಸವರಾಜ್ ತಿಳಿಸಿದ್ದಾರೆ.