Advertisement
ಪಡಿತರ ವಿತರಣೆಯಲ್ಲಿ ಪಾರದರ್ಶಕತೆಯನ್ನು ಸಾಧಿಸುವ ನಿಟ್ಟಿನಲ್ಲಿ ಸರಕಾರ ಬೆರಳಚ್ಚು, ಒಟಿಪಿ ವ್ಯವಸ್ಥೆ ಮಾಡಿದೆ. ಆದರೆ ಸರ್ವರ್ ಸಮಸ್ಯೆಯ ಕಾರಣಕ್ಕೆ ಪಡಿತರ ಪಡೆಯುವವರು ತೊಂದರೆ ಅನುಭವಿಸುವ ಜತೆಗೆ ನ್ಯಾಯಬೆಲೆ ಅಂಗಡಿಯವರಿಗೂ ಸಮಸ್ಯೆಯಾಗುತ್ತಿದೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಕೂಡ ವೇಗವಾಗಿ ಇಲ್ಲದೇ ಇರುವುದರಿಂದ ಪಡಿತರ ವಿತರಣೆಗೆ ಇನ್ನಷ್ಟು ಸಮಸ್ಯೆಯಾಗುತ್ತಿದೆ.
Related Articles
Advertisement
ಪ್ರತ್ಯೇಕಗೊಳಿಸುವ ಪ್ರಸ್ತಾವನೆಹೆಚ್ಚಿನ ಇಲಾಖೆಗಳ ಸೌಲಭ್ಯಗಳು ಬಿಪಿಎಲ್ ಕಾರ್ಡ್ ಮೂಲಕವೇ ಸಿಗುವುದರಿಂದ ಅವುಗಳು ಇಲ್ಲಿಂದಲೇ ಮಾಹಿತಿ ಪಡೆಯುವುದರಿಂದ, ಇ-ಕೆವೈಸಿಯೂ ಇರುವುದರಿಂದ ಸರ್ವರ್ ಸ್ಲೋ ಎಂಬ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಕೆಲ ವೊಂದು ಆಯ್ಕೆಗಳನ್ನು ಇಲ್ಲಿಂದ ತೆಗೆದು ಸರ್ವರ್ ವೇಗವನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಇದರ ಮಧ್ಯೆ ಪಡಿತರ ವಿತರಣೆಗಾಗಿಯೇ ಪ್ರತ್ಯೇಕ ಸರ್ವರ್‌ನ ಬೇಡಿಕೆಯೂ ಇದ್ದು, ಅದಕ್ಕಾಗಿ ಪ್ರಸ್ತಾವನೆಯನ್ನೂ ಸಿದ್ಧಗೊಳಿಸಲಾಗಿದೆ. ದ.ಕ. – ಉಡುಪಿ ಎಷ್ಟೆಷ್ಟು.?
ದ.ಕ. ಜಿಲ್ಲೆಯಲ್ಲಿ ಒಟ್ಟು 456 ನ್ಯಾಯಬೆಲೆ ಅಂಗಡಿಗಳಿದ್ದು, ಬಿಪಿಎಲ್ ಹಾಗೂ ಅಂತ್ಯೋದಯದ ಪಡಿತರ ಚೀಟಿಯವರು ಸೇರಿ ಒಟ್ಟು 2,71,206 ಕಾರ್ಡ್ ಹೊಂದಿರುವವರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 295 ನ್ಯಾಯಬೆಲೆ ಅಂಗಡಿಗಳಿದ್ದು, 1,90,000 ಬಿಪಿಎಲ್ ಹಾಗೂ ಅಂತ್ಯೋದಯದ ಪಡಿತರ ಚೀಟಿದಾರರಿದ್ದಾರೆ. ಲೋಡ್ ಹೆಚ್ಚಾಗಿ ಸಮಸ್ಯೆ
ಹಾಲಿ ಇರುವ ಸರ್ವರ್‌ಗೆ ಲೋಡ್ ಜಾಸ್ತಿಯಾಗಿ ಈ ರೀತಿಯ ತೊಂದರೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅದರಲ್ಲಿರುವ ಕೆಲವೊಂದು ಆಯ್ಕೆಗಳನ್ನು ತೆಗೆದು ಹಾಕುವ ಕಾರ್ಯ ಮಾಡಿದ್ದು, ಶೀಘ್ರವೇ ಈ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಇದೆ. ಮಧುಸೂಧನ್ ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದ.ಕ. ವಿವಿಧ ಇಲಾಖೆಗಳ ಸೌಲಭ್ಯಗಳು ಬಿಪಿಎಲ್ ಕಾರ್ಡ್ ಮೂಲಕ ಸಿಗುತ್ತಿದ್ದು, ಅದರ ಮಾಹಿತಿ ಸರ್ವರ್ ಮೂಲಕ ಪಡೆಯುವುದರಿಂದ ತಾಂತ್ರಿಕ ತೊಂದರೆಯಿಂದ ರೇಶನ್ ವಿತರಣೆಯ ಕಾರ್ಯ ವಿಳಂಬವಾಗುತ್ತದೆ. ರಾಜ್ಯಮಟ್ಟದಲ್ಲೇ ಈ ಸಮಸ್ಯೆ ಇರುವ ಕಾರಣ ಪಡಿತರ ವಿತರಣೆಗಾಗಿ ಪ್ರತ್ಯೇಕ ಸರ್ವರ್ ಕುರಿತು ಪ್ರಸ್ತಾವನೆ ಇದೆ.
-ಮಹಮ್ಮದ್ ಇಸಾಕ್
ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಉಡುಪಿ -ಕಿರಣ್ ಸರಪಾಡಿ