Advertisement

ಅಹಂಕಾರ ಬಿಟ್ಟು ಸೇವೆ ಮಾಡಿ: ಎ.ಎಸ್‌.ಎನ್‌. ಹೆಬ್ಟಾರ್‌

03:45 AM Jul 04, 2017 | Team Udayavani |

ತೆಕ್ಕಟ್ಟೆ : ಜಗತ್ತೆ ನಮ್ಮ ಕುಟುಂಬ ಎನ್ನುವ ಭಾವನೆ ,ವೃತ್ತಿ ಸೇವೆಯೇ ಶ್ರೇಷ್ಠ ಎನ್ನುವ ಭಾವವನ್ನು ಇಡೀ ಜಗತ್ತಿಗೆ ಸಾರಿ ಪರಸ್ಪರ ಸಹಕಾರದಿಂದ ಬೆಳೆದು ಬಂದಿರುವ ಅಂತಾರಾಷ್ಟ್ರೀಯ ಸಂಸ್ಥೆಯೇ ರೋಟರಿ. 

Advertisement

ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸಮಾಜಮುಖೀಯಾಗಿ ಸೇವೆ ಮಾಡಲು ಕೇವಲ ಸಾಮಾನ್ಯ ಜ್ಞಾನವನ್ನೇ ಸಮರ್ಪಕವಾಗಿ ಬಳಸಿಕೊಂಡು ನಾನೇ ಬುದ್ಧಿವಂತ ಎನ್ನುವ ಅಹಂಕಾರವನ್ನು  ಬಿಟ್ಟಾಗ ಮಾತ್ರ ಯಾರ ಹೃದಯದ ಬಾಗಿಲು ಕೂಡಾ ತೆರೆಯಬಹುದು ಎಂದು  ಕುಂದಾಪುರದ ಹಿರಿಯ ನ್ಯಾಯವಾದಿ ಎ.ಎಸ್‌.ಎನ್‌ ಹೆಬ್ಟಾರ್‌ ಹೇಳಿದರು.

ಅವರು ಜು.2 ರವಿವಾರದಂದು ತೆಕ್ಕಟ್ಟೆ ಕನ್ನುಕೆರೆ ಗ್ರೇಸ್‌ ಆಡಿಟೋರಿಯಂನ ಮಿನಿ ಹಾಲ್‌ನಲ್ಲಿ ನಡೆದ ತೆಕ್ಕಟ್ಟೆ ರೋಟರಿ ಕ್ಲಬ್‌ 2017-18ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ  ನಿವೃತ್ತ ಪೊಲೀಸ್‌ ಅಧಿಕಾರಿ ಆನಂದ ಶೆಟ್ಟಿ  ಅವರನ್ನು ಗುರುತಿಸಿ ಸಮ್ಮಾನಿಸಲಾಯಿತು.  ಕನ್ನುಕೆರೆ ಫಾಲ್ಕನ್‌ ಕ್ಲಬ್‌ನ ಸಮಾಜ ಸೇವೆಯನ್ನು ಕಂಡು ಗುರುತಿಸಿ ಗೌರವಿಸಲಾಯಿತು  ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ, ವೈದ್ಯಕೀಯ ನೆರವು , ತೆಕ್ಕಟ್ಟೆ ಫ್ರೆಂಡ್ಸ್‌ ತೆಕ್ಕಟ್ಟೆ ಇವರ ಉಚಿತ ಅÂಂಬುಲೆನ್ಸ್‌  ನಿರ್ವಹಣೆಗಾಗಿ ಇಂಧನ ಕೊಡುಗೆ  ಹಾಗೂ ಹೊಸ ಸದಸ್ಯರನ್ನು ಕ್ಲಬ್‌ಗ ಸೇರ್ಪಡೆಗೊಳಿಸಲಾಯಿತು.

ಅಸಿಸ್ಟೆಂಟ್‌ ಗವರ್ನರ್‌ ಜಿ.ರತ್ನಾಕರ ಗುಂಡ್ಮಿ  ಮಾತನಾಡಿ ನಮ್ಮ ಗುರಿ ಸರಿಯಾಗಿದ್ದರೆ ಮುಂದೊಂದು ದಿನ ಒಳ್ಳೆಯ ಅವಕಾಶ ಬಂದೇ ಬರುವುದು . 

Advertisement

ಹಿಂದಿನಿಂದಲೂ ಭಾರತೀಯತೆಯಲ್ಲಿ ಸೇವಾ ಮನೋಭಾವನೆ ಹಾಸು ಹೊಕ್ಕಾಗಿದ್ದು ಸೇವೆಯಲ್ಲಿ  ಭಾರತ ಇಡೀ ವಿಶ್ವದಲ್ಲಿಯೇ ಎರಡನೆಯ ಸ್ಥಾನದಲ್ಲಿದೆ  ಎಂದರು. ತೆಕ್ಕಟ್ಟೆ ರೋಟರಿ ಕ್ಲಬ್‌ ನೂತನ ಅಧ್ಯಕ್ಷ, ಬೇಳೂರು ಗ್ರಾ.ಪಂ.ಸದಸ್ಯ ಸುರೇಶ್‌ ಬೇಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ವಲಯ ಸೇನಾನಿ ಆನಂದ ಶೆಟ್ಟಿ , ತೆಕ್ಕಟ್ಟೆ ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಭೋಜರಾಜ ಶೆಟ್ಟಿ , ನೂತನ  ಕಾರ್ಯದರ್ಶಿ ಹೆಚ್‌.ಜಗದೀಶ್‌   ನಿಕಟಪೂರ್ವ ಕಾರ್ಯದರ್ಶಿ ಸದಾಶಿವ ಶೆಟ್ಟಿ, ಸುಮನಾ ಸುರೇಶ್‌ ಹಾಗೂ ತೆಕ್ಕಟ್ಟೆ ರೋಟರಿ ಕ್ಲಬ್‌ ಸರ್ವ ಸದಸ್ಯರು ಉಪಸ್ಥಿತರಿದ್ದರು. ಉದ್ಯಮಿ ವಿಜಯ ಕುಮಾರ್‌ ಸ್ವಾಗತಿಸಿ, ಡಾ| ಕೇಶವ ಕೋಟೇಶ್ವರ, ಹೆರಿಯ ಮಾಸ್ಟರ್‌ ನಿರೂಪಿಸಿ, ನಿಕಟಪೂರ್ವ ಕಾರ್ಯದರ್ಶಿ ಸದಾಶಿವ ಶೆಟ್ಟಿ ವರದಿ ವಾಚಿಸಿ ,  ನೂತನ  ಕಾರ್ಯದರ್ಶಿ ಎಚ್‌.ಜಗದೀಶ್‌  ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next