Advertisement

Udupi: ನ್ಯಾಯವಾದಿಗೆ ಜೀವಬೆದರಿಕೆ; ದೂರು ದಾಖಲು

07:47 PM Oct 31, 2024 | Team Udayavani |

ಉಡುಪಿ: ನ್ಯಾಯವಾದಿಯೊಬ್ಬರಿಗೆ ಜೀವಬೆದರಿಕೆ ಹಾಕಿದ ಘಟನೆ ಉಡುಪಿಯಲ್ಲಿ ನಡೆದಿದೆ.

Advertisement

ನ್ಯಾಯವಾದಿ ರವಿಪ್ರಸಾದ ಅವರು 1ನೇ ಎಸಿಜೆ ಮತ್ತು ಜೆಎಂಎಫ್ಸಿ ಉಡುಪಿ ನ್ಯಾಯಾಲಯದಲ್ಲಿ ಕಕ್ಷಿದಾರನ ಪರವಾಗಿ ದಾವೆ ಹೂಡಿದ್ದು, ಪ್ರಕರಣದಲ್ಲಿ ನ್ಯಾಯಾಲಯವು ಅ. 21ರಂದು ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿತ್ತು. ಇದಕ್ಕೆ ದಾವೆಯ ಪ್ರತಿವಾದಿಯಾದ ವಿಶ್ವಕಿರಣ್‌ ಎಂಬಾತ ಅ. 26ರಂದು ರವಿಪ್ರಸಾದ ಅವರಿಗೆ ಹಲವಾರು ಬಾರಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ರವಿಪ್ರಸಾದ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next