Advertisement

ಶಾಲೆಗಳಲ್ಲಿ ಕರಾಟೆ ತರಬೇತಿಗೆ ಗಂಭೀರ ಚಿಂತನೆ

10:50 PM Dec 16, 2019 | Lakshmi GovindaRaj |

ಬೆಂಗಳೂರು: ವಿದ್ಯಾರ್ಥಿನಿಯರಿಗೆ ರಕ್ಷಣೆಯ ಜತೆಗೆ ಆತ್ಮವಿಶ್ವಾಸ ಹೆಚ್ಚಿಸಲು ಶಾಲೆಗಳಲ್ಲಿ ಕರಾಟೆ ತರಬೇತಿ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಲಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

Advertisement

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾ ಖೆಯ ಕಚೇರಿಯಲ್ಲಿ ಸೋಮವಾರ ವಿದ್ಯಾರ್ಥಿಗಳೊಂದಿಗೆ ನಡೆಸಿದ ಫೋನ್‌-ಇನ್‌ ಸಂವೇದನಾ ಕಾರ್ಯ ಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಹೇರೂರಿನ 10ನೇ ತರಗತಿ ವಿದ್ಯಾರ್ಥಿನಿ ಸುಚಿತಾ ಮಾತನಾಡಿ, ಮಲೆನಾಡು ಭಾಗದಲ್ಲಿ ಸಂಜೆ ಶಾಲೆ ಬಿಟ್ಟು ಮನೆಗೆ ಹೋಗುವಾಗ ಕಾಡಿನ ಮಧ್ಯೆ ಹೋಗ ಬೇಕಾಗುತ್ತದೆ.

ಹೀಗಾಗಿ ಕನಿಷ್ಠ ವಾರಕ್ಕೊಮ್ಮೆಯಾದರೂ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಿದರೆ, ಸ್ವಯಂ ರಕ್ಷಣೆಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದಳು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಗತ್ಯವಿರುವ ಕಡೆ ಕ್ಲಸ್ಟರ್‌ ಮಟ್ಟದಲ್ಲಿ ಒಬ್ಬ ಕರಾಟೆ ಶಿಕ್ಷಕರ ನೇಮಕಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. 7ನೇ ತರಗತಿ ಪರೀಕ್ಷೆ ಮಾಡಬೇಕೇ, ಬೇಡವೇ ಎಂದು ವಿದ್ಯಾರ್ಥಿನಿಯೊಬ್ಬಳಿಗೆ ಸಚಿವರು ಮರು ಪ್ರಶ್ನಿಸಿದಾಗ, ಪರೀಕ್ಷೆ ನಡೆಸುವುದು ಒಳ್ಳೆಯದು.

ಇದರಿಂದ 10ನೇ ತರಗತಿಯಲ್ಲಿ ಪಬ್ಲಿಕ್‌ ಪರೀಕ್ಷೆ ಭಯ ದೂರ ಮಾಡಲು ಸಾಧ್ಯ ಎಂದಳು. ಇದೇ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ಪ್ರತಿಕ್ರಿಯಿಸಿ, ಇದರಿಂದ ಪರೀಕ್ಷಾ ಭಯ ಹೆಚ್ಚಾಗುತ್ತದೆ. ಹೀಗಾಗಿ ಮಾಡುವುದು ಬೇಡ ಎಂದು ಪ್ರತಿಕ್ರಿಯಿಸಿದ. ಈ ಸಂಬಂಧ ಶೀಘ್ರ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಒಂದೊಮ್ಮೆ ಪಬ್ಲಿಕ್‌ ಪರೀಕ್ಷೆ ಮಾಡಿದರೂ, ಯಾರನ್ನೂ ಅನುತ್ತೀರ್ಣ ಗೊಳಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ತಮಗೆ ಅತಿಥಿ ಶಿಕ್ಷಕರ ನೇಮಕ ತುಂಬಾ ತಡ ವಾಗುವುದರಿಂದ ಪೋರ್ಷನ್‌ ಮುಗಿಯುವುದು ತೊಂದರೆಯಾಗುತ್ತದೆಂಬ ಹುಂಚದಟ್ಟೆಯ ವಿದ್ಯಾ ರ್ಥಿನಿ ಹರ್ಷಿತಾಗೆ ಪ್ರತಿಕ್ರಿಯಿಸಿದ ಸಚಿವರು, ಜೂನ್‌1ರಿಂದಲೇ ಅತಿಥಿ ಶಿಕ್ಷಕರ ನೇಮಕಕ್ಕೆ ಈಗಾಗಲೇ ಅದೇಶ ನೀಡಲಾಗಿದೆ ಎಂದರು. “ಕ್ಷೀರಭಾಗ್ಯ ಹಾಲು ರುಚಿಯಾಗಿಲ್ಲ’ ಎಂದ ವಿದ್ಯಾರ್ಥಿನಿಗೆ ಉತ್ತರಿಸಿದ ಸಚಿವರು, ಹಾಲನ್ನು ಇನ್ನಷ್ಟು ರುಚಿ ಮತ್ತು ಶಕ್ತಿವರ್ಧಕ ವಾಗಿಸಲು ಸತ್ಯಸಾಯಿ ಅನ್ನಪೂರ್ಣೇಶ್ವರಿ ಟ್ರಸ್ಟ್‌ನ ಸಾಯಿ  ಶ್ಯೂìನ್ನು ಹಾಲಿನ ಜತೆ ಸೇರಿಸಿ ನೀಡ ಲಾಗುವುದು. ಈ ಸಂಬಂಧ ಅಗತ್ಯ ಕ್ರಮ ತೆಗೆದು ಕೊಳ್ಳಲು ಅಧಿಕಾರಿಗಳಿಗೂ ಸೂಚನೆ ನೀಡಿದರು.

Advertisement

ಚಳ್ಳಕೆರೆ ತಾಲೂಕಿನ ಹನುಮಂತನಹಳ್ಳಿಯ ಪ್ರವೀಣ್‌ ಕುಮಾರ್‌ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಅಲಭ್ಯತೆ ಕುರಿತು ಕೇಳಿದ ಪ್ರಶ್ನೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಪ್ರತಿವರ್ಷವೂ 10 ಸಾವಿರ ಶಿಕ್ಷಕರ ನೇಮಕಕ್ಕೆ ಆರ್ಥಿಕ ಇಲಾಖೆ ಅನು ಮೋದನೆ ನೀಡಿದ್ದು, ಮುಂದಿನ ದಿನಗಳಲ್ಲಿ ಖಾಲಿ ಹುದ್ದೆ ಗಳನ್ನು ಭರ್ತಿ ಮಾಡಲಿದ್ದೇವೆ. ಈಗಾಗಲೇ ನೇಮ ಕಾತಿ ಕಾರ್ಯ ನಡೆಯುತ್ತಿದೆ. ಹಾಗೆಯೇ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವಾಗ ಸರ್ಕಾರಿ ಶಾಲೆಗಳಿಗೆ ತೊಂದರೆ ಯಾಗದಂತೆ ಕಟ್ಟನಿಟ್ಟಿನ ಕ್ರಮ ಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಆರ್‌ಎಂಎಸ್‌ಎ ಶಾಲೆ ಕಟ್ಟಡ ಅಪೂರ್ಣವಾಗಿವೆ ಎಂದು ಬಳ್ಳಾರಿ ಜಿಲ್ಲೆಯ ಕೆ.ವೀರಾಪುರದ ಹುಲಗಪ್ಪ ಗಮನಸೆಳೆದಾಗ, ರಾಜ್ಯಾದ್ಯಂತ ಆರ್‌ಎಂಎಸ್‌ಎ ಶಾಲೆ ಕಟ್ಟಡ ಗುತ್ತಿಗೆದಾರರು ನಿರ್ಲಕ್ಷ್ಯವಹಿಸಿದ್ದರಿಂದ ತೊಂದರೆಯಾಗಿದ್ದು, ಬೇರೆಯವರಿಗೆ ಗುತ್ತಿಗೆ ನೀಡುವ ಸಂಬಂಧ ಹೊಸ ಟೆಂಡರ್‌ ಕರೆಯುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಸಚಿವರು ಹೇಳಿದರು. ಸಾಶಿಇ ಆಯುಕ್ತ ಡಾ. ಕೆ.ಜಿ. ಜಗದೀಶ್‌, ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಳಾ ಇದ್ದರು.

ಶೀಘ್ರ 2ನೇ ಸೆಟ್‌ ಸಮವಸ್ತ್ರ: ಎರಡನೇ ಸೆಟ್‌ ಸಮವಸ್ತ್ರ ಇನ್ನೂ ಬಂದಿಲ್ಲ ಎಂಬ ಗುಂಡ್ಲುಪೇಟೆ ಕುಮಾರ್‌ ನಾಯ್ಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದಕ್ಕಾಗಿ 94 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. 1ರಿಂದ 8ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಶೀಘ್ರ ಎಸ್‌ಡಿಎಂಸಿ ಮೂಲಕ ಎರಡನೇ ಜತೆ ಸಮವಸ್ತ್ರ ಒದಗಿಸಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next