Advertisement
“ನಾನು ವಿದ್ಯಾರ್ಥಿ ದಿಸೆಯಲ್ಲಿ ಹಾಗೂ ಲಾಯರ್ ಆಗಿದ್ದಾಗ ಮದ್ಯಪಾನ ಮಾಡಿದ್ದೇನೆ. ಹೀಗಾಗಿ ಈ ಪ್ರಶಸ್ತಿ ಪ್ರದಾನ ಮಾಡಲು ನನಗೆ ನೈತಿಕತೆ ಇಲ್ಲ’ ಎಂದರು. ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಗಂಭೀರ ಚಿಂತನೆ ನಡೆಸುತ್ತೇನೆ. ಆದರೆ, ಒಂದು ರಾಜ್ಯದಲ್ಲಿ ನಿಷೇಧಿಸುವುದರಿಂದ ಪರಿಣಾಮ ಬೀರುವುದಿಲ್ಲ. ಬದಲಿಗೆ ಮದ್ಯವ್ಯಸನಿಗಳು ಪಕ್ಕದ ರಾಜ್ಯಗಳಿಂದ ತಂದು ಕುಡಿಯುವವರಿದ್ದಾರೆ. ಕರ್ನಾಟಕದಲ್ಲಿ ಸಾರಾಯಿ ನಿಷೇಧ ಮಾಡಿದ್ದರಿಂದ ಹಳ್ಳಿ ಜನರು ಕುಡಿಯುವುದನ್ನು ಬಿಟ್ಟಿಲ್ಲ. ಜತೆಗೆ ಹಳ್ಳಿಗಳಲ್ಲಿ ಕದ್ದು ಮದ್ಯ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಇಡೀ ದೇಶದಲ್ಲಿ ಮದ್ಯಪಾನ ನಿಷೇಧವಾಗಬೇಕು ಎಂದರು.
ನಿಂಗರಾಜ್ ಮಲ್ಲಾಡಿ ಹಾಗೂ ತುಮಕೂರಿನ ಆಚರ್ಡ್ ಸಂಸ್ಥೆ ಅಧ್ಯಕ್ಷ ಡಾ.ಎಚ್.ಜಿ.ಸದಾಶಿವಯ್ಯ ಅವರಿಗೆ ಸಂಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.