Advertisement
ಮೊದಲ ಕ್ವಾರ್ಟರ್ ಫೈನಲ್ ಕದನದಲ್ಲಿ ಸೆರೆನಾ ವಿಲಿಯಮ್ಸ್ ಸಾಕಷ್ಟು ಆತಂಕದ ಕ್ಷಣಗಳನ್ನೆದುರಿಸಿದರೆ, ವಿಕ್ಟೋರಿಯಾ ಅಜರೆಂಕಾ ಸುಲಭ ಜಯ ಸಾಧಿಸಿದರು. ಇದರೊಂದಿಗೆ ಸೆರೆನಾ ಸತತ 11ನೇ ಸಲ ತವರಿನ ಕೂಟದ ಉಪಾಂತ್ಯ ತಲುಪಿ ದಂತಾಯಿತು. ಇನ್ನೊಂದೆಡೆ ಅಜರೆಂಕಾ 2013ರ ಬಳಿಕ ಮೊದಲ ಸಲ ನ್ಯೂಯಾರ್ಕ್ ಕೂಟದ ಉಪಾಂತ್ಯ ಪ್ರವೇಶಿಸಿದ್ದಾರೆ.
Related Articles
ವಿಕ್ಟೋರೊಯಾ ಅಜರೆಂಕಾ ಅವರದು “ಈಸೀ ವಿಕ್ಟರಿ’. ಅವರು 6-1, 6-0 ಅಂತರದಿಂದ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಅವರನ್ನು ಸೋಲಿನ ಬಲೆಗೆ ಕೆಡವಿದರು.
Advertisement
23ನೇ ಮುಖಾಮುಖಿಸೆ. 26ರಂದು 39ನೇ ವರ್ಷಕ್ಕೆ ಕಾಲಿಡಲಿರುವ ಸೆರೆನಾ ಈವರೆಗೆ 6 ಯುಎಸ್ ಓಪನ್ ಕಿರೀಟ ಏರಿಸಿಕೊಂಡಿದ್ದಾರೆ. ಕಳೆದೆರಡು ವರ್ಷ ಫೈನಲ್ ಪ್ರವೇಶಿಸಿಯೂ ಪ್ರಶಸ್ತಿ ವಂಚಿತರಾಗಿದ್ದರು. 2007ರ ಬಳಿಕ ಅವರಿಲ್ಲಿ ಸೆಮಿಫೈನಲ್‌ಗಿಂತ ಮೊದಲು ಸೋತದ್ದಿಲ್ಲ. ಅಂದು ಕ್ವಾರ್ಟರ್ ಫೈನಲ್‌ನಲ್ಲಿ ಜಸ್ಟಿನ್ ಹೆನಿನ್‌ಗೆ ಶರಣಾಗಿದ್ದರು. ಇದು ಸೆರೆನಾ-ಅಜರೆಂಕಾ ನಡುವಿನ 23ನೇ ಮುಖಾಮುಖಿ. ಸೆರೆನಾ 18-4ರ ಭರ್ಜರಿ ಮುನ್ನಡೆಯಲ್ಲಿದ್ದಾರೆ. ಇದರಲ್ಲಿ 2 ಗೆಲುವು 2012ರ ಹಾಗೂ 2013ರ ಯುಎಸ್ ಓಪನ್ ಫೈನಲ್‌ನಲ್ಲಿ ಒಲಿದಿತ್ತು.