Advertisement
ಬುಧವಾರ ಎರಡನೇ ಸುತ್ತಿನಲ್ಲಿ ಸ್ವೆತಾನಾ ಪಿರಂಕೋವಾ ವಿರುದ್ಧ ಆಡಬೇಕಿದ್ದ ಅವರು, ತೀವ್ರ ಹಿಮ್ಮಡಿ ನೋವಿನಿಂದ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಈ ವರ್ಷ ಇನ್ನಾವುದೇ ಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
Related Articles
ವಿಶ್ವದ ನಂ. 10 ಆಟಗಾರ್ತಿ, ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ ಅವರ ಫ್ರೆಂಚ್ ಓಪನ್ ಅಭಿಯಾನ ದ್ವಿತೀಯ ಸುತ್ತಿಗೆ ಕೊನೆಗೊಂಡಿದೆ. ವನಿತಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಅವರನ್ನು ಸ್ಲೊವಾಕಿಯಾದ ಅನ್ನಾ ಕ್ಯಾರೋಲಿನಾ ಶ್ಮಿಡ್ಲೋವಾ 6-2, 6-2 ಅಂತರದಿಂದ ಪರಾಭವಗೊಳಿಸಿದರು. ಅಜರೆಂಕಾ ಕಳೆದ ಯುಎಸ್ ಓಪನ್‌ನಲ್ಲಿ ಫೈನಲ್ ತನಕ ಸಾಗಿದ್ದರು.
Advertisement
ಮೂರಕ್ಕೇರಿದ ವಾವ್ರಿಂಕ3 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಸಾಧಕ ಸ್ಟಾನಿಸ್ಲಾಸ್ ವಾವ್ರಿಂಕ ಪುರುಷರ ಸಿಂಗಲ್ಸ್ ವಿಭಾಗದ 3ನೇ ಸುತ್ತು ಪ್ರವೇಶಿಸಿದ್ದಾರೆ. ಅವರು ಜರ್ಮನಿಯ ಡೊಮಿನಿಕ್ ಕೋಫರ್ ವಿರುದ್ಧ 6-3, 6-2, 3-6, 6-1 ಅಂತರದ ಜಯ ಸಾಧಿಸಿದರು. ರಶ್ಯದ 13ನೇ ಶ್ರೇಯಾಂಕದ ಆಟಗಾರ ಆ್ಯಂಡ್ರೆ ರುಬ್ಲೇವ್ ಅಮೆರಿಕದ ಸ್ಯಾಮ್ ಕ್ವೆರ್ರಿ ವಿರುದ್ಧ ಮೊದಲೆರಡು ಸೆಟ್ ಕಳೆದುಕೊಂಡೂ 5 ಸೆಟ್‌ಗಳ ಕಾದಾಟದಲ್ಲಿ ಗೆದ್ದು ದ್ವಿತೀಯ ಸುತ್ತು ಪ್ರವೇಶಿಸಿದರು. 3 ಗಂಟೆ, 17 ನಿಮಿಷಗಳ ತನಕ ನಡೆದ ಈ ಮುಖಾಮುಖೀಯಲ್ಲಿ ರುಬ್ಲೇವ್ 6-7 (5-7), 6-7 (4-7), 7-5, 6-4, 6-3 ಅಂತರದ ಮೇಲುಗೈ ಸಾಧಿಸಿದರು