Advertisement
ತನ್ನ ದೇಶದವರೇ ಆದ ನಿಕೋಲೆ ಗಿಬ್ಸ್ ಅವರನ್ನು 6-1, 6-3 ನೇರ ಸೆಟ್‌ಗಳಿಂದ ಕೆಡಹಿದ ಸೆರೆನಾ ತನ್ನ ಅಕ್ಕ ವೀನಸ್ ಜತೆ ನಾಲ್ಕನೇ ಸುತ್ತಿಗೇರಿದರು. ಕಳೆದ 17 ಆಸ್ಟ್ರೇಲಿಯನ್ ಓಪನ್ ಕೂಟಗಳಲ್ಲಿ ಸೆರೆನಾ 14ನೇ ಬಾರಿ ನಾಲ್ಕನೇ ಸುತ್ತಿಗೇರಿದ ಸಾಧನೆ ಮಾಡಿದ್ದಾರೆ. ನಾಲ್ಕನೇ ಸುತ್ತಿನಲ್ಲಿ ಅವರು 16ನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಬಾಬೊìರಾ ಸ್ಟ್ರೈಕೋವಾ ಅವರನ್ನು ಎದುರಿಸಲಿದ್ದಾರೆ. ಸ್ಟ್ರೆಕೋವಾ ಇನ್ನೊಂದು ಪಂದ್ಯದಲ್ಲಿ 21ನೇ ಶ್ರೇಯಾಂಕದ ಕ್ಯಾರೋಲಿನ್ ಗಾರ್ಸಿಯಾ ಅವರನ್ನು ಎದುರಿಸಲಿದ್ದಾರೆ.
ಅಮೋಘ ಆಟದ ಪ್ರದರ್ಶನ ನೀಡುತ್ತಿರುವ ಗ್ರೇಟ್ ಬ್ರಿಟನ್‌ನ ಜೋಹಾನಾ ಕೊಂಟಾ ಅವರು ಮಾಜಿ ನಂಬರ್ ವನ್ ಕ್ಯಾರೋಲಿನ್ ವೋಜ್ನಿಯಾಕಿ ಅವರನ್ನು ನೇರ ಸೆಟ್‌ಗಳಿಂದ ಉರುಳಿಸಿ ನಾಲ್ಕನೇ ಸುತ್ತಿಗೇರಿದರು. ಅಲ್ಲಿ ಅವರು ರಶ್ಯದ ಏಕ್ತರೀನಾ ಮಕರೋವಾ ಅವರ ಸವಾಲನ್ನು ಎದುರಿಸಲಿದ್ದಾರೆ.
Related Articles
Advertisement
ನಾನಿಂದು ಉನ್ನತ ಮಟ್ಟದ ಟೆನಿಸ್ ಆಟವಾಡಿದೆ. ವೋಜ್ನಿಯಾಕಿ ನಿಜ ವಾಗಿಯೂ ನಾವು ಉತ್ತಮ ಟೆನಿಸ್ ಆಟವಾಡುವಂತಹ ಕೆಲಸ ನೀಡಿದ್ದಾರೆ. ನನ್ನ ಆಟದ ಮಟ್ಟ ನೀಡಿ ಖುಷಿಯಾಯಿತು ಎಂದು ಪಂದ್ಯದ ಬಳಿಕ ಕೊಂಟಾ ನುಡಿದರು. ಕೊಂಟಾ ಈ ಹಿಂದೆ ಒಮ್ಮೆಯೂ ವೋಜ್ನಿಯಾಕಿ ಅವರನ್ನು ಎದುರಿಸಿಲ್ಲ. ಸಿಬುಲ್ಕೋವಾ ಪತನ
ಮೂರನೇ ಸುತ್ತಿನ ಮ್ಯಾರಥಾನ್ ಪಂದ್ಯದಲ್ಲಿ ರಶ್ಯದ ಡಾರ್ಕ್ ಹಾರ್ಸ್ ಏಕ್ತರೀನಾ ಮಕರೋವಾ ಅವರು ಡೊಮಿನಿಕಾ ಸಿಬುಲ್ಕೋವಾ ಅವರನ್ನು ಕೆಡಹಿ ಮುನ್ನಡೆದಿದ್ದಾರೆ. ಸಿಬುಲ್ಕೋವಾ ಸೋತ ಪ್ರಮುಖ ಆಟಗಾರ್ತಿಯರ ಪಟ್ಟಿಗೆ ಸೇರಿಕೊಂಡಿದ್ದಾರೆ. ಈ ಹಿಂದೆ ಡಬ್ಲ್ಯುಟಿಎ ಫೈನಲ್ಸ್ ಚಾಂಪಿಯನ್ ಅಗ್ನಿàಸ್ಕಾ ರಾದ್ವಂಸ್ಕಾ ಮ ತ್ತು ನಾಲ್ಕನೇ ಶ್ರೇಯಾಂಕದ ಸಿಮೋನಾ ಹಾಲೆಪ್ ಮೊದಲ ವಾರದಲ್ಲಿ ಸೋತು ಹೊರಬಿದ್ದಿದ್ದರು. ಸುಮಾರು ಮೂರು ತಾಸುಗಳ ಹೋರಾಟ ದಲ್ಲಿ ಮಕರೋವಾ ಅವರು 6-2, 6-7 (3-7), 6-3 ಸೆಟ್‌ಗಳಿಂದ ಸಿಬುಲ್ಕೋವಾ ಅವರನ್ನು ಉರುಳಿಸಿದರು. ಮಕರೋವಾ ಸತತ ಏಳನೇ ಬಾರಿ ಇಲ್ಲಿ ನಾಲ್ಕನೇ ಸುತ್ತು ತಲುಪಿದ್ದಾರೆ. 2015ರಲ್ಲಿ ಸೆಮಿಫೈನಲ್ ತಲುಪಿದ್ದ ಮಕರೋವಾ ಮರಿಯಾ ಶರಪೋವಾಗೆ ಶರಣಾಗಿದ್ದರು. ನಾಲ್ಕನೇ ಸುತ್ತಿನಲ್ಲಿ ಅವರು ಜೋಹಾನಾ ಕೊಂಟಾ ಸವಾಲನ್ನು ಎದುರಿಸಲಿದ್ದಾರೆ. ಇದೊಂದು ಅದ್ಭುತ ಪಂದ್ಯ ಮತ್ತು ಹೋರಾಟವಾಗಿದೆ. ಇದು ನನ್ನ ಫೇವರಿಟ್ ಗ್ರ್ಯಾನ್ ಸ್ಲಾಮ್ ಮತ್ತು ಇಲ್ಲಿಗೆ ಉಳಿದು ಕೊಳ್ಳಲು ಬಯಸಿದ್ದೇನೆ ಎಂದು ಮಕರೋವಾ ತಿಳಿಸಿದರು.