Advertisement
ಇತ್ತೀಚಿನ ದಿನಗಳಲ್ಲಿ ಬಳಕೆದಾರರು ಬಳಸುತ್ತಿರುವ ಸರಕುಗಳಿಂದ ಆರಂಭವಾಗಿ ವಾಸಿಸುತಿರುವ ಕಟ್ಟಡಗಳವರೆಗೂ ಸುರಕ್ಷತೆಯನ್ನು ಕಡೆಗಣಿಸಿರುವುದು ಕಂಡು ಬರುತ್ತದೆ. ರಸ್ತೆ ಮತ್ತು ಕಟ್ಟಡಗಳ ಅಪಘಾತಗಳ ವಿಷಯ ಸಾಕಷ್ಟು ಬೆಳಕಿಗೆ ಬರುವಂತೆ ಇತರೆ ಸುರಕ್ಷಿತವಲ್ಲದ ವಿಷಯ ಬೆಳಕಿಗೆ ಬರುವುದಿಲ್ಲ. ಉದಾಹರಣೆಗೆ ಮಕ್ಕಳ ಆಟದ ವಸ್ತುಗಳು, ಮನೆಯೊಳಗೆ ಉಪಯೋಗಿಸುವ ಪೇಯಿಂಟ್, ಬಾತ್‌ರೂಂ ಮತ್ತು ಟಾಯ್ಲೆಟ್ ಕ್ಲೀನರ್, ವಿದ್ಯುತ್ ಉಪಕರಣಗಳು ಮತ್ತು ವಿದ್ಯುತ್ ತಂತಿ, ಸೌಂದರ್ಯ ವರ್ಧಕಗಳು ಇತ್ಯಾದಿ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದರೊಟ್ಟಿಗೆ ಬಳಕೆದಾರರು ಮನೋರಂಜನೆಗಾಗಿ ಉಪಯೋಗಿಸುವ ಉಪಕರಣಗಳು, ಸಾಧನಗಳು ಸಹ ಸುರಕ್ಷಿತವಲ್ಲ ಎಂದು ತಿಳಿದುಬಂದಿದೆ. ಕಟ್ಟಡ ಕುಸಿತ, ಅಸಮರ್ಪಕ ಲಿಫ್ಟ್, ಜಯಂಟ್ ವೀಲ್, ಈಜುವ ಕೊಳ, ಪಾರ್ಕ್ ಮತ್ತು ಉದ್ಯಾನವನದಲ್ಲಿರುವ ಉಪಕರಣಗಳಿಂದ ಗಾಯಗೊಂಡ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತದೆ. ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಉಪ್‌ಹಾರ್ ಚಿತ್ರಮಂದಿರದ ಘಟನೆ, ಭೂಪಾಲ್ ದುರಂತ ಇತ್ಯಾದಿಗೆ ಸಿಗುವಷ್ಟು ಪ್ರಚಾರ ತಾಲ್ಲೂಕು ಅಥವಾ ಗ್ರಾಮಾಂತರ ಪ್ರದೇಶದಲ್ಲಿ ನಡೆಯುವ ಅವಘಡಗಳಿಗೆ ಸಿಗುವುದಿಲ್ಲ.
Related Articles
Advertisement
ಮೊದಲನೆಯದಾಗಿ ಸಾರ್ವಜನಿಕರು ಬಳಸುವ ವಸ್ತುಗಳು ಮತ್ತು ಸರಕುಗಳಿಂದ ಉಂಟಾಗಬಹುದಾದ ಅಪಾಯಗಳಿಂದ ಅವರನ್ನು ರಕ್ಷಿಸುವುದು. ಮಾರಾಟವಾಗುತ್ತಿರುವ ಯಾವುದಾದರು ವಸ್ತು ಹಾನಿಕರ ಎಂದು ತಿಳಿದುಬಂದಲ್ಲಿ ಅದನ್ನು ಮಾರುಕಟ್ಟೆಯಿಂದ ಬಹಿಷ್ಕರಿಸುವುದೂ ಸೇರಿದೆ. ಆಯೋಗವು ಮತ್ತೂಂದು ರೀತಿಯಲ್ಲಿ ಬಳಕೆದಾರರ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ. ದಿನನಿತ್ಯದ ಸರಕುಗಳ ಬಗ್ಗೆ ತುಲನಾತ್ಮಕ ವರದಿಯನ್ನು ಪ್ರಕಟಿಸಿ ಅದರ ಮೂಲಕ ಬಳಕೆದಾರರಲ್ಲಿ ಜಾಗೃತಿ ಉಂಟು ಮಾಡುತ್ತದೆ. ಆಯೋಗವು ನೀಡುವ ವರದಿಯನ್ನು ಆಧರಿಸಿ ಬಳಕೆದಾರರು ಸರಕುಗಳನ್ನು ಖರೀದಿಸುವ ಅಭ್ಯಾಸ ಬೆಳಸಿಕೊಂಡಿದ್ದಾರೆ. ಒಂದು ವೇಳೆ ವರದಿಯ ಪ್ರಕಾರ ಯಾವುದೆ ವಸ್ತು/ಸರಕು ಜನರಿಗೆ ಮಾರಕ ಎಂದು ತಿಳಿದ ಕೂಡಲೆ ಅದನ್ನು ಬಹಿಷ್ಕರಿಸುತ್ತಾರೆ. ತಯಾರಕರೇ ಅದನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುತ್ತಾರೆ. ಮಾರುಕಟ್ಟೆಯಲ್ಲಿ ಆ ಕಂಪನಿಗಳ ಷೇರ್ ಮೌಲ್ಯ ಕುಸಿಯುತ್ತದೆ.
ಮೂರನೆಯದಾಗಿ, ಆಯೋಗವು ವಸ್ತು ಮತ್ತು ಸರಕುಗಳಿಗೆ ಹೊಂದುವ ಮಾನಕಗಳನ್ನು ಸಿದ್ಧಪಡಿಸುತ್ತದೆ. ನಮ್ಮಲ್ಲಿ ಬಿಐಎಸ್ ಇದ್ದಂತೆ. ಕೆಲವೊಂದು ಮಾನಕಗಳನ್ನು ಖಡ್ಡಾಯಗೊಳಿಸಲಾಗಿದೆ. ಆದರೆ ಅಲ್ಲಿಗೂ ನಮ್ಮಲ್ಲಿಗೂ ಇರುವ ವ್ಯತ್ಯಾಸ ಇರುವುದು ಈ ಮಾನಕಗಳ ಅನುಷ್ಠಾನದಲ್ಲಿ. ಬಾಟಲ್ ನೀರಿಗೆ ಮಾನಕ ಖಡ್ಡಾಯಗೊಳಿಸಲಾಗಿದೆ. ಆದರೆ ಮಾನಕವಲ್ಲದ ಬಾಟಲ್ ನೀರು ದೊರೆಯುತ್ತಿಲ್ಲವೆ? ಮಾನಕವನ್ನೆ ತಪ್ಪುತಪ್ಪಾಗಿ ಮುದ್ರಿಸಿ ಬಳಕೆದಾರರನ್ನು ವಂಚಿಸುತ್ತಿರುವ ವರ್ತಕರಿಗೆ ಏನೆನ್ನಬೇಕು. ಬಿಐಎಸ್ ನೀಡುವ ಚಿಹ್ನೆಯನ್ನೇ ಕನಿಷ್ಟ ಆರು ರೀತಿಯಲ್ಲಿ ಬಳಸಿ ಜನರನ್ನು ವಂಚಿಸಲಾಗುತ್ತಿದೆ ಎಂಬ ವರದಿ ಇದೆ. ನಿಖರವಾದ ಬಿಐಎಸ್ ಚಿಹ್ನೆ ಯಾವುದು? ನಕಲಿ ಚಿನ್ನೆ ಯಾವುದು? ಎಂಬುದನ್ನು ಗುರುತಿಸುವುದೇ ಕಷ್ಟವಾಗಿದೆ. ನಾಲ್ಕನೆಯದಾಗಿ ಸಿಪಿಎಸ್‌ಸಿ ತಯಾರಕರು, ಉತ್ಪಾದಕರು ಮತ್ತು ವಿತರಕರ ಮನವೊಲಿಸಿ, ಇಚ್ಛೆಯಿಂದ ಮಾನಕಗಳಂತೆ ವಸ್ತುಗಳನ್ನು ತಯಾರಿಸಲು ಪ್ರೇರೇಪಣೆ ನೀಡುತ್ತದೆ. ಈ ಆಯೋಗ ಪ್ರಕಟಿಸುವ ವರದಿಗಳ ಹಿನ್ನೆಲೆಯಲ್ಲಿ ಅನೇಕ ಮಾನಕಗಳು ಸಿದ್ಧವಾಗುತ್ತದೆ. ಯಾವ ವಸ್ತು/ಸರಕಿನಿಂದ ಅಪಾಯ ಸಂಭವಿಸಿತು, ಯಾವ ಬ್ರಾಂಡ್ ಸರಕು, ತಯಾರಕರು ಯಾರು, ಘಟನಾ ಸ್ಥಳ, ಬಳಕೆದಾರರಿಗೆ ಆದ ನೋವು, ನಷ್ಟ, ಅಪಘಾತಕ್ಕೆ ಕಾರಣ ಇತ್ಯಾದಿ ಎಲ್ಲವನ್ನೂ ಬಳಕೆದಾರರಿಗೆ ಅರ್ಥವಾಗುವ ರೀತಿಯಲ್ಲಿ ವರದಿಯನ್ನು ಪ್ರಕಟಿಸುತ್ತದೆ.
ಕೇಂದ್ರ ಸರ್ಕಾರದ ಮುಂದಿರುವ ಗ್ರಾಹಕ ಸಂರಕ್ಷಣಾ ಮಸೂದೆ 2015ರಲ್ಲಿ ಸುರಕ್ಷತೆ ಬಗ್ಗೆ ಗಮನ ನೀಡಲಾಗಿದೆ. ಸುರಕ್ಷತೆಗೆ ಪ್ರತ್ಯೇಕವಾದ ಆಯೋಗದ ರಚನೆ ಬಗ್ಗೆ ಉಲ್ಲೇಖವಿಲ್ಲದಿದ್ದರೂ, ಬಳಕೆದಾರರ ಸಂರಕ್ಷಣಾ ಆಯೋಗ ಸ್ಥಾಪಿಸುವ ಉಲ್ಲೇಖವಿದೆ. ಇದರಡಿಯಲ್ಲಿ ಸುರಕ್ಷತೆಗೆ ಪ್ರತ್ಯೇಕವಾದ ಘಟಕ ಸ್ಥಾಪನೆಯಾಗುವ ಸಾಧ್ಯತೆ ಇದೆ. ಸಂರಚನೆ ಹೇಗೇ ಇರಲಿ, ಬಳಕೆದಾರರ ಸುರಕ್ಷತೆಗೆ ಮಾನ್ಯತೆ ದೊರೆಯುವುದು ಮುಖ್ಯ.
– ವೈ.ಜಿ.ಮುರಳೀಧರನ್ಸದಸ್ಯರು: ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತು, ಭಾರತ ಸರ್ಕಾರ