Advertisement
ಅವರು ಮಂಗಳವಾರ ಬ್ರಹ್ಮಾವರ ದಲ್ಲಿ ನಡೆದ ಕಾಲ್ನಡಿಗೆ ಜಾಥಾ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಸಂಸದರೇ ಮಾದರಿ
ನನಗೆ ಹೊಸ ಕನಸುಗಳು, ಅಭಿವೃದ್ಧಿ ಕಲ್ಪನೆಗಳು ಮಾದರಿಯಾದರೆ ಬಿಜೆಪಿ ಅಭ್ಯರ್ಥಿ ತನಗೆ ಹಾಲಿ ಸಂಸದರೇ ಮಾದರಿ ಎಂದು ಹೇಳಿದ್ದಾರೆ. ಇದರರ್ಥ ಚುನಾವಣೆಯಲ್ಲಿ ಗೆದ್ದರೆ ಅಭಿವೃದ್ಧಿ ಮಾಡದಿರುವುದು, ಕ್ಷೇತ್ರದ ಕಡೆ ಮುಖ ಹಾಕದಿರುವುದು ಎನ್ನುವುದಾಗಿದೆ. ಇಂತಹ ಜನಪ್ರತಿನಿಧಿಗಳು ನಿಮಗೆ ಬೇಕಾ ಎಂದು ಜನರೇ ನಿರ್ಧಾರ ಮಾಡಿ ಎಂದು ಹೆಗ್ಡೆ ತಿಳಿಸಿದರು.
Related Articles
ಮಸೂದೆ ಮಂಡನೆ
ಶಿಕ್ಷಕರ ಕ್ಷೇತ್ರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತದಾನದ ಹಕ್ಕು ಇರಲಿಲ್ಲ. ಹೀಗಾಗಿ ಅವರಿಗೆ ಮತದಾನದ ಅವಕಾಶ ಸಿಗಬೇಕು ಎನ್ನುವ ಬಿಲ್ ಮತ್ತು ವ್ಯಕ್ತಿಯೋರ್ವನು ಯಾವುದೇ ಊರಿನಲ್ಲಿದ್ದರೂ ತಾನು ಇರುವಲ್ಲಿಂದ ತನ್ನ ಮತಕ್ಷೇತ್ರಕ್ಕೆ ಮತದಾನ ಮಾಡು ವಂತೆ ವ್ಯವಸ್ಥೆ ಮಾಡಬೇಕು ಎನ್ನುವ ಖಾಸಗಿ ಬಿಲ್ ಮಂಡಿಸಿದ್ದೆ. ಅದು ಕಾರ್ಯರೂಪಕ್ಕೆ ಬರಲು ಹೋರಾಟ ಅಗತ್ಯವಿದೆ ಎಂದು ಹೆಗ್ಡೆ ತಿಳಿಸಿದರು.
Advertisement
ಕಾರ್ಯಗತ ಮಾಡುವ ಶಕ್ತಿ ಬೇಕುಯಾವುದೇ ಅಭಿವೃದ್ಧಿ ಕಾಮಗಾರಿ ಯನ್ನು ಮಂಜೂರಾದ ಮೇಲೆ ಅದನ್ನು ಕ್ಷಿಪ್ರವಾಗಿ ಕಾರ್ಯಗತಗೊಳಿಸುವ ಜವಾಬ್ದಾರಿ ಇರುತ್ತದೆ. ನಾನು ಸಂಸದನಾಗಿದ್ದಾಗ ಮೂರು ರಾಷ್ಟ್ರೀಯ ಹೆದ್ದಾರಿ ಮಂಜೂರು ಮಾಡಿದ್ದೆ. ಆದರೆ ದುರದೃಷ್ಟವಶಾತ್ ಹತ್ತು ವರ್ಷ ಕಳೆದರೂ ಆ ಕಾಮಗಾರಿ ಸಂಪೂರ್ಣವಾಗಿಲ್ಲ, ಜತೆಗೆ ಕಲ್ಯಾಣಪುರ ಬಳಿ ರಾಷ್ಟ್ರೀಯ ಹೆದ್ದಾರಿ ದುರವಸ್ಥೆ ಈಗಿನ ಸಂಸದರ ಕಾರ್ಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ತಪ್ಪು ಮತ್ತೆ ಮಾಡಬೇಡಿ ಎಂದರು. ಸಭೆಯಲ್ಲಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಕಾಂಗ್ರೆಸ್ ಮುಖಂಡರಾದ ಭುಜಂಗ ಶೆಟ್ಟಿ, ಮೈರ್ಮಾಡಿ ಅಶೋಕ್ ಶೆಟ್ಟಿ, ಡಾ| ಸುನೀತಾ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ ಮೊದಲಾದವರಿದ್ದರು. ಬೃಹತ್ ಕಾಲ್ನಡಿಗೆ ಜಾಥಾ
ಈ ಸಂದರ್ಭ ಬ್ರಹ್ಮಾವರ ಆಕಾಶವಾಣಿ ಸರ್ಕಲ್‌ನಿಂದ ಒಳಪೇಟೆಯ ಮೂಲಕ ಪೇತ್ರಿ ಸರ್ಕಲ್ ತನಕ ಕಾಲ್ನಡಿಗೆ ಜಾಥಾದ ಮೂಲಕ ಜಯಪ್ರಕಾಶ್ ಹೆಗ್ಡೆ ಮತಯಾಚಿಸಿದರು. ನೂರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು ಅವರೊಂದಿಗೆ ಹೆಜ್ಜೆ ಹಾಕಿದರು. ಜಯಪ್ರಕಾಶ್ ಹೆಗ್ಡೆ ಕೊಡುಗೆ ಶಾಶ್ವತ
ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಸರಕಾರದ ಬೊಕ್ಕಸದಲ್ಲಿದ್ದ ಹಣವನ್ನು ದೇಗುಲ ಇತ್ಯಾದಿಗಳಿಗೆ ಹಂಚಿ ಅಭಿವೃದ್ಧಿ ಮಾಡಿದ್ದೇನೆ ಎನ್ನುವುದು ಅಭಿವೃದ್ಧಿಯಾಗಲಾರದು. ಬ್ರಹ್ಮಾವರ ವಿಧಾನಸಭಾ ಕ್ಷೇತ್ರವಿರುವಾಗ ಜಯಪ್ರಕಾಶ್ ಹೆಗ್ಡೆಯವರು ಕೈಗೊಂಡ ರಸ್ತೆ, ಸೇತುವೆ ಕಾಮಗಾರಿಗಳು, ಮೀನುಗಾರಿಕೆ ಗೆ ನೀಡಿದ ಶಾಶ್ವತ ಯೋಜನೆಗಳು, ಹೊಸ ಜಿಲ್ಲೆ ನಿರ್ಮಾಣ ನಿಜವಾದ ಅಭಿವೃದ್ಧಿ ಹಾಗೂ ಜನಮಾನಸದಲ್ಲಿ ನಿರಂತರವಾಗಿ ಉಳಿಯುವ ಕೊಡುಗೆಗಳಾಗಿವೆ. ಇಂತಹ ಹತ್ತು ಹಲವಾರು ಯೋಜನೆಗಳು ಮತ್ತೆ ಆಗಬೇಕಾದರೆ ಹೆಗ್ಡೆ ಗೆಲ್ಲಬೇಕು ಎಂದರು.