Advertisement

ಮಕ್ಕಳ  ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಗುರುತಿಸಿ

08:44 PM May 25, 2021 | Team Udayavani |

ಚಾಮರಾಜನಗರ: ಜಿಲ್ಲೆಯ130 ಗ್ರಾಮ ಪಂಚಾಯಿತಿಗಳಲ್ಲಿಪರಿಣಾಮಕಾರಿಯಾಗಿ ಕೋವಿಡ್‌ ಮುಕ್ತ ಗ್ರಾಮ ಗುರಿಗೆಕೋವಿಡ್‌ಕಾÂಪ್ಟನ್‌ ಆಂದೋಲನ, ಹಣ್ಣು ತರಕಾರಿ ಮಾರಾಟಅವಧಿ ಕಡಿತ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನುಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಟಾಸ್ಕ್ಪೋರ್ಸ್‌ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿಸಚಿವ ಸುರೇಶ್‌ ಕುಮಾರ್‌ ಗೂಗಲ್‌ ಮೀಟ್‌ ಮೂಲಕ ನಡೆಸಿದ ಜಿಲ್ಲಾಮಟ್ಟದ ಟಾಸ್ಕ್ಪೋರ್ಸ್‌ ಸಭೆಯಲ್ಲಿ ಕೋವಿಡ್‌ ಸೋಂಕುನಿಯಂತ್ರಣ ಸಂಬಂಧ ಜಿಲ್ಲೆಯ ಶಾಸಕರು ಹಾಗೂ ನೋಡಲ್‌ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಲಾಯಿತು.

Advertisement

ಸಚಿವರು ಮಾತನಾಡಿ ಕೋವಿಡ್‌ 3ನೇ ಅಲೆಯಲ್ಲಿ ಮಕ್ಕಳಮೇಲೆಹೆಚ್ಚಿನ ಪರಿಣಾಮಬೀರಬಹುದೆಂದು ತಜ್ಞರು ಎಚ್ಚರಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಈ ಬಗ್ಗೆ ಮುಂಜಾಗ್ರತಾಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕಆಸ್ಪತ್ರೆಯನ್ನು ಗುರುತಿಸಿ ಹಾಸಿಗೆಗಳನ್ನು ಕಾಯ್ದರಿಸಬೇಕುಎಂದು ಅಧಿಕಾರಿಗಳಿಗೆ ಸೂಚಿಸಿದರು.ಡೀಸಿ ಡಾ.ಎಂ.ಆರ್‌. ರವಿ ಮಾತನಾಡಿ, ಈಗಾಗಲೇ ವೈದ್ಯಕೀಯ ಕಾಲೇಜಿನ ನಾಲ್ವರು ಮಕ್ಕಳ ತಜ್ಞರ ತಂಡ 3ನೇ ಅಲೆಸಂಬಂಧ ಅಧ್ಯಯನ ಮಾಡಲು ಸೂಚಿಸಲಾಗಿದೆ. ಮಕ್ಕಳಿಗಾಗಿಯೇ ಕೋವಿಡ್‌ಕೇರ್‌ಕೇಂದ್ರವನ್ನು ಮಾಡುವ ಸಂಬಂಧಕ್ರಮ ವಹಿಸಬಹುದಾಗಿದೆ ಎಂದರು.

ಮಕ್ಕಳ ರಕ್ಷಣೆ ಸಂಬಂಧ ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕು ಎಂದು ಸಚಿವರು ತಿಳಿಸಿದರು.ಸೋಂಕು ತಡೆಗಾಗಿ ಹೋಂ ಐಸೋಲೇಷನ್‌ಗೆ ಅವಕಾಶನೀಡದೇ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲಿಸಬೇಕೆಂಬಮಹತ್ವದ ತೀರ್ಮಾನವನ್ನು ಕಳೆದ ಟಾಸ್ಕ್ಪೋರ್ಸ್‌ ಸಮಿತಿಸಭೆಯಲ್ಲಿ ಕೈಗೊಂಡ ಪರಿಣಾಮ 400 ಹಾಸಿಗೆಗಳಷ್ಟೇಭರ್ತಿಯಾಗಿದ್ದ ಕೋವಿಡ್‌ ಕೇರ್‌ ಸೇಂಟರ್‌ಗಳಲ್ಲಿ ಪ್ರಸ್ತುತ 1ಸಾವಿರಕ್ಕೂ ಹೆಚ್ಚು ಸೋಂಕಿತರು ಇದ್ದಾರೆ.

ಗ್ರಾಮಾಂತರಪ್ರದೇಶಗಳಲ್ಲಿ ಶೇ. 70ರಷ್ಟು ಸೋಂಕು ಹರಡುತ್ತಿದ್ದು, ನಗರಪ್ರದೇಶಗಳಲ್ಲಿ ಸೋಂಕಿತರ ಪ್ರಮಾಣ ಶೇ.30ರಷ್ಟಿದೆ. ಹೀಗಾಗಿಗ್ರಾಮಾಂತರ ಪ್ರದೇಶಗಳಲ್ಲಿ ಹೋಂ ಐಸೋಲೇಷನ್‌ಗೆಅವಕಾಶ ನೀಡದೇ ಕಡ್ಡಾಯವಾಗಿ ಕೋವಿಡ್‌ ಕೇರ್‌ಕೇಂದ್ರಗಳಿಗೆ ದಾಖಲು ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟುಕಟ್ಟುನಿಟ್ಟಾಗಿ ಅನುಸರಿಸಬೇಕೆಂಬ ಒಮ್ಮತದ ನಿರ್ಧಾರವನ್ನುಕಾರ್ಯಪಡೆ ಕೈಗೊಂಡಿತು.

ಶಾಸಕರಾದ ಆರ್‌. ನರೇಂದ್ರ, ಎನ್‌.ಮಹೇಶ್‌, ಸಿ.ಎಸ್‌.ನಿರಂಜನಕುಮಾರ್‌ ಮಾತನಾಡಿ, ಕೋವಿಡ್‌ ನಿಯಂತ್ರಣಸಂಬಂಧ ತಮ್ಮ ಅಭಿಪ್ರಾಯ, ಸಲಹೆ ನೀಡಿದರು.ಎಸ್ಪಿ ದಿವ್ಯಾ ಸಾರಾ ಥಾಮಸ್‌, ಕೋವಿಡ್‌ ಮಾರ್ಗಸೂಚಿಉಲ್ಲಂ ಸಿದ 2400 ವಾಹನಗಳನ್ನುನ ಜಪ್ತಿ ಮಾಡಲಾಗಿದೆ.199 ಎಫ್ಐರ್‌ ದಾಖಲು ಹಾಗೂ ಸಾಮಾಜಿಕ ಅಂತರಕಾಯ್ದುಕೊಳ್ಳದ ವಿರುದ್ಧ 250 ಪ್ರಕರಣ ದಾಖಲಿಸಲಾಗಿದೆಎಂದರು. ಜಿಪಂ ಸಿಇಒ ಹರ್ಷಲ್‌ ಬೋಯರ್‌ ನಾರಾಯಣರಾವ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ,ಎಸಿ ಡಾ. ಗಿರೀಶ್‌ ದಿಲೀಪ್‌ ಬಡೋಲೆ, ಜಿಲ್ಲಾ ಆರೋಗ್ಯಮತ್ತು ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ.ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next