Advertisement
ಈಗಾಗಲೇ 80ಕ್ಕೂ ಅಧಿಕ ಇ-ಬಸ್‌ಗಳು ಬಿಎಂಟಿಸಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ವರ್ಷಾಂತ್ಯದ ಒಳಗೆ ಕೇಂದ್ರ ಸರ್ಕಾರದ ಫೇಮ್-2 ಯೋಜನೆ ಅಡಿ ಇನ್ನೂ 300 ಬಸ್‌ಗಳು ಬಂದಿಳಿಯಲಿವೆ. ಜತೆಗೆ ರಾಜ್ಯ ಸರ್ಕಾರದ ನೆರವಿನೊಂದಿಗೆ ಕೂಡ ಸಂಸ್ಥೆ ಮತ್ತಷ್ಟು ಇ-ಬಸ್ ಗಳನ್ನು ರಸ್ತೆಗಿಳಿಸಲು ಉದ್ದೇಶಿಸಿದೆ. ಜತೆಗೆ ಮುಂಬರುವ ದಿನಗಳಲ್ಲಿ ಬರುವ ವಾಹನಗಳ ಗಾತ್ರ ದೊಡ್ಡದಾಗಿವೆ. ಈ ಎಲ್ಲ ದೃಷ್ಟಿಯಿಂದ ಪ್ರತ್ಯೇಕ ಡಿಪೋಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.
Related Articles
Advertisement
ಸರಾಸರಿ 160 ಕಿ.ಮೀ. ಸಂಚಾರ: ಪ್ರಸ್ತುತ “ಮೆಟ್ರೋ ಸಂಪರ್ಕ ಸೇವೆ’ ರೂಪದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಇ-ಬಸ್‌ಗಳಿಗೆ 180 ಕಿ.ಮೀ. ಗುರಿ ನೀಡಿ, ಅದಕ್ಕೆ ಪೂರಕವಾಗಿ ಮಾರ್ಗಗಳನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ ಸರಾಸರಿ 160 ಕಿ. ಮೀ. ಪೂರೈಸಲಷ್ಟೇ ಸಾಧ್ಯವಾಗುತ್ತಿದೆ. ಇದಕ್ಕೆ ಸಂಚಾರದಟ್ಟಣೆ, ರಸ್ತೆಗಳ ಗುಣಮಟ್ಟ ಸೇರಿದಂತೆ ಹಲವು ಕಾರಣಗಳಿವೆ ಎಂದು ಹೆಸರು ಹೇಳಲಿಚ್ಛಿಸದ ಚಾಲಕರೊಬ್ಬರು ಮಾಹಿತಿ ನೀಡಿದರು.
ಹೊರವಲಯದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಸ್ಮಾರ್ಟ್‌ಸಿಟಿ ಯೋಜನೆ ಅಡಿ ರಸ್ತೆಗಿಳಿದ 9 ಮೀಟರ್ ಉದ್ದದ ಬಸ್‌ಗಳು ದಿನಕ್ಕೆ 180 ಕಿ.ಮೀ. ಕಾರ್ಯಾಚರಣೆ ಮಾಡುವ ಗುರಿ ಹೊಂದಿದ್ದರೆ, ಫೇಮ್-2 ಯೋಜನೆ ಅಡಿ ಬರುವ ಇ- ಬಸ್‌ಗಳಿಗೆ 225 ಕಿ.ಮೀ. ಕ್ರಮಿಸುವ ಗುರಿ ನಿಗದಿಪಡಿಸಲಾಗಿದೆ. ಜತೆಗೆ ಈ ಬಸ್‌ಗಳ ಉದ್ದ 12 ಮೀಟರ್ ಇದ್ದು, ನಗರದ ಕೇಂದ್ರ ಭಾಗಗಳಲ್ಲಿ ನಿಗದಿತ ಕಿ.ಮೀ. ಪೂರೈಸುವುದು ಇವುಗಳಿಗೆ ಕಷ್ಟಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಹೊರವಲಯದಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ.
ಅದರಂತೆ ಮೊದಲ ಹಂತದಲ್ಲಿ ಯಲಹಂಕ ಸುತ್ತಲಿನ ಪ್ರದೇಶಗಳಲ್ಲಿ ಈ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ನಂತರದಲ್ಲಿ ಬಿಡದಿ ಮತ್ತು ಅತ್ತಿಬೆಲೆ ಸುತ್ತಮುತ್ತ ಸೇವೆ ಒದಗಿಸಲಿವೆ. ಇದರಿಂದ ಆದಾಯವೂ ಹೆಚ್ಚು ಬರಲಿದೆ ಎಂಬ ಲೆಕ್ಕಾಚಾರ ಬಿಎಂಟಿಸಿಯದ್ದಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಆಗಸ್ಟ್ ಮೊದಲ ವಾರದಲ್ಲಿ 100 ಬಸ್‌ಗಳು ರಸ್ತೆಗಿಳಿಯಲಿವೆ. ನವೆಂಬರ್ ವೇಳೆಗೆ ಎಲ್ಲ 300 ಬಸ್‌ಗಳು ಬಂದಿಳಿಯಲಿವೆ. ಎಲ್ಲವೂಹವಾನಿಯಂತ್ರಿತರಹಿತವಾಗಿದ್ದು, ಅಶೋಕ್ ಲೈಲ್ಯಾಂಡ್ ಇವುಗಳನ್ನು ಪೂರೈಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 6 ತಿಂಗಳಾದರೂ ಬಿಲ್ ಸಲ್ಲಿಸಿಲ್ಲ!
ನಗರದಲ್ಲಿ ಇ-ಬಸ್‌ಗಳು ಕಾರ್ಯಾರಂಭ ಮಾಡಿ ಆರು ತಿಂಗಳಾಗುತ್ತಿದ್ದರೂ ಗುತ್ತಿಗೆ ಪಡೆದ ಕಂಪನಿ ಇನ್ನೂ ಇದುವರೆಗಿನ ಬಿಲ್ ಸಲ್ಲಿಸಿಲ್ಲ! 80ಕ್ಕೂ ಅಧಿಕ ಬಸ್ ಗಳು ನಿತ್ಯ ಸಂಚರಿಸುತ್ತಿವೆ. ಪ್ರತಿ ಕಿ.ಮೀ.ಗೆ 51.67 ರೂ.ಗಳಂತೆ ಪ್ರತಿ ಬಸ್‌ಗೆ 180 ಕಿ.ಮೀ. ನಿಗದಿಪಡಿಸಿ ಪಾವತಿಸಬೇಕಾಗುತ್ತದೆ. ಅದರಂತೆ ನಿಯಮಿತವಾಗಿ ಗುತ್ತಿಗೆ ಪಡೆದ ಕಂಪನಿ ಬಿಲ್ ಸಲ್ಲಿಸಬೇಕಾಗುತ್ತದೆ. ಆದರೆ, ಇದುವರೆಗೆ ಬಿಲ್ ನೀಡಿಲ್ಲ. ಹಾಗಾಗಿ, ಪಾವತಿ ಆಗಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಿಯಮದ ಪ್ರಕಾರ ಪ್ರತಿ ತಿಂಗಳು ಬಿಲ್ ನೀಡಬೇಕು. ಹೀಗೆ ತಡವಾಗಿ ಬಿಲ್ ಸಲ್ಲಿಸುವುದರಿಂದ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಪ್ರತಿ ತಿಂಗಳು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿದೆ. ವ್ಹೀಲ್‌ಚೇರ್ ವ್ಯವಸ್ಥೆ
ಹೊಸದಾಗಿ ರಸ್ತೆಗಿಳಿಯಲಿರುವ 12 ಮೀ. ಉದ್ದದ ಇ-ಬಸ್‌ನಲ್ಲಿ ಮೊದಲ ಬಾರಿಗೆ ಅಂಗವಿಕಲರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ನಿಲ್ದಾಣಗಳಲ್ಲಿ ಬಸ್ ಏರುವ ಅಂಗವಿಕಲ ಪ್ರಯಾಣಿಕರ ವ್ಹೀಲ್‌ಚೇರ್ ಅನ್ನು ಪ್ರತ್ಯೇಕವಾಗಿ ಇಡುವ ವ್ಯವಸ್ಥೆ ಇದ್ದು, ಆ ಪ್ರಯಾಣಿಕರು ಇಳಿಯುವ ನಿಲ್ದಾಣ ಬರುತ್ತಿದ್ದಂತೆ ಅಟೋಮೆಟಿಕ್ ಆಗಿ ವ್ಹೀಲ್‌ಚೇರ್ ಹೊರಗೆ ಬರುತ್ತದೆ. ಇ-ಬಸ್‌ಗಳಿಗಾಗಿಯೇ ಪ್ರತ್ಯೇಕ ಡಿಪೋ ನಿರ್ಮಿಸಲಾಗುತ್ತಿದೆ. ಅಂದರೆ ಈಗಾಗಲೇ ಇರುವ ಡಿಪೋಗಳನ್ನು ಇ-ಬಸ್‌ಗಳಿಗೆ ಮೀಸಲಿಡಲಾಗುವುದು. ಡೀಸೆಲ್ ಬಸ್‌ಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗು ವುದು. ಒಟ್ಟು ಮೂರು ಡಿಪೋಗಳು ಬರಲಿದ್ದು, ಆಗಸ್ಟ್ ವೇಳೆಗೆ ಯಲಹಂಕ ಘಟಕ ಕಾರ್ಯಾರಂಭ ಮಾಡಲಿದೆ.
●ಎ.ವಿ.ಸೂರ್ಯ ಸೇನ್, ನಿರ್ದೇಶಕರು
(ಮಾಹಿತಿ ತಂತ್ರಜ್ಞಾನ), ಬಿಎಂಟಿಸಿ ●ವಿಜಯಕುಮಾರ ಚಂದರಗಿ