Advertisement

ಹೆಚ್ಚಿದ ವಿದೇಶಿ ಬಂಡವಾಳ, ಇಳಿದ ಕಚ್ಚಾ ತೈಲ: Sensex 161 ಅಂಕ ಜಂಪ್‌

09:47 AM May 04, 2019 | Sathish malya |

ಮುಂಬಯಿ : ವಿದೇಶಿ ಬಂಡವಾಳದ ಒಳ ಹರಿವಿನಲ್ಲಿ ಆಗಿರುವ ಹೆಚ್ಚಳ ಮತ್ತು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಆಗಿರುವ ಇಳಿಕೆಯ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಏರಿಕೆಯನ್ನು ದಾಖಲಿಸಿತು.

Advertisement

ಇಂದು ಬೆಳಗ್ಗೆ 10.50ರ ಸುಮಾರಿಗೆ ಸೆನ್ಸೆಕ್ಸ್‌ 161 ಅಂಕಗಳ ಮುನ್ನಡೆಯನ್ನು ಸಂಪಾದಿಸಿ 39,142.43 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 32.60 ಅಂಕಗಳ ಏರಿಕೆಯೊಂದಿಗೆ 11,757.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಕೋಟಕ್‌ ಮಹೀಂದ್ರ, ಭಾರ್ತಿ ಏರ್‌ಟೆಲ್‌, ಎನ್‌ಟಿಪಿಸಿ, ಟಾಟಾ ಮೋಟರ್‌, ಭಾರ್ತಿ ಇನ್‌ಫ್ರಾಟೆಲ್‌ ಶೇರುಗಳು ಟಾಪ್‌ ಗೇನರ್‌ ಎನಿಸಿಕೊಂಡಿದ್ದವು. ಅದೇ ವೇಳೆ ಎಚ್‌ ಸಿ ಎಲ್‌ ಟೆಕ್‌, ಟಿಸಿಎಸ್‌, ಗ್ರಾಸಿಂ, ವಿಪ್ರೋ, ಟೆಕ್‌ ಮಹೀಂದ್ರ ಟಾಪ್‌ ಲೂಸರ್‌ಗಳಾಗಿದ್ದವು.

ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 13 ಪೈಸೆಗಳ ಚೇತರಿಕೆಯನ್ನು ಕಂಡು 69.24 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next