ಮುಂಬೈ: ಬಾಂಬೆ ಷೇರುಪೇಟೆಯಲ್ಲಿ ಕಳೆದ ವಾರ ನಾಲ್ಕು ದಿನಗಳ ಕಾಲ ಉಂಟಾಗಿದ್ದ ನಿರಾಸೆ ಸೋಮವಾರ ಶಮನವಾಗಿದೆ.
ಸೂಚ್ಯಂಕ ಒಂದೇ ದಿನ 721.13 ಪಾಯಿಂಟ್ಸ್ ಏರಿಕೆಯಾದದ್ದು ಸಂತೋಷ ತಂದುಕೊಟ್ಟಿದೆ. ದಿನಾಂತ್ಯಕ್ಕೆ ಸೂಚ್ಯಂಕ 721.13 ಪಾಯಿಂಟ್ಸ್ ಏರಿಕೆಯಾಗಿ, 60, 566.42ರಲ್ಲಿ ಮುಕ್ತಾಯವಾಗಿದೆ. ಮಧ್ಯಂತರದಲ್ಲಿ 988.49 ಪಾಯಿಂಟ್ಸ್ ಏರಿಕೆಯಾಗಿತ್ತು.
ಶುಕ್ರವಾರ (ಡಿ.23) ಮುಕ್ತಾಯಗೊಂಡಿದ್ದ ವಾರದಲ್ಲಿ 1, 960 ಪಾಯಿಂಟ್ಸ್ ಕುಸಿತಗೊಂಡಿತ್ತು. ಜತೆಗೆ ನಿಫ್ಟಿ ಕೂಡ 613 ಪಾಯಿಂಟ್ಸ್ ಪತನಗೊಂಡಿತ್ತು. ಇನ್ನು ನಿಫ್ಟಿ ಸೂಚ್ಯಂಕ 207.80 ಏರಿಕೆಯಾಗಿ 18,014.60ರಲ್ಲಿ ಮುಕ್ತಾಯವಾಗಿದೆ.
ಏಷ್ಯಾದ ಇತರ ರಾಷ್ಟ್ರಗಳಲ್ಲಿ ಕೂಡ ಷೇರುಪೇಟೆ ತೃಪ್ತಿದಾಯಕವಾಗಿಯೇ ವಹಿವಾಟು ನಡೆಸಿವೆ. ಟೋಕೊÂàದ ನಿಕ್ಕಿ ಶೇ.0.7, ಸಿಯೋಲ್‌ನ ಕೋಸ್ಪಿ ಶೇ.0.2ರಷ್ಟು ಲಾಭದಾಯಕ ವಹಿವಾಟು ನಡೆಸಿವೆ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಕೆಲವು ಷೇರುಪೇಟೆಗಳು ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ ರಜೆ ಘೋಷಿಸಿವೆ.
17 ಪೈಸೆ ಏರಿಕೆ:
ಅಮೆರಿಕದ ಡಾಲರ್ ಎದುರು ರೂಪಾಯಿ 17 ಪೈಸೆ ಏರಿಕೆಯಾಗಿದೆ. ದಿನಾಂತ್ಯಕ್ಕೆ 82.65 ರೂ.ಗೆ ಮುಕ್ತಾಯವಾಗಿದೆ.