Advertisement
ವಿದ್ಯುತ್, ಉಕ್ಕು, ಆಟೋ ಕ್ಷೇತ್ರದ ಷೇರುಗಳ ಖರೀದಿ ಭರಾಟೆ ಹೆಚ್ಚಾದ ಕಾರಣ, ಸತತ 7ನೇ ದಿನವೂ ಏರಿಕೆ ಕಂಡ ಷೇರುಪೇಟೆ, ಬುಧವಾರ ಸಾರ್ವಕಾಲಿಕ ದಾಖಲೆ ಬರೆಯಿತು.
ಕಳೆದ 7 ದಿನಗಳ ಷೇರುಪೇಟೆ ಸೂಚ್ಯಂಕ ಏರಿಕೆಯಿಂದಾಗಿ ಹೂಡಿಕೆದಾರರ ಸಂಪತ್ತು 7.59 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ. ಬಿಎಸ್‌ಇಯಲ್ಲಿ ಲಿಸ್ಟ್ ಆಗಿರುವಂಥ ಕಂಪನಿಗಳ ಮಾರುಕಟ್ಟೆ ಬಂಡವಾಳ ಕೂಡ ಸಾರ್ವಕಾಲಿಕ ಏರಿಕೆ ದಾಖಲಿಸಿ, 288.50 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
Related Articles
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಪವರ್ ಗ್ರಿಡ್, ಹಿಂದುಸ್ತಾನ್ ಯುನಿಲಿವರ್, ಭಾರ್ತಿ ಏರ್‌ಟೆಲ್, ಏಷ್ಯನ್ ಪೈಂಟ್ಸ್, ಟಾಟಾ ಸ್ಟೀಲ್ ಮತ್ತು ಟೈಟಾನ್ ಕಂಪನಿಗಳ ಷೇರುಗಳು ಉತ್ತಮ ಏರಿಕೆ ಕಂಡವು. ಆದರೆ, ಇಂಡಸ್‌ಇಂಡ್ ಬ್ಯಾಂಕ್, ಎಸ್‌ಬಿಐ, ಎಚ್‌ಸಿಎಲ್ ಟೆಕ್ನಾಲಜೀಸ್, ಐಟಿಸಿ ಮತ್ತಿತರ ಷೇರುಗಳು ಕುಸಿತ ಕಂಡವು.
Advertisement
ಸೆನ್ಸೆಕ್ಸ್ ಏರಿಕೆ- 417.81 ಅಂಕದಿನಾಂತ್ಯಕ್ಕೆ – 63,099.65
ನಿಫ್ಟಿ ಏರಿಕೆ – 140.30
ದಿನಾಂತ್ಯಕ್ಕೆ – 18,758.35
7 ದಿನಗಳಲ್ಲಿ ಹೆಚ್ಚಳವಾದ ಹೂಡಿಕೆದಾರರ ಸಂಪತ್ತು- 7.59 ಲಕ್ಷ ಕೋಟಿ ರೂ.
ಕಂಪನಿಗಳ ಮಾರುಕಟ್ಟೆ ಬಂಡವಾಳ ಎಷ್ಟಕ್ಕೆ ಏರಿಕೆ?- 288.50 ಲಕ್ಷ ಕೋಟಿ ರೂ. ಏರಿಕೆಗೆ ಏನು ಕಾರಣ?
– ಜಾಗತಿಕ ಆರ್ಥಿಕ ಸ್ಥಿತಿಯಲ್ಲಿನ ಧನಾತ್ಮಕ ಬೆಳವಣಿಗೆಗಳು
– ಚೀನಾದಲ್ಲಿ ಕೊರೊನಾ ನಿರ್ಬಂಧ ಸಡಿಲಿಕೆ
– ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
– ವಿದೇಶಿ ಸಾಂಸ್ಥಿಕ ಹೂಡಿಕೆ ಹರಿವು ಹೆಚ್ಚಳ