ಮುಂಬಯಿ: ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆಯ ಪರಿಣಾಮ ಮಂಗಳವಾರ (ಮಾರ್ಚ್ 16) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 200ಕ್ಕೂ ಅಧಿಕ ಅಂಕಗಳಷ್ಟು ಏರಿಕೆಯಾಗಿದೆ.
ಇದನ್ನೂ ಓದಿ:ಕಳೆದ ಎರಡು ವರ್ಷಗಳಿಂದ 2000 ರೂ. ನೋಟು ಮುದ್ರಿಸಿಲ್ಲ: ಕೇಂದ್ರ ಸರ್ಕಾರ
ಮುಂಬಯಿ ಷೇರು ಮಾರುಕಟ್ಟೆಯ ಬಿಎಸ್ ಇ ಸಂವೇದಿ ಸೂಚ್ಯಂಕ 274.03 ಅಂಕ ಏರಿಕೆಯಾಗಿದ್ದು, 50,669.11 ಅಂಕಗಳ ವಹಿವಾಟು ಆರಂಭಿಸಿದೆ. ಎನ್ ಎಸ್ ಇ ನಿಫ್ಟಿ 75.10 ಅಂಕ ಏರಿಕೆಯೊಂದಿಗೆ 15,004.60ರ ಗಡಿ ತಲುಪಿದೆ.
ಸೆನ್ಸೆಕ್ಸ್ ಏರಿಕೆಯಿಂದ ಏಷ್ಯನ್ ಪೈಂಟ್ಸ್, ಟೈಟಾನ್, ಆಲ್ಟ್ರಾ ಟೆಕ್ ಸಿಮೆಂಟ್, ಭಾರ್ತಿ ಏರ್ ಟೆಲ್, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಮಹೀಂದ್ರ ಆ್ಯಂಡ್ ಮಹಿಂದ್ರ ಷೇರುಗಳು ಲಾಭಗಳಿಸಿವೆ.
ಏತನ್ಮಧ್ಯೆ ಬಜಾಜ್ ಆಟೋ, ಎನ್ ಟಿಪಿಸಿ ಮತ್ತು ಎಸ್ ಬಿಐ ಷೇರುಗಳು ನಷ್ಟ ಅನುಭವಿಸಿದೆ. ಸೋಮವಾರ(ಮಾ.15) ಷೇರುಪೇಟೆ ಸಂವೇದಿ ಸೂಚ್ಯಂಕ 397 ಅಂಕಗಳ ಕುಸಿತದೊಂದಿಗೆ 50,395.08 ಅಂಕಗಳ ವಹಿವಾಟು ಅಂತ್ಯಗೊಳಿಸಿತ್ತು. ಎನ್ ಎಸ್ ಇ ನಿಫ್ಟಿ 101.45 ಅಂಕ ಕುಸಿತ ಕಂಡು 14,929.50 ಗಡಿಗೆ ಕುಸಿದಿತ್ತು.