ನವದೆಹಲಿ:ಕೇಂದ್ರ ಸರ್ಕಾರ ಮಂಡಿಸಿದ್ದ 2021ನೇ ಸಾಲಿನ ಬಜೆಟ್ ಯೋಜನೆಗಳಿಂದ ಉತ್ತೇಜನಗೊಂಡ ಬಾಂಬೆ ಷೇರುಪೇಟೆ ಸತತ ಮೂರನೇ ದಿನವಾದ ಬುಧವಾರವೂ(ಫೆ,03) ಭರ್ಜರಿ ಜಿಗತ ಕಂಡಿದ್ದು, ದಾಖಲೆಯ 50 ಸಾವಿರ ಗಡಿದಾಟುವ ಮೂಲಕ ವಹಿವಾಟು ಅಂತ್ಯಗೊಂಡಿದೆ.
ಇದನ್ನೂ ಓದಿ:ಮಾತುಕತೆ ಮೂಲಕ ಚಿತ್ರಮಂದಿರ ಸಮಸ್ಯೆ ಬಗೆಹರಿಸಲಾಗುವುದು: ಡಿಸಿಎಂ ಅಶ್ವಥ್ ನಾರಾಯಣ್
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 458.03 ಅಂಕಗಳಷ್ಟು ಏರಿಕೆಯೊಂದಿಗೆ 50,255.75 ಅಂಕಗಳಗೊಂದಿಗೆ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 142.10 ಅಂಕಗಳಷ್ಟು ಏರಿಕೆಯೊಂದಿಗೆ 14,789/95 ಅಂಕಗಳ ದಾಖಲೆಯ ಗಡಿ ತಲುಪಿ ವಹಿವಾಟು ಅಂತ್ಯಗೊಳಿಸಿದೆ.
ಷೇರುಪೇಟೆಯ ಸೆನ್ಸೆಕ್ಸ್ ಏರಿಕೆಯಿಂದ ಇಂಡಸ್ ಇಂಡ್ ಬ್ಯಾಂಕ್, ಪವರ್ ಗ್ರಿಡ್, ಡಾ.ರೆಡ್ಡೀಸ್, ಸನ್ ಫಾರ್ಮಾ, ಎನ್ ಟಿಪಿಸಿ, ಆ್ಯಕ್ಸಿಸ್ ಬ್ಯಾಂಕ್, ಟೈಟಾನ್, ಟೆಕ್ ಮಹೀಂದ್ರಾ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಎಚ್ ಡಿಎಫ್ ಸಿ, ಭಾರ್ತಿ ಏರ್ ಟೆಲ್, ಬಜಾಜ್ ಫೈನಾನ್ಸ್ ನ ಷೇರುಗಳೇ ಶೇ.7.64ರಷ್ಟು ಲಾಭ ಗಳಿಸಿವೆ.
ಮತ್ತೊಂದೆಡೆ ಆಲ್ಟ್ರಾ ಟೆಕ್ ಸಿಮೆಂಟ್, ಮಾರುತಿ, ಐಟಿಸಿ, ಕೋಟಕ್ ಬ್ಯಾಂಕ್, ಏಷ್ಯನ್ ಪೈಂಟ್ಸ್, ನೆಸ್ಲೆ ಮತ್ತು ಟಿಸಿಎಸ್ ಷೇರುಗಳು ನಷ್ಟ ಕಂಡಿದೆ.