ನವದೆಹಲಿ: ಕೇಂದ್ರ ಬಜೆಟ್ ನಲ್ಲಿ ಪ್ರಕಟಿಸಲಾಗಿರುವ ಯೋಜನೆಗಳಿಂದ ಉತ್ತೇಜನಗೊಂಡ ಬಾಂಬೆ ಷೇರುಪೇಟೆಯ ವಹಿವಾಟು ಬುಧವಾರವೂ(ಫೆ.03, 2021) ಭರ್ಜರಿ ಏರಿಕೆ ಕಂಡಿದ್ದು, ಸಂವೇದಿ ಸೂಚ್ಯಂಕ 50 ಸಾವಿರದ ಗಡಿ ದಾಟಿದೆ.
ಇದನ್ನೂ ಓದಿ:ಜನವರಿ 26 ಹಿಂಸಾಚಾರ ಕೇಸ್: ಪ್ರಮುಖ ಆರೋಪಿ ದೀಪ್ ಮಾಹಿತಿ ಕೊಟ್ರೆ 1 ಲಕ್ಷ ಬಹುಮಾನ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 550 ಅಂಕಗಳಷ್ಟು ಆರಂಭಿಕವಾಗಿ ಏರಿಕೆಕಂಡಿದ್ದು, ಇದರೊಂದಿಗೆ 50, 361 ಅಂಕಗಳ ದಾಖಲೆ ನಿರ್ಮಿಸಿದೆ.
ಎನ್ ಎಸ್ ಇ ನಿಫ್ಟಿ 14,800 ಅಂಕಗಳ ಗಡಿ ತಲುಪಿದೆ. ಬಿಎಸ್ ಇ ಸಂವೇದಿ ಸೂಚ್ಯಂಕ ಏರಿಕೆಯಿಂದ ಇಂಡಸ್ ಇಂಡ್, ಬ್ಯಾಂಕ್, ಡಾ.ರೆಡ್ಡೀಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಪವರ್ ಗ್ರಿಡ್, ಸನ್ ಫಾರ್ಮಾ ಮತ್ತು ಟೆಕ್ ಮಹೀಂದ್ರ ಷೇರುಗಳು ಶೇ.7.61ರಷ್ಟು ಲಾಭ ಗಳಿಸಿವೆ.
ಮಂಗಳವಾರವೂ ಕೂಡಾ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 1,197.11 ಪಾಯಿಂಟ್ಸ್ ಗಳಷ್ಟು ಏರಿಕೆಯಾಗಿ 50 ಸಾವಿರದ ಸನಿಹಕ್ಕೆ ಬಂದಿದ್ದು, ಹೂಡಿಕೆದಾರರಿಗೆ 4 ಲಕ್ಷ ಕೋಟಿ ರೂ. ಲಾಭವಾಗಿದೆ.
ದಿನಾಂತ್ಯಕ್ಕೆ ಸೂಚ್ಯಂಕ 49.797.72 ಅಂಕಗಳೊಂದಿಗೆ ಏರಿಕೆಯಾಗಿ ದಿನಾಂತ್ಯದ ವಹಿವಾಟು ಮುಕ್ತಾಯವಾಗಿತ್ತು. ನಿಫ್ಟಿ 367 ಅಂಕಗಳಷ್ಟು ಏರಿಕೆಯೊಂದಿಗೆ 14,648ರ ಗಡಿ ತಲುಪಿತ್ತು.