Advertisement

ಮುಂಬಯಿ ಷೇರುಪೇಟೆ: ಸಪ್ತ ದಿನಗಳ ಏರಿಕೆಗೆ ಬ್ರೇಕ್‌

01:31 AM Dec 11, 2020 | mahesh |

ಮುಂಬಯಿ: ಸತತ ಏಳು ದಿನಗಳಿಂದ ಏರಿಕೆಯ ಗತಿಯಲ್ಲಿದ್ದ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ (ಬಿಎಸ್‌ಇ)ಸೂಚ್ಯಂಕ ಗುರುವಾರ 144 ಪಾಯಿಂಟ್ಸ್‌ಗಳಷ್ಟು ಕುಸಿದಿದೆ. ನಿಫ್ಟಿ ಸೂಚ್ಯಂಕ ಕೂಡಾ 50.80 ಪಾಯಿಂಟ್ಸ್‌ಗಳಷ್ಟು ಇಳಿಕೆಯಾಗಿದೆ.

Advertisement

ಅಮೆರಿಕದ ಡಾಲರ್‌ ಎದುರು ರೂಪಾಯಿ ಕುಸಿತ, ಜಗತ್ತಿನ ಇತರ ಮಾರುಕಟ್ಟೆಗಳಲ್ಲಿ ವಹಿವಾಟುಗಳಲ್ಲಿ ಚೇತರಿಕೆ ಕಾಣದೇ ಇದ್ದದ್ದು ಬಾಂಬೆ ಷೇರು ಪೇಟೆಯ ಮೇಲೆ ಪ್ರತಿಕೂಲ ಪ್ರಭಾವ ಬೀರಿತು. ಬೆಳಗ್ಗಿನ ವೇಳೆಯ ಲ್ಲಿಯೇ ಬಿಎಸ್‌ಇ ಸೂಚ್ಯಂಕ ನಿರಾಶಾದಾಯಕವಾಗಿಯೇ ವಹಿವಾಟು ಆರಂಭಿಸಿತು. ದಿನಾಂತ್ಯಕ್ಕೆ 45,959.88 ಪಾಯಿಂಟ್‌ಗಳಷ್ಟು ಅಂದರೆ, 143.62 ರಷ್ಟು ಇಳಿಕೆಯಾಗಿದೆ. ನಿಫ್ಟಿ ಸ್ಯೂಚ್ಯಂಕ ಕೂಡ ಸತತ 7 ದಿನಗಳಿಂದ ಏರುಗತಿಯಲ್ಲಿ ಇದ್ದದ್ದು 50.80ರಷ್ಟು ಕುಸಿಯುವ ಮೂಲಕ 13, 478.30ರಲ್ಲಿ ಮುಕ್ತಾಯವಾಯಿತು.

ಅಲ್ಟ್ರಾ ಟೆಕ್‌ ಸಿಮೆಂಟ್‌ ಬಿಎಸ್‌ಇ ನಲ್ಲಿ ಅತ್ಯಂತ ಹೆಚ್ಚು ನಷ್ಟಕ್ಕೆ ಒಳಗಾಗಿದೆ. ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಸಿಮೆಂಟ್‌ ಕಂಪೆನಿಗಳ ವಿರುದ್ಧ ತನಿಖೆಗೆ ಸೂಚಿಸಿದ್ದು, ಆ ಕ್ಷೇತ್ರದ ಷೇರು ಗಳಿಗೆ ಕಡಿಮೆ ಬೇಡಿಕೆ ಉಂಟಾಗಲು ಕಾರಣವಾಯಿತು. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಇಂಡಸ್‌ಇಂಡ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಎನ್‌ಟಿಪಿಸಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಶೇ.2.50ರಷ್ಟು ಕುಸಿತ ಕಂಡವು. ನೆಸ್ಲೆ ಇಂಡಿಯಾ ಶೇ.4.17, ಐಟಿಸಿ ಶೇ.3.58, ಎಚ್‌ಯುಎಲ್‌ ಶೇ. 2.51ರಷ್ಟು ಚೇತರಿಕೆ ಕಂಡವು. ಕೊಟಕ್‌ ಬ್ಯಾಂಕ್‌, ಎಲ್‌ ಆ್ಯಂಡ್‌ ಟಿ, ಟಾಟಾ ಸ್ಟೀಲ್‌ ಮತ್ತು ಒಎನ್‌ಜಿಸಿ ಷೇರುಗಳೂ ಶೇ.1.13ರ ವರೆಗೆ ಏರಿಕೆ ಕಂಡವು. ಹಾಂಕಾಂಗ್‌, ಸಿಯೋಲ್‌ ಮತ್ತು ಟೋಕಿಯೊ ಎಕ್‌ Õ ಚೇಂಜ್‌ಗಳಲ್ಲಿಯೂ ವಹಿವಾಟು ಚೇತೋಹಾರಿಯಾಗಿರಲಿಲ್ಲ.

ಇಳಿಕೆಗೆ ಕಾರಣಗಳೇನು?
ಏಷ್ಯಾ, ಜಗತ್ತಿನ ಇತರ ಷೇರು ಮಾರುಕಟ್ಟೆಗಳಲ್ಲಿಯೂ ನಿರಾಶಾದಾಯಕ ವಹಿವಾಟು.
ಅಮೆರಿಕದ ಷೇರು ಮಾರುಕಟ್ಟೆಗಳಲ್ಲಿ ಷೇರುಗಳ ಮಾರಾಟ ಪ್ರಕ್ರಿಯೆ. ಆ ದೇಶದಲ್ಲಿ ಉಂಟಾಗಬಹುದಾದ ಆರ್ಥಿಕ ಶ‌ಟ್‌ಡೌನ್‌ ತಪ್ಪಿಸಲು ನಡೆದಿರುವ ಮಾತುಕತೆ 9 ಪೈಸೆ ಕುಸಿತ
ಮೂರು ದಿನಗಳಿಂದ ಅಮೆರಿಕದ ಡಾಲರ್‌ ಎದುರು ಏರಿಕೆ ಹಂತದಲ್ಲಿದ್ದ ರೂಪಾಯಿ 9 ಪೈಸೆ ಕುಸಿದಿದೆ. ದಿನದ ಮುಕ್ತಾಯದಲ್ಲಿ ಡಾಲರ್‌ ಎದುರು 73. 66 ರೂ. ಆಗಿತ್ತು. ದಿನದ ಆರಂಭದಲ್ಲಿ 73.68ರಲ್ಲಿ ಶುರುವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next