Advertisement

ಅಮೆರಿಕ,ಹಾಂಗ್ ಕಾಂಗ್ ಮಾರುಕಟ್ಟೆಗೆ ರಜೆ: 52.000 ಗಡಿ ದಾಟಿದ ಮುಂಬಯಿ ಷೇರುಪೇಟೆ ಸೂಚ್ಯಂಕ

10:54 AM Feb 15, 2021 | |

ನವದೆಹಲಿ: ಡಿಸೆಂಬರ್ ತ್ರೈಮಾಸಿಕದ ಕಾರ್ಪೋರೇಟ್ ಲಾಭಾಂಶದ ಧನಾತ್ಮಕ ಜಾಗತಿಕ ಬೆಳವಣಿಗೆಯ ಪರಿಣಾಮ ಮುಂಬಯಿ ಷೇರುಪೇಟೆಯ ಸೋಮವಾರದ(ಫೆ.15, 2021) ವಹಿವಾಟಿನ ಮೇಲೆ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಷೇರುಪೇಟೆ ಸಂವೇದಿ ಸೂಚ್ಯಂಕ 52,000 ಸಾವಿರದ ದಾಖಲೆಯ ಗಡಿ ತಲುಪಿದೆ.

Advertisement

ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 463.71 ಅಂಕಗಳ ಏರಿಕೆಯೊಂದಿಗೆ 52,008.01ರ ದಾಖಲೆಯ ವಹಿವಾಟಿಗೆ ಸಾಕ್ಷಿಯಾಗಿದೆ. ಎನ್ ಎಸ್ ಇ ನಿಫ್ಟಿ ಕೂಡಾ 126.25 ಅಂಕಗಳ ಏರಿಕೆಯೊಂದಿಗೆ 15,289.55 ಅಂಕಗಳ ಗಡಿ ಮುಟ್ಟಿದೆ.

ಏಷ್ಯಾ ಫೆಸಿಪಿಕ್ ವಲಯದಲ್ಲಿಯೂ ಷೇರುಮಾರುಕಟ್ಟೆ ಭರ್ಜರಿ ಚೇತರಿಕೆ ಕಂಡಿದ್ದು, ಜಪಾನ್ ನ ನಿಕ್ಕೈ ಷೇರು ಶೇ.04ರಷ್ಟು ಏರಿಕೆಯಾಗಿ 736.4ಅಂಕಗಳ ವಹಿವಾಟು ನಡೆಸಿದೆ.

ಚಾಂದ್ರಮಾನ ಹೊಸವರ್ಷದ ರಜೆಯ ಹಿನ್ನೆಲೆಯಲ್ಲಿ ಚೀನಾ ಮತ್ತು ಹಾಂಗ್ ಕಾಂಗ್ ಷೇರುಮಾರುಕಟ್ಟೆಗೆ ರಜೆ ಘೋಷಿಸಲಾಗಿದ್ದು, ಯಾವುದೇ ವಹಿವಾಟು ನಡೆಯುತ್ತಿಲ್ಲ. ಪ್ರೆಸಿಡೆಂಟ್ ದಿನಾಚರಣೆ ನಿಟ್ಟಿನಲ್ಲಿ ಅಮೆರಿಕದ ಷೇರುಮಾರುಕಟ್ಟೆಗೂ ರಜೆ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next