ಮುಂಬಯಿ: ಬಾಂಬೆ ಷೇರುಪೇಟೆಯ ಬೆಳಗ್ಗೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ ಭಾರೀ ಏರಿಕೆ ಕಂಡಿದ್ದು, ನಂತರದಲ್ಲಿ ಹೂಡಿಕೆದಾರರು ಲಾಭಾಂಶ ಕಾಯ್ದಿರಿಸಿದ ಪರಿಣಾಮ ಶುಕ್ರವಾರ (ಜೂನ್ 03) ಸೆನ್ಸೆಕ್ಸ್ ಅಲ್ಪ ಪ್ರಮಾಣದ ಇಳಿಕೆಯೊಂದಿಗೆ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ರಾಜ್ಯಸಭಾ ಚುನಾವಣೆಗೆ ಈಗ ಮತದಾನ ಅನಿವಾರ್ಯ; ವಿಪ್ ಜಾರಿ ಮಾಡಿದ ಕಾಂಗ್ರೆಸ್
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 49 ಅಂಕಗಳಷ್ಟು ಅಲ್ಪಪ್ರಮಾಣದ ಇಳಿಕೆಯೊಂದಿಗೆ 55,769 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 44 ಅಂಕ ಇಳಿಕೆಯಾಗಿದ್ದು, 16,584 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಮಧ್ಯಂತರ ವಹಿವಾಟಿನ ವೇಳೆ ಸೆನ್ಸೆಕ್ಸ್ 713 ಅಂಕಗಳಷ್ಟು ಏರಿಕೆಯಾಗಿತ್ತು. ಸೆನ್ಸೆಕ್ಸ್ ಇಳಿಕೆಯಿಂದ ಗ್ರಾಸಿಂ ಇಂಡಸ್ಟ್ರೀಸ್, ಆಲ್ಟ್ರಾ ಸಿಮೆಂಟ್, ಶ್ರೀ ಸಿಮೆಂಟ್, ಹೀರೋ ಮೋಟೋ ಕಾರ್ಪ್, ಮಾರುತಿ, ಎನ್ ಟಿಪಿಸಿ, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಇಂಡಸ್ ಇಂಡ್ ಬ್ಯಾಂಕ್, ಭಾರ್ತಿ ಏರ್ ಟೆಲ್, ಟಾಟಾ ಸ್ಟೀಲ್, ನೆಸ್ಲೆ ಇಂಡಿಯಾ, ಟೈಟಾನ್, ಎಸ್ ಬಿಐ, ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.
ದೇಶೀಯ ಅತೀ ದೊಡ್ಡ ಇನ್ಸೂರೆನ್ಸ್ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮ(ಎಲ್ ಐಸಿ)ದ ಷೇರು ಮೌಲ್ಯ ಕೂಡಾ 0.69ರಷ್ಟು ಕುಸಿತ ಕಂಡಿದ್ದು, ಒಂದು ಷೇರಿನ ಬೆಲೆ 800.25 ರೂಪಾಯಿಗೆ ಇಳಿಕೆಯಾಗಿತ್ತು.
ಮತ್ತೊಂದೆಡೆ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಎಲ್ ಆ್ಯಂಡ್ ಟಿ, ಎಚ್ ಸಿಎಲ್ ಟೆಕ್, ಸನ್ ಫಾರ್ಮಾ, ಟಿಸಿಎಸ್, ಹಿಂದೂಸ್ತಾನ್ ಯೂನಿಲಿವರ್, ವಿಪ್ರೋ, ಟೆಕ್ ಮಹೀಂದ್ರ, ಪವರ್ ಗ್ರಿಡ್ ಮತ್ತು ಡಾ.ರೆಡ್ಡೀಸ್ ಷೇರುಗಳು ಲಾಭಗಳಿಸಿದೆ.