ಮುಂಬಯಿ : ಭಾರತದ ಆರ್ಥಿಕ ಪ್ರಗತಿಯು ಮತ್ತೆ ಹಳಿಗೆ ಮರಳುತ್ತಿದೆ ಎಂಬ IMF ಅಂದಾಜು ಮುಂಬಯಿ ಶೇರು ಪೇಟೆಗೆ ಹೊಸ ಬೂಸ್ಟ್ ನೀಡಿದೆ. ಅಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟಿನ ಅಂತ್ಯಕ್ಕೆ 341 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿ ಹೊಸ ಸಾರ್ವಕಾಲಿಕ ಎತ್ತರವನ್ನು ತಲುಪುವ ಸಾಧನೆ ಮಾಡಿದೆ.
ಐಎಂಎಫ್ ಪ್ರಕಾರ ಭಾರತದ ಡಿಜಿಪಿ 2018-19ರಲ್ಲಿ ಶೇ. 7.4ರ ಮಟ್ಟಕ್ಕೆ ಏರಲಿದೆ ಮತ್ತು ಅತ್ಯಂತ ವೇಗದ ಪ್ರಗತಿಯನ್ನು ಕಾಣುತ್ತಿರುವ ವಿಶ್ವದ ಪ್ರಮುಖ ಆರ್ಥಿಕತೆ ಎಂಬ ಸ್ಥಾನಮಾನವನ್ನು ಪಡೆಯಲಿದೆ.
ಈ ಹಿನ್ನೆಲೆಯಲ್ಲಿ ಇಂದು ಮಂಗಳವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 36,000 ಅಂಕಗಳಿಗಿಂತ ಮೇಲ್ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,000 ಅಂಕಗಳಿಗಿಂತ ಮೇಲ್ಮಟ್ಟದಲ್ಲಿ ಹೊಸ ಸಾರ್ವಕಾಲಿಕ ಎತ್ತರವನ್ನು ಕಂಡು ಸಮಾಪನಗೊಳಿಸಿದೆ.
ದಿನಾಂತ್ಯಕ್ಕೆ ಸೆನ್ಸೆಕ್ಸ್ 341.97 ಅಂಕಗಳ ಭರ್ಜರಿ ಏರಿಕೆಯೊಂದಿಗೆ ದಾಖಲೆಯ ಎತ್ತರದ 36,139.98 ಅಂಕಗಳ ಮಟ್ಟವನ್ನು ತಲುಪಿತು. ಸೆನ್ಸೆಕ್ಸ್ ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಒಟ್ಟು 1,026.96 ಅಂಕಗಳನ್ನು ಸಂಪಾದಿಸಿದೆ.
Related Articles
ನಿಫ್ಟಿ 117.50 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು ಸಾರ್ವಕಾಲಿ ದಾಖಲೆಯ ಎತ್ತರದ 11,083.70 ಅಂಕಗಳ ಮಟ್ಟದಲ್ಲಿ ಮುಗಿಸಿತು.