ಮುಂಬಯಿ : ವಿಶ್ವ ಮಾರುಕಟ್ಟೆಗಳಲ್ಲಿ ಕಂಡು ಬಂದ ತೇಜಿಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಗುರುವಾರದ ವಹಿವಾಟನ್ನು 176.26 ಅಂಕಗಳ ಜಿಗಿತದೊಂದಿಗೆ 33,969.64 ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 61.60 ಅಂಕಗಳ ಏರಿಕೆಯನ್ನು ಸಾಧಿಸಿ 10,504.80 ಅಂಕಗಳ ಮಟ್ಟಕ್ಕೇರಿ ಆಶಾದಾಯಕವಾಗಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇಂದು ಮುಂಬಯಿ ಶೇರು ಪೇಟೆಯಲ್ಲಿ ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 1,907 ಶೇರುಗಳು ಮುನ್ನಡೆ ಸಾಧಿಸಿದವು; 1,003 ಶೇರುಗಳು ಹಿನ್ನಡೆಗೆ ಗುರಿಯಾದವು; 433 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಟಾಟಾ ಸ್ಟೀಲ್, ಎಲ್ ಆ್ಯಂಡ್ ಟಿ, ಡಾ. ರೆಡ್ಡಿ ಶೇರುಗಳು ಉತ್ತಮ ಏರಿಕೆಯನ್ನು ದಾಖಲಿಸಿ ಟಾಪ್ ಗೇನರ್ ಎನಿಸಿಕೊಂಡವು. ತದ್ವಿರುದ್ಧವಾಗಿ ಟಾಟಾ ಮೋಟರ್, ಎಕ್ಸಿಸ್ ಬ್ಯಾಂಕ್, ಟಾಟಾ ಪವರ್ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ಇಂದಿನ ವಹಿವಾಟಿನಲ್ಲಿ ಐಟಿ, ಆಟೋ ಶೇರುಗಳನ್ನು ಹೊರತುಪಡಿಸಿ ಪಿಎಸ್‌ಯು ಬ್ಯಾಂಕ್, ಇನ್‌ಫ್ರಾ ಮತ್ತು ಮೆಟಲ್ ಶೇರುಗಳ ನೇತೃತ್ವದಲ್ಲಿ ಉಳಿದೆಲ್ಲ ರಂಗದ ಶೇರುಗಳ ಉತ್ತಮ ಖರೀದಿಯನ್ನು ಕಂಡು ಮಿಂಚಿದವು.