ಮುಂಬೈ/ನವದೆಹಲಿ: ಬಾಂಬೆ ಷೇರು ಪೇಟೆಯಲ್ಲಿ ಶುಕ್ರವಾರ ಹೊಯ್ದಾಟದ ವಹಿವಾಟು ನಡೆದಿದೆ. ಹೀಗಾಗಿ, ದಿನದ ಅಂತ್ಯಕ್ಕೆ ಸೂಚ್ಯಂಕ ಏರಿಳಿಕೆ ಕಾಣದೆ ಸ್ಥಿರಗೊಂಡು ಮುಕ್ತಾಯವಾಗಿದೆ. ಬಿಎಸ್‌ಇ ಸೂಚ್ಯಂಕ 12.78 ಪಾಯಿಂಟ್ಸ್‌ಗಳಷ್ಟು ಏರಿಕೆಯಾಗಿ 51, 544.30, ನಿಫ್ಟಿ ಸೂಚ್ಯಂಕ 10 ಪಾಯಿಂಟ್ಸ್ ಕುಸಿದಿದೆ. ಅಂದರೆ 15, 163.30ರಲ್ಲಿ ಕೊನೆಗೊಂಡಿದೆ.
ಇದನ್ನೂ ಓದಿ:ಕಂಟೈನರ್ ಗೆ ಕಾರು ಢಿಕ್ಕಿ: ಕಾರಿನಲ್ಲಿದ್ದ ಬೆಂಗಳೂರು ಮೂಲದ ನಾಲ್ವರು ಯುವಕರು ಸಾವು
ಒಟ್ಟಾರೆ ವಾರದ ವಹಿವಾಟು ಗಮನಿಸಿದರೆ 812.67 ಪಾಯಿಂಟ್ಸ್ ಏರಿಕೆಯಾಗಿದೆ. ನಿಫ್ಟಿ ಕೂಡ 239.05ರಷ್ಟು ಜಿಗಿದಿದೆ. ದಿನದ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್‌ನ ಷೇರುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ವಹಿವಾಟು ನಡೆದಿರಲಿಲ್ಲ.
ಐರೋಪ್ಯ ಒಕ್ಕೂಟದಲ್ಲಿ ಮಧ್ಯಂತರ ವರೆಗೆ ಋಣಾತ್ಮಕ ವಹಿವಾಟು ಇತ್ತು. ಅಮೆರಿಕದ ಡಾಲರ್ ಎದುರು ರೂಪಾಯಿ 12 ಪೈಸೆ ಏರಿಕೆ ಯಾಗಿ, 72.75 ರೂ.ಗಳಲ್ಲಿ ಮುಕ್ತಾಯವಾಗಿದೆ.
ಚಿನ್ನ ಇಳಿಕೆ: ನವದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಚಿನ್ನಕ್ಕೆ 661 ರೂ. ಇಳಿಕೆಯಾಗಿ, 46,847 ರೂ. ಆಗಿದೆ. ಪ್ರತಿ ಕೆಜಿ ಬೆಳ್ಳಿಗೆ 347 ರೂ. ಇಳಿಕೆಯಾಗಿ 68,241 ರೂ.ಗೆ ಮುಕ್ತಾಯವಾಗಿದೆ.