ಮುಂಬಯಿ:ಜಾಗತಿಕ ಷೇರುಮಾರುಕಟ್ಟೆಯ ದುರ್ಬಲ ವಹಿವಾಟಿನ ಪರಿಣಾಮ ಸೋಮವಾರ (ಮಾರ್ಚ್ 22) ಮುಂಬಯಿ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 300 ಅಂಕ ಕುಸಿತ ಕಂಡಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಜಾರಿ ಮಾಡುವುದಿಲ್ಲ: ಬಿ.ಸಿ.ಪಾಟೀಲ್
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 305.33 ಅಂಕ ಇಳಿಕೆಯಾಗಿದ್ದು, 49,552.91 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 76 ಅಂಕ ಕುಸಿತವಾಗಿದ್ದು, 14,668ರ ಗಡಿಗೆ ಕುಸಿದಿದೆ.
ಸೆನ್ಸೆಕ್ಸ್ ಕುಸಿತದಿಂದ ಪವರ್ ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಶೇ.2ರಷ್ಟು ನಷ್ಟ ಅನುಭವಿಸಿದೆ. ಮತ್ತೊಂದೆಡೆ ಸನ್ ಫಾರ್ಮಾ, ಡಾ.ರೆಡ್ಡೀಸ್, ಏಷ್ಯನ್ ಪೈಂಟ್ಸ್ ಮತ್ತು ಇನ್ಫೋಸಿಸ್ ಷೇರುಗಳು ಲಾಭಗಳಿಸಿವೆ.
ಶುಕ್ರವಾರ (ಮಾರ್ಚ್ 19) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 641.72 ಅಂಕ ಏರಿಕೆಯೊಂದಿಗೆ 49,858.24 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಂಡಿತ್ತು. ನಿಫ್ಟಿ ಕೂಡಾ 186.15 ಅಂಕ ಏರಿಕೆಯಾಗಿದ್ದು, 14,744 ಅಂಕಗಳ ವಹಿವಾಟಿನೊಂದಿಗೆ ಕೊನೆಗೊಂಡಿತ್ತು.