Advertisement
ಕೆಂಪೇಗೌಡರು ರಾಜ್ಯಭಾರವನ್ನು ವಹಿಸಿಕೊಂಡ ನಂತರ ಯಲಹಂಕ ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. ತಮ್ಮ ಕನಸಿನ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದು ಪ್ರಜಾಪ್ರೀತಿಯನ್ನು ಗಳಿಸುತ್ತಾರೆ. ಇವರ ಕೀರ್ತಿಯನ್ನು ಸಹಿಸದ ಸುತ್ತಮುತ್ತಲಿನ ಪಾಳೆಯಗಾರರು ಕೆಂಪೇಗೌಡರನ್ನು ಬಗ್ಗುಬಡೆದು ಯಲಹಂಕ ನಾಡನ್ನು ಕಬಳಿಸಲು ಯತ್ನಿಸುತ್ತಾರೆ. ಆದರೆ ಪರಾಕ್ರಮಿ ಕೆಂಪೇಗೌಡರು ತಮ್ಮ ಸುತ್ತಲಿನ ಶಿರಾ, ಸೋಲೂರು, ಚೆನ್ನಪಟ್ಟಣ, ಹೊಳುವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರದ ಪಾಳೇಗಾರರು ತಮ್ಮ ವಿರುದ್ಧ ಸೊಲ್ಲೆತ್ತದಂತೆ ಮಾಡುತ್ತಾರೆ.
Related Articles
Advertisement
ವರ್ತಕರಿಗೆ ಅವರು ಮಾರಾಟ ಮಾಡುವ ಸರಕಿನ ಆಧಾರದ ಮೇಲೆ ಅಕ್ಕಿಪೇಟೆ, ರಾಗಿಪೇಟೆ, ಬಳೆಪೇಟೆ, ಅರಳೇಪೇಟೆ, ನಗರ್ತಪೇಟೆ, ಕುಂಬಾರ ಪೇಟೆ, ಉಪ್ಪಾರಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಸುಣಕಲ್ ಪೇಟೆ ಹೀಗೆ ಹಲವು ಪೇಟೆಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡುತ್ತಾರೆ. ಈ ಹೆಸರಿನ ಪೇಟೆಗಳು ಹಳೆ ಬೆಂಗಳೂರು ಭಾಗದಲ್ಲಿ ಈಗಲೂ ಹಾಗೆ ಉಳಿದಿವೆ. ವೃತ್ತಿಯ ಹೆಸರಿನ ಹಲವು ಪೇಟೆಗಳು ಮತ್ತು ಜಾತಿಯ ಹೆಸರಿನ ಹಲವು ಪೇಟೆಗಳು ಇಲ್ಲಿದ್ದವು. ಆ ಕಾಲದಲ್ಲಿಯೇ ಎಲ್ಲರಿಗೂ ನಗರದಲ್ಲಿ ಸಮಾನ ಸ್ಥಾನವನ್ನು ಕಲ್ಪಿಸಿ ಜಾತ್ಯಾತೀತ ಸಮಾಜಕ್ಕೆ ನಾಂದಿ ಹಾಡಿದರು ಕೆಂಪೇಗೌಡರು.
ಸಮೃದ್ಧ ವ್ಯಾಪಾರಿ ಕೇಂದ್ರ: ಬೆಂಗಳೂರನ್ನು ಒಂದು ಸಮƒದ್ಧ ವ್ಯಾಪಾರಿ ಕೇಂದ್ರವನ್ನಾಗಿ ಮಾಡುತ್ತಾರೆ. ಬೆಂಗಳೂರು ಅತಿ ಶೀಘ್ರದಲ್ಲಿಯೇ ದಕ್ಷಿಣ ಭಾರತದ ಅತಿ ದೊಡ್ಡ ವ್ಯಾಪಾರ ಕೇಂದ್ರವಾಗಿ ಬೆಳೆಯ ತೊಡಗುತ್ತದೆ. ಬೆಂಗಳೂರು ಒಂದನೆಯ ಕೆಂಪೇಗೌಡರ ಆಳ್ವಿಕೆಯಲ್ಲಿ ದಕ್ಷಿಣ ಭಾರತದ ಅತಿದೊಡ್ಡ ವ್ಯಾಪಾರ ಕೇಂದ್ರವಾಗಿ ಹೆಸರು ಗಳಿಸಿದ್ದ ಉಲ್ಲೇಖಗಳು ಇವೆ.
ಬೆಂಗಳೂರು ನಗರದ ಅಭಿವೃದ್ಧಿಯ ಜೊತೆಗೆ ಕೆಂಪೇಗೌಡರು ಯಲಹಂಕ, ಬೆಂಗಳೂರು, ಮಾಗಡಿ ಮುಂತಾದ ಪ್ರದೇಶಗಳಲ್ಲಿ ಕೃಷಿ ಭೂಮಿಯನ್ನು ಸಹ ಹೆಚ್ಚಿಸುತ್ತಾರೆ. ಇವರ ಕಾಲದಲ್ಲಿ ಬೆಂಗಳೂರಿನ ಸುತ್ತಮುತ್ತ ಹೊಲ ಗದ್ದೆ, ಹಣ್ಣಿನ ತೋಟ, ಹೂದೋಟ ಹಾಗೂ ತರಕಾರಿಗಳ ವ್ಯವಸಾಯ ಹೆಚ್ಚಿತು. ತೋಟಗಾರರಿಗೆ ಇವರ ಕಾಲದಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ವ್ಯವಸಾಯಗಾರರಲ್ಲಿ ತಿಗಳರು ಎಂಬ ಒಂದು ಪಂಗಡದವರು ಕೈತೋಟ ಮಾಡುವುದರಲ್ಲಿ ಬಹು ನಿಪುಣರಾಗಿದ್ದರು.
ಪ್ರಭುಗಳು ಇವರಿಗೆ ಪ್ರತ್ಯೇಕ ಜಾಗ ವನ್ನು ಬಿಟ್ಟುಕೊಟ್ಟಿದ್ದರು. ಅದು ಇಂದು ತಿಗಳರಪೇಟೆ ಯೆಂದೇ ಹೆಸರಾಯಿತು. ಇವರು ಪಾಂಡವರ ಆರಾಧ ಕರು. ಇವರಿಗೆಂದೆ ಬೆಂಗಳೂರಿನಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನ ನಿರ್ಮಾಣಗೊಂಡು ಕರಗದ ಆಚರಣೆ ಪ್ರಾರಂಭವಾಯಿತು. ಅಂದು ಪ್ರಾರಂಭವಾದ ಕರಗ ಉತ್ಸವ ಇಂದೂ ಸಹ ತಪ್ಪದೇ ನಡೆಯುತ್ತಿದೆ. ಬೆಂಗಳೂರು ನಗರ ವ್ಯವಸ್ಥಿತವಾಗಿ ನಿರ್ಮಾಣಗೊಂಡು ವ್ಯಾಪಾರ ವಹಿವಾಟು ಹೆಚ್ಚಾದ ಮೇಲೆ ಕೆಂಪೇಗೌಡರು ಜನಪ್ರಸಿದ್ಧಿಯನ್ನು ಪಡೆದುಕೊಂಡಂತೆಲ್ಲ ಅವರ ಸುತ್ತಲೂ ಶತ್ರುಗಳು ಹೆಚ್ಚಿಕೊಳ್ಳುತ್ತಾರೆ.
ಹೇಗಾದರೂ ಮಾಡಿ ಕೆಂಪೇಗೌಡರನ್ನು ಮಣಿಸಬೇಕೆಂದು ಸಂಚು ಹೂಡುತ್ತಲೇ ಇರುತ್ತಾರೆ. ಆದರೆ ಕೆಂಪೇಗೌಡರು ಬಲಿಷ್ಟನಾಗಿ ಬೆಳೆಯ ತೊಡಗುತ್ತಾರೆ. ಮೊದಲು ಶಿವಗಂಗೆಯನ್ನು ಸ್ವಾಧೀನ ಪಡಿಸಿಕೊಳ್ಳು ತ್ತಾರೆ. ನಂತರ ಚೋಳರಾಳ್ವಿಕೆಯ ಪ್ರಧಾನ ನೆಲೆಯಾ ಗಿದ್ದ ದೊಮ್ಮಲೂರು, ಹಲಸೂರು, ಹೆಸರ ಘಟ್ಟಗಳನ್ನು ವಶಮಾಡಿಕೊಳ್ಳುತ್ತಾರೆ.