Advertisement
ರಾಷ್ಟ್ರೀಯ ಲೋಕ ಅದಾಲತ್ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನ್ಯಾಯಾಧೀಶರು, ವಕೀಲರು ಹಾಗೂ ಕಾನೂನು ಸೇವಾ ಪ್ರಾಧಿಕಾರ ಅಧಿಕಾರ ವರ್ಗದ ಸಹಾಯದಿಂದ ಇಷ್ಟೊಂದು ಪ್ರಮಾಣದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಿದೆ ಎಂದರು.
ವೈವಾಹಿಕ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಪಡಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳನ್ನು ಉತ್ತೇಜಿಸಲಾಗಿತ್ತು. ಈ ಬಾರಿ 1,128 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 107ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ದಂಪತಿ ಪುನಃ ಒಂದಾಗಿ ದ್ದಾರೆ. ಮೈಸೂರಿನಲ್ಲಿ 40, ಬೆಂಗಳೂರಿನಲ್ಲಿ 30 ದಂಪತಿಗಳು ಒಂದಾಗಿದ್ದಾರೆ. ಧಾರವಾಡ ಜಿಲ್ಲೆ ಕಲಘಟಿಯಲ್ಲಿ 50 ವರ್ಷಗಳಿಂದ ಪ್ರತ್ಯೇಕವಾಗಿದ್ದ 85 ವರ್ಷದ ಪತಿ ಹಾಗೂ 80 ವರ್ಷದ ಪತ್ನಿ ಒಂದಾಗಿರುವುದು ವಿಶೇಷವಾಗಿತ್ತು ಎಂದು ನ್ಯಾ| ವೀರಪ್ಪ ತಿಳಿಸಿದ್ದಾರೆ.
Related Articles
– 2.23 ಲಕ್ಷ ಟ್ರಾಫಿಕ್ ಚಲನ್ ಪ್ರಕರಣಗಳನ್ನು ಇತ್ಯರ್ಥ, 22.36 ಕೋಟಿ ರೂ. ದಂಡ ಸಂಗ್ರಹ.
– ಒಟ್ಟು 1.46 ಲಕ್ಷ ಕಂದಾಯ ಪ್ರಕರಣ ಇತ್ಯರ್ಥ.
– 5,585 ಬ್ಯಾಂಕ್ ವಸೂಲಾತಿ ಪ್ರಕರಣ ಇತ್ಯರ್ಥ, 36.24 ಕೋಟಿ ರೂ. ಮೊತ್ತ ವಸೂಲಿ.
– 11,842 ವಿದ್ಯುತ್ ಬಿಲ್ ಪ್ರಕರಣಗಳಲ್ಲಿ 3.10 ಕೋಟಿ ರೂ. ಹಾಗೂ 99,866 ನೀರಿನ ಬಿಲ್ ಪ್ರಕರಣಗಳಲ್ಲಿ 25.04 ಕೋಟಿ ರೂ. ವಸೂಲಿ.
– ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಮುಂದೆ ಬಾಕಿ ಇದ್ದ 222 ಪ್ರಕರಣಗಳನ್ನು ಇತ್ಯರ್ಥಪಡಿಸಿ 5.85 ಕೋಟಿ ರೂ. ಪರಿಹಾರ ನೀಡಲಾಗಿದೆ.
– ಮಾಹಿತಿ ಹಕ್ಕು ಕಾಯ್ದೆಯಡಿ 97 ಪ್ರಕರಣ ಇತ್ಯರ್ಥ.
– ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ 194 ಪ್ರಕರಣ ಇತ್ಯರ್ಥ, 6.17 ಕೋಟಿ ರೂ. ಪರಿಹಾರ.
– 4,076 ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ 184 ಕೋಟಿ ರೂ. ಪರಿಹಾರ.
– 226 ವಾಣಿಜ್ಯ ದಾವೆ ಇತ್ಯರ್ಥ, 7.96 ಕೋ. ರೂ. ಪರಿಹಾರ ಪಾವತಿ.
Advertisement
– ಹೈಕೋರ್ಟ್‌ನಲ್ಲಿದ್ದ ಮೋಟಾರು ವಾಹನ ಕಾಯ್ದೆಯ ಪ್ರಕರಣವೊಂದರಲ್ಲಿ ಅತಿ ಹೆಚ್ಚು, ಅಂದರೆ 1.97 ಕೋಟಿ ರೂ. ಪರಿಹಾರ ನೀಡಲಾಗಿದೆ.– ಲಘು ವ್ಯಾಜ್ಯಗಳ ನ್ಯಾಯಾಲಯದ ಪ್ರಕರಣವೊಂದರಲ್ಲಿ 2.03 ಕೋಟಿ ರೂ. ಪರಿಹಾರ ದೊರಕಿಸಿಕೊಡಲಾಗಿದೆ.
– ಚೆಕ್ ಬೌನ್ಸ್ ಪ್ರಕರಣವೊಂದು 7.75 ಕೋಟಿ ರೂ. ಮೊತ್ತಕ್ಕೆ ಇತ್ಯರ್ಥ.