Advertisement

ಹಿರಿಯ ಪತ್ರಕರ್ತ, ರಂಗಕರ್ಮಿ ಗುಡಿಹಳ್ಳಿ ನಾಗರಾಜ್‌ ನಿಧನ

08:37 PM Aug 26, 2021 | Team Udayavani |

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಮತ್ತು ರಂಗಕರ್ಮಿ ಗುಡಿಹಳ್ಳಿ ನಾಗರಾಜ್‌ (67) ಅವರು ಗುರುವಾರ ನಿಧನ ಹೊಂದಿದ್ದಾರೆ. ಅವರು, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ 8 ಗಂಟೆ ವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಅಂತ್ಯಸಂಸ್ಕಾರ ದಾವಣಗೆರೆ ಜಿಲ್ಲೆಯ ಕೆರೆಗುಡಿಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಗುಡಿಹಳ್ಳಿಯವರಾದ ನಾಗರಾಜರವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ.ಇಂಗ್ಲಿಷ್‌ ಪದವಿ ಪಡೆದು ಆ ನಂತರ ಹರಪನಹಳ್ಳಿಯಲ್ಲಿ 3 ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

1983ರಲ್ಲಿ ಅವರು ಪತ್ರಿಕೋದ್ಯಮಕ್ಕೆ ಹೆಜ್ಜೆಯಿರಿಸಿದ್ದರು. ರಂಗಭೂಮಿಯ ಬಗ್ಗೆ ಅಪಾರ ಒಲವು ಹೊಂದಿದ್ದ ಗುಂಡಿಹಳ್ಳಿ ನಾಗರಾಜ ಅವರು 15ಕ್ಕೂ ಅಧಿಕ ರಂಗಕೃತಿಗಳನ್ನು ರಚಿಸಿದ್ದಾರೆ. ರಂಗನಾಟಕ ಪ್ರಯೋಗ ಸಾರ್ಥಕತೆ’, “ತೆರೆ ಸರಿದಾಗ’ (ಮಾಲತಿಶ್ರೀ ಮೈಸೂರು ಆತ್ಮಕತೆ), “ರಂಗಸಿರಿ’ (ಮರಿಯಮ್ಮನಹಳ್ಳಿ ಡಾ.ನಾಗರತ್ನಮ್ಮ ಆತ್ಮಕತೆ), “ಗುಬ್ಬಿ ವೀರಣ್ಣ’, “ಡಾ.ಲಕ್ಷ್ಮಣದಾಸ್‌’, “ಗಾನಕೋಗಿಲೆ’, “ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು’, “ಮೇಕಪ್‌ಮನ್‌ ಸುಬ್ಬಣ್ಣ’, “ರಂಗನೇವರಿಕೆ’, “ರಂಗಸಂದರ್ಶನ‌’, “ರಂಗದಿಗ್ಗಜರು’, “ಚಿಂದೋಡಿ ಲೀಲಾ’, “ಕಲಾಗ್ರಾಮ’, “ಜನಪರ ರಂಗಭೂಮಿ’, “ರಂಗಸೆಲೆ’ ಸೇರಿದಂತೆ ಹಲವು ಕೃತಿಗಳನ್ನು ರಂಗಭೂಮಿಗೆ ನೀಡಿದ್ದಾರೆ.

ಇದನ್ನೂ ಓದಿ:ಬಿಜೆಪಿ 30 ಸೀಟು ಮೇಲೆ ಗೆಲ್ಲುವುದಿಲ್ಲ: ರಾಮಲಿಂಗಾರೆಡ್ಡಿ

Advertisement

ಗುಡಿಹಳ್ಳಿ ನಾಗರಾಜ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷರಾಗಿ, ಪ್ರಸ್‌ಕ್ಲಬ್‌ ಬೆಂಗಳೂರುನ ಉಪಾಧ್ಯಕ್ಷರಾಗಿ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗುಡಿಹಳ್ಳಿ ನಾಗರಾಜ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌, ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಕನ್ನಡ ಸಾಂಸ್ಕೃತಿಕ ಲೋಕದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಗುಡಿಹಳ್ಳಿ ನಾಗರಾಜ ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಉತ್ತಮ ಬರಹಗಾರರನ್ನು ಕಳೆದು ಕೊಂಡಿದೆ ಎಂದು ಸಚಿವ ಸುನೀಲ್‌ಕುಮಾರ್‌ ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next