Advertisement

ಹಿರಿಯ ಚಿತ್ರ ನಿರ್ಮಾಪಕ, ಪ್ರದರ್ಶಕ ಕೆ.ಸಿ.ಎನ್‌. ಮೋಹನ್‌ ನಿಧನ

08:12 PM Jul 02, 2023 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ಪ್ರದರ್ಶಕ ಕೆ.ಸಿ.ಎನ್‌. ಮೋಹನ್‌ (63) ಅವರು ರವಿವಾರ ನಿಧನ ಹೊಂದಿದ್ದಾರೆ. ಬೆಂಗಳೂರಿನ ಊರ್ವಶಿ, ನವರಂಗ್‌ ಚಿತ್ರಮಂದಿರಗಳ ಮಾಲಕರಾಗಿದ್ದ ಅವರು ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement

ಅವರು “ಜೂಲಿ’, “ರಾಮರಾಜ್ಯದಲ್ಲಿ ರಾಕ್ಷಸರು’, “ಜಯಸಿಂಹ’, “ಧರ್ಮಯುದ್ಧ’, “ಭಲೇ ಚತುರ’ ಸಿನೆಮಾಗಳನ್ನು ನಿರ್ಮಾಣ ಮಾಡಿದ್ದರು. ಡಾ| ರಾಜ್‌ಕುಮಾರ್‌ ಅವರ ಹಲವು ಸಿನೆಮಾಗಳನ್ನು ನಿರ್ಮಾಣ ಮಾಡಿ, ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನೆಮಾಗಳನ್ನು ನೀಡಿರುವ ಹಿರಿಯ ನಿರ್ಮಾಪಕ ಕೆಸಿಎನ್‌ ಗೌಡ ಅವರ ಪುತ್ರರಾಗಿರುವ ಮೋಹನ್‌, ಹಲವು ಹಳೆಯ ಸಿನೆಮಾಗಳಿಗೆ ಆಧುನಿಕ ಸ್ಪರ್ಶ ನೀಡಿ ಬಿಡುಗಡೆ ಮಾಡಿದ್ದರು. ಇವರ ಪತ್ನಿ ಪೂರ್ಣಿಮಾ ಅವರು 2017ರಲ್ಲಿ ನಿಧನ ಹೊಂದಿದ್ದರು.

ಇವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ನವರಂಗ್‌ ಚಿತ್ರಮಂದಿರವನ್ನು ಪ್ರೇಕ್ಷಕರಿಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನವೀಕರಣ ಮಾಡಿದ್ದರು. ರಾಜ್ಯದಲ್ಲಿ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಮೋಹನ್‌ ಅವರು ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳ ನವೀಕರಣ ಮಾಡಿ, ಚಿತ್ರರಂಗವನ್ನು ಪ್ರೋತ್ಸಾಹಿಸುತ್ತಿದ್ದರು. ತಮ್ಮ ಪತ್ನಿಯ ಸಿನಿಮಾ ಆಸಕ್ತಿಗೆ ಪ್ರೋತ್ಸಾಹ ನೀಡಲು ಜೂಲಿ’ ಸಿನಿಮಾವನ್ನು ಮೋಹನ್‌ ನಿರ್ಮಿಸಿದ್ದರು. ಈ ಚಿತ್ರವನ್ನು ಅವರ ಪತ್ನಿ ಪೂರ್ಣಿಮಾ ಅವರೇ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ರಮ್ಯಾ ಹಾಗೂ ಡಿನೋ ಮೋರಿಯ ನಟಿಸಿದ್ದರು. 2017ರಲ್ಲಿ ಪೂರ್ಣಿಮಾ ಅವರು ನಿಧನರಾಗಿದ್ದರು. ಮೋಹನ್‌ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next