Advertisement

ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿ

09:10 AM Jul 21, 2020 | Suhan S |

ಯಮಕನಮರಡಿ: ಮತಕ್ಷೇತ್ರದ ನಾಲ್ಕು ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 92 ಶಾಲಾ ಕೊಠಡಿಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ಅವರು ಇತ್ತೀಚೆಗೆ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ, ಜಾರಕಿಹೊಳಿ, ಬೀರನಹೊಳಿ, ಕಾಟಾಬಳಿ, ಹಳೆವಂಟಮೂರಿ, ಇಸ್ಲಾಂಪೂರ, ಚಿಕ್ಕಲದಿನ್ನಿ, ಶಾಹಾಬಂದರ, ಗಜಪತಿ, ಗುಟ್ಟಗುಂದಿ, ರಾಜಕಟ್ಟಿ ಗ್ರಾಮದಲ್ಲಿ 21 ಶಾಲಾ ಕೊಠಡಿಗಳ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಅರಳಿಕಟ್ಟಿ ಸರ್ಕಾರಿ ಶಾಲಾ ಆವರಣ ತಿಪ್ಪೆಗುಂಡಿಯಾಗಿದ್ದು, ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ತಿಳಸಲಾಗಿದೆ. ಹಿಡಕಲ್‌ ಡ್ಯಾಂನಿಂದ ಅರಳಿಕಟ್ಟಿ ಗ್ರಾಮಕ್ಕೆ ಪೈಪ್‌ ಲೈನ್‌ ಮೂಲಕ ನೀರು ತರಲು ಹೊಸ ಯೋಜನೆ ರೂಪಿಸಲಾಗಿದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಸತೀಶ ಜಾರಕಿಹೊಳಿ ಅವರನ್ನು ವಿವಿಧ ಗ್ರಾಮಗಳ ಜನ ಸ್ವಾಗತಿಸಿದರು. ಶ್ರೀಕೃಪಾನಂದ ಸ್ವಾಮೀಜಿ, ಚಿಕ್ಕಲದಿನ್ನಿಯ ಶ್ರೀಅದೃಷ್ಯ ಸ್ವಾಮಿಜಿ, ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಮಂಜುನಾಥ ಪಾಟೀಲ, ಫಕೀರವ್ವಾ ಹಂಚಿನಮನಿ, ಹುಕ್ಕೇರಿ ತಾಪಂ ಅಧ್ಯಕ್ಷ ದಸ್ತಗೀರ ಬಸ್ಸಾಪೂರಿ, ಹುಕ್ಕೇರಿ ಬಿಇಒ ಮೋಹನ ದಂಡಿನ, ಪಿಡೂÉಡಿ ಎಇಇ ಎಸ್‌.ಕೆ.ಹುಕ್ಕೇರಿ, ಸಹಾಯಕ ಅಭಿಯಂತ ಜೆ.ಆಯ್‌.ಗುಜಕರಪಾಟೀಲ, ಈರಪ್ಪಾ ಬಂಜಿರಾಮ, ಈರಣ್ಣಾ ಬಿಸಿರೊಟ್ಟಿ, ರವೀಂದ್ರ ಜಿಂಡ್ರಾಳಿ, ಪ್ರಮೋದ ರಗಶೆಟ್ಟಿ, ಜಿ.ಬಿ.ಕುಲಕರ್ಣಿ, ರಾಜು ದರಗಶೆಟ್ಟಿ, ಅಬ್ದುಲ್‌ ಗಣಿ ದರ್ಗಾ, ಜಗಲಿಸಾಹೇಬ ನಾಯಿಕ, ಶಿವಾನಂದ ಡೊಮ್ಮನಾಯಿಕ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next