ಸೆಮಿ ಹೈಸ್ಪೀಡ್ ಯೋಜನೆ ಜಾರಿಗೆ ತರಲು ವಿದೇಶಿ ಕಂಪೆನಿಗಳಿಂದ ಸಾಲ ಪಡೆಯಲು ಉದ್ದೇಶಿಸಲಾಗಿದೆ.
Advertisement
ತಾಂತ್ರಿಕತೆ ಮತ್ತು ಸಾಲ ನೀಡಲು ಚೀನ ಸಹಿತ ವಿದೇಶಿ ಕಂಪೆನಿಗಳು ಮುಂದೆ ಬಂದಿವೆ. ರೈಲ್ವೇ ಇಲಾಖೆ ಮತ್ತು ರಾಜ್ಯ ಸರಕಾರದ ಸಹಭಾಗಿತ್ವವುಳ್ಳ ಕೆ.ಆರ್.ಡಿ.ಸಿ. ಲಿಮಿಟೆಡ್ ದ್ವಿಹಳಿ ನಿರ್ಮಾಣದ ರೂಪುರೇಶೆ ತಯಾರಿಸಿದೆ. ಹಳಿ ನಿರ್ಮಾಣಕ್ಕೆ 30 ಮೀಟರ್ ಅಗಲದಲ್ಲಿ ತಿರುವನಂತಪುರ ತನಕ ಭೂಸ್ವಾಧೀನ ಮಾಡಬೇಕಾಗುತ್ತದೆ.
ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯದ ಹಳಿ ನಿರ್ಮಾಣ ವಾಗ ಲಿದ್ದು ರೈಲುಗಾಡಿ ಗರಿಷ್ಠ 180 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಕಾಸರ ಗೋಡು, ಕಣ್ಣೂರು, ಕೋಯಿಕ್ಕೋಡ್, ವಳಾಂಚೇರಿ, ತೃಶ್ಶೂರ್, ಎರ್ನಾಕುಳಂ, ಕೋಟ್ಟಯಂ, ಚೆಂಗನ್ನೂರು, ಕೊಲ್ಲಂ, ತಿರುವನಂತಪುರದಲ್ಲಿ ನಿಲ್ದಾಣ ನಿರ್ಮಾಣ ವಾಗಲಿದೆ.
ನೆಡುಂಬಾಶೆÏàರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಸ್ತರಿಸುವ ರೀತಿ ಹಳಿ ನಿರ್ಮಾಣ ನಡೆಯಲಿದೆ. ಭೂಸ್ವಾಧೀನಕ್ಕೆ 13,071 ಕೋಟಿ ರೂ. ನಿರೀಕ್ಷಿಸಲಾಗಿದೆ. ಏಳು ವರ್ಷಗಳೊಳಗೆ ಯೋಜನೆ ಪೂರ್ತಿಗೊಳಿಸಲು ತೀರ್ಮಾನಿಸಲಾಗಿದ್ದು, 55,337 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. – 55,337 ಕೋಟಿ ರೂ. ಅಂದಾಜು ವೆಚ್ಚ
– 7 ವರ್ಷಗಳಲ್ಲಿ ಯೋಜನೆ ಪೂರ್ಣ
– 510 ಕಿ.ಮೀ.ಕೇವಲ ನಾಲ್ಕೇ ಗಂಟೆ ಪ್ರಯಾಣ!