Advertisement

ಸೆಲ್ವಂ ಪ್ರವಾಸ, ಸ್ಟಾಲಿನ್‌ ಉಪವಾಸ

03:50 AM Feb 23, 2017 | Team Udayavani |

ಚೆನ್ನೈ: ತಮಿಳುನಾಡಿನಲ್ಲಿ ಬಂಡಾಯದ ಕಹಳೆವೂದಿ ರಾಜಕೀಯ ಬಿಕ್ಕಟ್ಟಿಗೆ ಕಾರಣರಾದ ಮಾಜಿ ಸಿಎಂ ಪನ್ನೀರ್‌ಸೆಲ್ವಂ ಇದೀಗ ಹೊಸ ರೀತಿಯ ಚಳವಳಿಗೆ ಸಿದ್ಧತೆ ನಡೆಸಿದ್ದಾರೆ.

Advertisement

ಎಂಜಿಆರ್‌ ಮಾದರಿಯಲ್ಲೇ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಪನ್ನೀರ್‌ ನಿರ್ಧರಿಸಿದ್ದಾರೆ. ಇದಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ತೆರೆದ ಮಹೀಂದ್ರಾ ಜೀಪ್‌ನಲ್ಲಿ ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡಿ, ಶಶಿಕಲಾ ಬಣವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಿದ್ದಾರೆ. ಆದರೆ, ಇವರ ರಾಜ್ಯಪ್ರವಾಸ ಯಾವಾಗ ಆರಂಭವಾಗಲಿದೆ ಎಂಬ ಮಾಹಿತಿ ಸಿಕ್ಕಿಲ್ಲ.

ಇನ್ನೊಂದೆಡೆ, ಪಳನಿಸ್ವಾಮಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿರುವುದನ್ನು ಖಂಡಿಸಿ ಡಿಎಂಕೆ ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸಿದೆ. ಬುಧವಾರ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್‌ ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹವೂ ನಡೆಯಿತು. 

ಇದೇ ವೇಳೆ, ತಮಿಳುನಾಡು ವಿಧಾನಸಭೆಯ ನಿಯಮಗಳನ್ನು ಉಲ್ಲಂ ಸಿ ವಿಶ್ವಾಸಮತ ಪ್ರಕ್ರಿಯೆ ನಡೆದಿದೆ ಎಂಬ ಆರೋಪಕ್ಕೆ ಕುರಿತು ವಿಡಿಯೋ ಕ್ಲಿಪ್ಪಿಂಗ್‌ಗಳು, ಫೋಟೋಗಳು ಅಥವಾ ಇತರೆ ಸಾಕ್ಷ್ಯಗಳಿದ್ದರೆ ಒದಗಿಸಿ ಎಂದು ಡಿಎಂಕೆಗೆ ಮದ್ರಾಸ್‌ ಹೈಕೋರ್ಟ್‌ ಸೂಚಿಸಿದೆ. 

“ಅಮ್ಮಾ’ಗೆ ಕೊಕ್‌?
ರಾಜ್ಯ ಸರ್ಕಾರದ ಎಲ್ಲ ಯೋಜನೆಗ ಳಿಂದಲೂ ಮಾಜಿ ಸಿಎಂ ಜಯಲಲಿತಾ ಅವರ ಫೋಟೋವನ್ನು ಮತ್ತು “ಅಮ್ಮಾ’ ಎಂಬ ಹೆಸರನ್ನು ತೆಗೆದುಹಾಕುವಂತೆ ಕೋರಿ ರಿಟ್‌ ಅರ್ಜಿಯೊಂದು ಮದ್ರಾಸ್‌ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾ ಗಿದೆ. ಕೆ. ಬಾಲು ನೇತೃತ್ವದ ಸಾಮಾಜಿಕ ನ್ಯಾಯಕ್ಕಾಗಿ ವಕೀಲರ ವೇದಿಕೆ ಎಂಬ ಸಂಘಟನೆಯು ಈ ಅರ್ಜಿ ಸಲ್ಲಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next