Advertisement

ಸೆಳ್ಕೋಡು -ಗೋಳಿಗುಡ್ಡೆ ಧೂಳಿನ ಮಾರ್ಗಕ್ಕೆ ಮುಕ್ತಿ ಎಂದು?

12:50 AM Jan 27, 2019 | Harsha Rao |

ಕೊಲ್ಲೂರು: ಜಡ್ಕಲ್‌ ಗ್ರಾ,ಪಂ.ವ್ಯಾಪ್ತಿಯ ಸೆಳ್ಕೋಡು-ಗೋಳಿ ಗುಡ್ಡೆ ರಸ್ತೆ ಸಂಪೂರ್ಣ ಧೂಳುಮಯವಾಗಿದ್ದು, ನಿವಾಸಿಗಳು ಪರಿತಪಿಸುವಂತಾಗಿದೆ.

Advertisement

ಚುನಾವಣೆ ಸಂದರ್ಭ ಮಾತ್ರ ಭರವಸೆ

ಕಳೆದ ಹಲವು ವರ್ಷಗಳಿಂದ ಸೆಳ್ಕೋಡು ಬೇಕರಿಯಿಂದ ಸರಕಾರಿ ಶಾಲೆಗೆ ತೆರಳುವ 2 ಕಿ.ಮೀ. ರಸ್ತೆ ಹದಗೆಟ್ಟಿದ್ದರೂ ರಿಪೇರಿ ಆಗಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್ಚೆತ್ತುಕೊಳ್ಳುವ ಜನಪ್ರತಿನಿಧಿಗಳು ಭರವಸೆ ನೀಡಿ ಬಳಿಕ ಜಾಣ ಮರೆವು ಪ್ರದರ್ಶಿಸುತ್ತಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಧೂಳು, ಹೊಂಡಮಯ ರಸ್ತೆ

ಧೂಳು ಮತ್ತು ಹೊಂಡ- ಗುಂಡಿಗಳಿರುವ ಮಾರ್ಗದಲ್ಲಿ ವಾಹನದಲ್ಲಿ ಅಥವಾ ಕಾಲ್ನಡಿಗೆಯಲ್ಲಿ ಸಾಗುವ ವಿದ್ಯಾರ್ಥಿಗಳ ಪಾಡು ದೇವರಿಗೇ ಪ್ರೀತಿ. ಈ ರಸ್ತೆಯನ್ನು ಅವಲಂಬಿಸಿ ಹೋಗುವವರಿಗೆ ಶಾಲೆ ಸೇರುವುದು ಹರಸಾಹಸವೇ ಸರಿ.

Advertisement

ಹಿಂದೆ ಇದ್ದ ಚರಂಡಿಯೂ ಈಗ ನಾಪತ್ತೆಯಾಗಿದ್ದು, ಗಮನ ವಹಿಸಬೇಕಾದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.

ಸುಮಾರು 600 ಮಂದಿ ಮರಾಠಿ ಜನಾಂಗದವರು ಈ ಭಾಗದಲ್ಲಿ ವಾಸವಿದ್ದು, 150 ಮನೆಗಳಿವೆ.

ಬಸ್ರಿಬೇರು, ಮೆಕ್ಕೆ, ತಲಕಾಣ ಹಾಗೂ ಸೆಳ್ಕೋಡು ಗ್ರಾಮದ ಮತದಾನ ಕೇಂದ್ರದ ಮುಖ್ಯ ರಸ್ತೆ ಇದಾಗಿದ್ದರೂ ಇಲ್ಲಿನ ಸಮಸ್ಯೆಗೆ ಮುಕ್ತಿ ಸಿಗದೇ ಇರುವುದು ವಿಪರ್ಯಾಸವೇ ಸರಿ.

ಮತದಾನ ಬಹಿಷ್ಕಾರ

ಸೆಳ್ಕೋಡು ಬೇಕರಿಯಿಂದ ಸರಕಾರಿ ಹಿ.ಪ್ರಾ.ಶಾಲೆವರೆಗೆ ಸಂಪೂರ್ಣ ಕಾಂಕ್ರೀಟೀಕರಣ ಅಥವಾ ಡಾಮರೀಕರಣವಾಗದಿದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆ ವೇಳೆ ಮತದಾನ ಬಹಿಷ್ಕರಿಸಲಾಗುವುದು. – ಬಸವ ನಾಯ್ಕ, ಸ್ಥಳೀಯರು.

ಹಣ ಬಿಡುಗಡೆ

ಇಲ್ಲಿನ ರಸ್ತೆ ದುರವಸ್ಥೆ ಬಗ್ಗೆ ಗಮನಕ್ಕೆ ಬಂದಿದೆ. ಬೈಂದೂರಿನ ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿಗೆ 100 ರೂ. ಕೋಟಿ ಅನುದಾನ ಬಿಡುಗಡೆಗೊಂಡಿದ್ದು ರಸ್ತೆ ಡಾಮರೀಕರಣಕ್ಕೆ ಅದ್ಯತೆ ಮೇರೆಗೆ ಹಣ ವಿನಿಯೋಗ ಮಾಡಲಾಗುವುದು. – ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು, ಬೆ„ಂದೂರು.

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next