Advertisement
ಹಲವು ಆಚಾರ, ವಿಚಾರ ಸಂಪ್ರದಾಯಗಳನ್ನು ಹೊಂದಿದ್ದರೂ ಏಕತೆಯನ್ನು ಪ್ರತಿಪಾದಿಸುತ್ತದೆ.
Related Articles
Advertisement
ಭಾರತ ಕೃಷಿ ಪ್ರಧಾನ ರಾಷ್ಟ್ರ. ದೇಶದ ಬಹುತೇಕರ ಸ್ವಾವಲಂಬಿ ಜೀವನಕ್ಕೆ ಇದು ಅನುಕೂಲವಾಗಿದೆ. ದೇಶದ ಗ್ರಾಮೀಣ ಭಾಗದಲ್ಲಿ ಮೂಲ ಕಸುಬು ಕೃಷಿ ಕ್ಷೇತ್ರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದೆಡೆಗಿನ ಒಲುವು ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಗಮನಹರಿಸುವುದು ಕೂಡ ಅಗತ್ಯ. ಏಕೆಂದರೆ ದೇಶದ ಅಭಿವೃದ್ಧಿಯಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಅಗ್ರಗಣ್ಯವಾಗಿದೆ.
ಸ್ವದೇಶಿ ವಸ್ತುಗಳ ಬಳಕೆ ವೃದ್ಧಿಯಾಗಲಿದಿನ ನಿತ್ಯ ವಸ್ತುಗಳಿಗೆ ವಿದೇಶಿ ವಸ್ತುಗಳನ್ನು ಬಳಸುವುದರ ಬದಲು ಸ್ವದೇಶಿ ವಸ್ತುಗಳನ್ನು ಬಳಸುವುದರಿಂದ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಇದು ಸ್ವದೇಶಿ ಭಾರತಕ್ಕೆ ಕೂಡ ಪ್ರೋತ್ಸಾಹದಾಯಕವಾಗಲಿದೆ. ಬಡವರು, ದಿನಗೂಲಿ ಕಾರ್ಮಿಕರು, ವಲಸಿಗರು, ನಿರ್ಗತಿಕರು, ರೈತರು, ಸ್ವಯಂ ಉದ್ಯೋಗಿಗಳು, ಬೀದಿಬದಿ ವ್ಯಾಪಾರಿಗಳು, ಸಣ್ಣ, ಅತಿಸಣ್ಣ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ಉತ್ಪಾದಕ ಹಾಗೂ ಸೇವಾ ವಲಯಗಳಿಗೆ ಉದ್ಯೋಗಾವಕಾಶವನ್ನು ನೀಡುವ ಮೂಲಕ ಸ್ವದೇಶಿ ವಸ್ತುಗಳ ಉತ್ಪನ್ನ ಹಾಗೂ ಬಳಕೆಯನ್ನು ಜಾಸ್ತಿ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಕೋವಿಡ್-19ರಿಂದ ಜನರಿಗೆ ಸ್ವಾವಲಂಬನೆಯ ಬದುಕಿನ ಪಾಠ ಅರಿವಾಗಿದೆ . ಜನರು ತಮ್ಮ ದೈನಂದಿನ ವಸ್ತುಗಳಿಗೆ ಬೇರೆಯವರ ಪರ ಅವಲಂಬಿತವಾಗಿಲ್ಲ ಎಂಬುದು ಸಾಬೀತುಪಡಿಸಿದೆ. ಸಣ್ಣ ಸಣ್ಣ ಕೈಗಾರಿಕೆಗಳಿಗೆ ಕೃಷಿ ವಲಯಗಳಿಗೆ ಹೆಚ್ಚು ಉತ್ತೇಜನ ನೀಡುವ ಮೂಲಕ ಸ್ವದೇಶಿ ಉತ್ಪನ್ನಗಳ ತಯಾರಿಕೆಗೂ ನಾವು ಉತ್ತೇಜಿಸಬೇಕು. ವಿದೇಶಿ ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಆತ್ಮ ನಿರ್ಭರದಿಂದ ಆತ್ಮವಿಶ್ವಾಸ ಭಾರತ ನಮ್ಮದಾಗಬೇಕು. ಕೆಲವೊಂದು ಪರಂಪರೆಯ ಉತ್ಪನ್ನಗಳಿಗೆ ಪ್ರೋತ್ಸಾಹದ ಜತೆಯಲ್ಲಿ ಉತ್ಪಾದಕರಿಗೆ ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ಖರೀದಿದಾರರು ಸಹ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವಲ್ಲಿ ಆಸಕ್ತಿ ವಹಿಸಿ ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸುವತ್ತ ಗಮನ ಹರಿಸಬೇಕು. ಸ್ಥಳೀಯರಿಂದಲೇ ತಯಾರಾಗುವ ವಸ್ತುಗಳನ್ನು ಖರೀದಿಸುವ ಮೂಲಕ ಸ್ವದೇಶಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಬೇಕು. ಹಾಗೆಯೇ ವಿದೇಶಗಳಿಗೆ ನಮ್ಮ ಭಾರತ ಮಾದರಿಯಾಗಬೇಕು. ಸ್ವಾವಲಂಬನೆಯ ಬದುಕೇ ಉತ್ತಮ ಎಂದೆನಿಸಬೇಕು. ಅಭಿವೃದ್ಧಿಯ ಕಡೆಗೆ ನಮ್ಮ ಭಾರತ ಜಯವನ್ನು ಸಾಧಿಸಬೇಕು. ಸ್ವಾವಲಂಬನೆಯ ಭಾರತಕ್ಕೆ ನಾವೆಲ್ಲರೂ ಕೊಡುಗೆಯಾಗಬೇಕು ಎಂಬುದು ನಮ್ಮೆಲ್ಲರ ಸದಾಶಯ.