ಬಂಗಾರಪೇಟೆ: ಗ್ರಾಮೀಣ ಪ್ರದೇಶದಲ್ಲಿಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ದು,ಪ್ರತಿಯೊಬ್ಬರೂ ಮನೆ ಸುತ್ತಮುತ್ತಲು ಸ್ವತ್ಛತೆಕಾಪಾಡಿಕೊಳ್ಳುವುದರ ಜೊತೆಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದುಗುಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ನೀಲಬಾಯಿಗೋವಿಂದ ರಾಜು ಮನವಿ ಮಾಡಿದರು.
ತಾಲೂಕಿನ ಮೂತನೂರು ಗ್ರಾಮದಲ್ಲಿಗ್ರಾಪಂನಿಂದ ಸೋಂಕು ನಿವಾರಣ ದ್ರಾವಣಸಿಂಪಡಿಸಲು ಚಾಲನೆ ನೀಡಿ ಮಾತನಾಡಿ,ಕೊರೊನಾ ಮೊದಲ ಅಲೆಗಿಂತ 2ನೇ ಅಲೆಸೋಂಕು ಗ್ರಾಮಗಳಲ್ಲಿ ವೇಗವಾಗಿ ಹರಡುತ್ತಿದೆ. ನಿಯಂತ್ರಣಕ್ಕೆ ತರುವುದು ತರ್ತುಅಗತ್ಯವಿದೆ,ಇದಕ್ಕೆ ಗ್ರಾಮದಪ್ರತಿಯೊಬ್ಬರೂಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗುಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಮೂತನೂರು, ಪಾತರಾಮಗೊಳ್ಳ ಸೇರಿ ಹಲವುಗ್ರಾಮಗಳು ತಮಿಳುನಾಡಿನ ಗಡಿಭಾಗದಲ್ಲಿರುವ ಕಾರಣ, ಆ ರಾಜ್ಯದಿಂದ ಗ್ರಾಮಕ್ಕೆಬರುವಂತಹವರ ಮೇಲೆ ನಿಗಾವಹಿಸಬೇಕು.ಮರಾಠಹೊಸಹಳ್ಳಿ, ಮೂತನೂರು, ಗುಲ್ಲಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಕೊರೊನಾಸೋಂಕು ಕಾಣಿಸಿಕೊಂಡಿದೆ.
ಗ್ರಾಮಗಳ ರಸ್ತೆಗಳು, ಚರಂಡಿ, ಜನ ಸಂಚಾರ ಇರುವಂತಹಸ್ಥಳಗಳಲ್ಲಿ ಸೋಂಕು ನಿವಾರಕ ದ್ರಾವಣಗ್ರಾಪಂನಿಂದ ಸಿಂಪಡಿಸಲಾಗುತ್ತಿದೆ ಎಂದು ವಿವರಿಸಿದರು.
ಕೊರೊನಾ ಸೋಂಕು ನಿಯಂತ್ರಣಕ್ಕೆಸರ್ಕಾರ ಹಾಗೂ ಜಿಲ್ಲಾಡಳಿತ ಜಾರಿ ಮಾಡಿರುವ ಲಾಕ್‌ಡೌನ್‌ಗೆ ಪ್ರತಿಯೊಬ್ಬರೂಬೆಂಬಲ ನೀಡಬೇಕು. ಬೇಕಾಬಿಟ್ಟಿ ಓಡಾಡದೇ, ತುರ್ತು ಅವಶ್ಯಕತೆ ಇದ್ದಲ್ಲಿ ಮಾತ್ರಮನೆಯಿಂದ ಹೊರಗೆ ಬರಬೇಕು. ತಪ್ಪದೇಮಾಸ್ಕ್ ಬಳಸಬೇಕು ಎಂದು ಮನವಿ ಮಾಡಿದರು. ಗ್ರಾಪಂ ಉಪಾಧ್ಯಕ್ಷೆ ಸುಷ್ಮಾ ಶಿವಾ ನಂದ,ಮಾಜಿ ಉಪಾಧ್ಯಕ್ಷ ಟಿ.ವೆಂಕಟೇಶ್, ಸದಸ್ಯರಾದ ಬಿ.ಮಂಜುನಾಥ, ಕುಪ್ಪಯ್ಯ, ಮುನಿಯಪ್ಪ ಮುಂತಾದವರು ಉಪಸ್ಥಿತರಿದ್ದರು.