Advertisement

ಸ್ವಯಂ ಚಾಲಿತ ಪಂಪ್‌

11:24 AM Nov 19, 2017 | |

ಬೆಂಗಳೂರು: ಸಿಂಪರಣೆಗೆ ಕೈಪಂಪ್‌ ಮಾಡಬೇಕಿಲ್ಲ. ಡೀಸೆಲ್‌ ಅವಶ್ಯಕತೆಯೂ ಇಲ್ಲ. ಬೆನ್ನಿಗೆ ಹಾಕಿಕೊಂಡು ಹೊರಟರೆ ಸಾಕು, ಯಂತ್ರ ಸ್ವಯಂಚಾಲಿತವಾಗಿ ಸಿಂಪರಣೆ ಮಾಡುತ್ತದೆ. 

Advertisement

ಬೆನ್ನಿಗೇರಿಸಿಕೊಂಡು ಹೋಗಬಹುದಾದ ಈ ಪಂಪಿನ ಮೇಲ್ಭಾಗದಲ್ಲಿ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಲಾಗಿದೆ. ಅದರ ಮೇಲೆ ಬೀಳುವ ಸೂರ್ಯನ ಕಿರಣಗಳನ್ನು ಹಿಡಿದಿಟ್ಟುಕೊಂಡು, ಪಂಪ್‌ ಕೆಳಭಾಗದಲ್ಲಿರುವ ಯಂತ್ರಕ್ಕೆ ಕಳುಹಿಸುತ್ತದೆ. ಅದು ಔಷಧ ಸಿಂಪರಣಾ ಹಿಡಿಕೆಗೆ ವರ್ಗಾವಣೆ ಆಗುತ್ತದೆ. 

ಇದರ ಸಾಮರ್ಥ್ಯ 16 ಲೀ. ಇದ್ದು, ಒಟ್ಟಾರೆ 20 ಕೆಜಿ ತೂಗುತ್ತದೆ. ಸಾಮಾನ್ಯ ಕೈಪಂಪುಗಳಿಂದ ಕೈನೋವು ಬರುತ್ತದೆ. ಡೀಸೆಲ್‌ ಚಾಲಿತ ಪಂಪ್‌ಗೆ ಎಕರೆಗೆ ಕನಿಷ್ಠ 5ರಿಂದ 6 ಲೀ. ಡೀಸೆಲ್‌ ಬೇಕಾಗುತ್ತದೆ. ಆದರೆ, ಇದಕ್ಕೆ ಯಾವುದೇ ಖರ್ಚು-ವೆಚ್ಚ ಇಲ್ಲ. ಕೈನೋವು ಕೂಡ ಬರುವುದಿಲ್ಲ. ಕನಿಷ್ಠ 4ರಿಂದ 5 ತಾಸು ನಿರಂತರವಾಗಿ ಸಿಂಪರಣೆ ಮಾಡಬಹುದು.

ತಲೆ ಮೇಲೆ ನೆರಳೂ ಆಗುತ್ತದೆ ಎಂದು ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವಸಂತಕುಮಾರ್‌ ತಿಳಿಸಿದರು. ಹಾಗೊಂದು ವೇಳೆ ಮಳೆ ಇದ್ದರೆ, ಬ್ಯಾಟರಿಯನ್ನು ಕನಿಷ್ಠ ನಾಲ್ಕು ತಾಸು ಚಾರ್ಜ್‌ ಮಾಡಬೇಕು. ಇದರಿಂದ 4ರಿಂದ 5 ತಾಸು ಈ ಯಂತ್ರ ಕಾರ್ಯನಿರ್ವಹಿಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next