Advertisement

ಸ್ವಾಭಿಮಾನಿ ಜೀವನಕ್ಕೆ ಶಿಕ್ಷಣ ಅವಶ್ಯ

01:59 PM Aug 23, 2017 | Team Udayavani |

ಎನ್‌.ಆರ್‌.ಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ವಾಭಿಮಾನದ ಜೀವನ ಕಟ್ಟಿಕೊಳ್ಳಲು ಅಕ್ಷರ ಶಿಕ್ಷಣ ಅತಿ ಮುಖ್ಯ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ| ಬಿ.ಎಂ.ಪುಟ್ಟಯ್ಯ ತಿಳಿಸಿದರು.

Advertisement

ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಸಾಮಾಜಿಕ ಹೊಣೆಗಾರಿಕೆ ಹೊರಬೇಕಾಗಿದೆ. ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕ ಹೊಣೆಗಾರಿಕೆ ಎಲ್ಲರ ಮೇಲಿದೆ. ಆದರೆ ನಮ್ಮ ದೊಡ್ಡ ದುರಂತವೆಂದರೆ ಟಿ.ವಿ. ಮೊಬೈಲ್‌, ಇಂಟರ್‌ನೆಟ್‌ ನಿಂದಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂದರು. ದಲಿತರು, ಹಿಂದುಳಿದವರು, ಬಡವರು ಶಿಕ್ಷಣ ಪಡೆದಿರುವುದರಿಂದ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಬಾರದು. ತಂದೆ ತಾಯಿಗಳನ್ನು ಗೌರವಿಸಬೇಕು. ನಿಮ್ಮ ಭವಿಷ್ಯ ಉಜ್ವಲವಾಗಲು ಸೋಮಾರಿತನ ಬಿಟ್ಟು ಭವಿಷ್ಯದಲ್ಲಿ ಉಜ್ವಲ ಶಿಕ್ಷಣ ಪಡೆಯಿರಿ. ಎಂದು ಹೇಳಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಶಾಂತ್‌ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲೇಜಿಗೆ ರಂಗಮಂದಿರದ ಅವಶ್ಯಕತೆಯಿದೆ. ಈ ಬಗ್ಗೆ ನಮ್ಮ ಸಂಘವು ಪ್ರಯತ್ನಿಸುತ್ತಿದೆ. ಮಾಜಿ ಎಂ.ಎಲ್ಸಿ,  ಎಂ.ಶ್ರೀನಿವಾಸ್‌ ಅವರು ಕಾಲೇಜಿನ ಕಾಂಪೌಂಡ್‌ನ‌ ಹೆಚ್ಚವರಿ
ನಿರ್ಮಾಣಕ್ಕೆ 5 ಲಕ್ಷ ನೀಡಿದ್ದಾರೆ ಎಂದರು. ಕಾಲೇಜಿನ ಭಾಷಾ ಉಪನ್ಯಾಸಕ ಡಾ| ಅಣ್ಣಪ್ಪ ಎನ್‌. ಮಳೀಮs… ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ವೇದಿಕೆ ಸೇರಿದಂತೆ ಹಲವಾರು ವೇದಿಕೆಗಳನ್ನು ಹುಟ್ಟು ಹಾಕಲಾಗಿದೆ. ವಿದ್ಯಾರ್ಥಿಗಳನ್ನು ಸೃಜನಶೀಲರಾಗಿಸುವುದು ನಮ್ಮ ಉದ್ದೇಶವಾಗಿದೆ ಎಂದರು. 

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಪ್ರೊ|ಡಾ| ಕೆ.ಉಮೇಶ್‌ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಶೇಖರ್‌, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ದಿನೇಶ್‌, ಗಣಪತಿ, ವಿದ್ಯಾರ್ಥಿಗಳಾದ ಅನುಷಾ, ಅಜಿತ್‌, ಸಬಾಷ್ಟಿನ್‌ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next