Advertisement

ಆತಂಕ ನಿವಾರಣೆಗೆ ಸೆಲ್ಫ್  ಹಿಪ್ನಾಟಿಸಂ

11:31 PM Jan 13, 2020 | mahesh |

ಭಯ ಯಾರಿಗೆ ತಾನೆ ಇರುವುದಿಲ್ಲ. ಕೆಲಸಕ್ಕೆ ತೆರಳುವಾಗ, ಪರೀಕ್ಷೆ ಬರೆಯುವಾಗ, ಕೆಲಸದ ಗಡುವು ಸಮೀಪಿಸಿದಾಗ, ಒತ್ತಡ ಸನ್ನಿವೇಶ ಇದ್ದಾಗ ಮನುಷ್ಯನಿಗೆ ಸಾಮಾನ್ಯವಾಗಿ ಭಯ ಕಾಡುತ್ತದೆ. ಆತಂಕ ಅಥವಾ ಭಯ ಸಾಮಾನ್ಯವಾಗಿ ಮಾನವರಲ್ಲಿ ಪ್ರಭಾವ ಬೀರುತ್ತದೆ. ಭಯವು ಯೋಚನೆಗಳ, ಭಾವನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

Advertisement

ಇತ್ತೀಚಿನ ದಿನಗಳಲ್ಲಿ ಭಯ ಎನ್ನುವುದು ಒಂದು ಖಾಯಿಲೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ಇಂದಿನ ಕಾಲದ ಆಧುನಿಕ ಕಾಲಘಟ್ಟದಲ್ಲಿ ನಮ್ಮ ಜೀವನಶೈಲಿಯು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಆತಂಕವೇ ದೊಡ್ಡ ಖಾಯಿಲೆಯಾಗಿ ಪರಿಣಮಿಸುತ್ತದೆ. ಕೆಲವೊಮ್ಮೆ ಕೆಟ್ಟ ಕನಸುಗಳು ಭಯಕ್ಕೆ ಕಾರಣವಾಗಬಹುದು. ಕನಸಿನ ಕಲ್ಪನೆಯಲ್ಲಿ ಭ್ರಮೆಗಳು ಈಗಲೂ ಕಣ್ಣ ಮುಂದೆ ಆ ಘಟನೆ ನಡೆಯುತ್ತಿದೆಯೋ ಎಂಬಂತಿನ ಭಯ ಇರಬಹುದು.

ಅಸಂಭವನೀಯ ವಿಚಾರವು ನಮ್ಮ ಮನಸ್ಸಿನ ಒಳಹೊಕ್ಕಾಗ ನಮ್ಮ ಕಲ್ಪನೆಗೆ ಅನುಗುಣವಾಗಿ ನಾವು ಯೋಚಿಸಲಾರಂಭಿಸುತ್ತೇವೆ.

ಆ ಸನ್ನಿವೇಶಗಳು ಭಯ ಸೃಷ್ಟಿಸುತ್ತದೆ. ಆದರೆ ಈ ಸನ್ನಿವೇಶಗಳು ಕಲ್ಪನೆಯೇ ಆಗಿರಬಹುದು. ನಾವು ಇದನ್ನು ಭಯದ ದೃಷ್ಠಿಕೋನದಲ್ಲಿ ನೋಡಲು ಆರಂಭಿಸುತ್ತೇವೆ. ಭಯವು ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ.

ಭಯ ಎಂದಾಗ ಮನುಷ್ಯನ ಮನಸ್ಸು ಶೂನ್ಯವಾಗುತ್ತದೆ. ಆ ವೇಳೆ ಮನಸ್ಸಿನಲ್ಲಿ ಯಾವುದೇ ವಿಚಾರ, ಆಲೋಚನೆಗಳು ಹೊಳೆಯುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ವಿಚಾರದಲ್ಲಿ ಭಯ ಇರಬಹುದು. ಮನಸ್ಸಿನ ಶುದ್ಧೀಕರಣವೇ ಇದಕ್ಕೆಲ್ಲ ಮದ್ದು. ಮನಸ್ಸಿನಲ್ಲಿ ಏನೇನೋ ಯೋಚನೆಗಳನ್ನು ಮಾಡಿ ಇಲ್ಲ ಸಲ್ಲದ ಭಯ ಪಡುವವರೂ ಅನೇಕ ಮಂದಿ ಇದ್ದಾರೆ. ಹೀಗಿರುವಾಗ ನಮಗೆ ಯಾವ ವಿಷಯದ ಬಗ್ಗೆ ಭಯ ಎನ್ನುವುದನ್ನು ತಿಳಿದು ಅದನ್ನು ಆತ್ಮೀಯರೊಡನೆ ಚರ್ಚೆ ಮಾಡುವುದು ಉತ್ತಮ.

Advertisement

ಕೆಲವೊಬ್ಬರಿಗೆ ಮೂಢನಂಬಿಕೆಗಳ ಬಗ್ಗೆ ಯಾವುದೇ ನಂಬಿಕೆ ಇಲ್ಲದಿದ್ದರೂ, ಅಕಸ್ಮಾತ್‌ ಅದು ನಡೆದು ಹೋದ ಬಳಿಕ ಭಯ ಆರಂಭವಾಗುತ್ತದೆ. ಈ ವೇಳೆ ಸಕಾರಾತ್ಮಕ ದೃಷ್ಟಿಕೋನವನ್ನು ನಾವು ಬೆಳೆಸಿಕೊಳ್ಳಬೇಕು. ಯಾವುದೇ ನಿರ್ಣಯಗಳನ್ನು ಕೈಗೊಳ್ಳುವಾಗ ಯೋಚಿಸಿ ಅನುಷ್ಠಾನಕ್ಕೆ ತರಬೇಕು. ಭಯ ನಿವಾರಿಸುವುದಕ್ಕೆ ಪ್ರಯತ್ನಿಸಿ ತಜ್ಞ ವೈದ್ಯರನ್ನು ಭೇಟಿಯಾಗಬಹುದು.

ಭಯದಿಂದ ಕೆಲವೊಂದು ಬಾರಿ ನಮ್ಮ ವ್ಯಕ್ತಿತ್ವದ ಮೇಲೆ ಪೆಟ್ಟು ಬೀಳಬಹುದು. ಭಯವನ್ನು ಮಾನಸಿಕ ಚಿಕಿತ್ಸೆಯಿಂದ ನಿವಾರಿಸಲು ಸಾಧ್ಯವಿದೆ. ಮನಶಾಸ್ತ್ರಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಬಹುದು. ಭಯ ಎಂಬ ಖಾಯಿಲೆಗೆ ಒಳಗಾಗಿದ್ದರೆ ಮನುಷ್ಯನು ತನ್ನ ಚಿಂತನ ಲಹರಿಯನ್ನು ಬದಲಾಯಿಸಲು ಪ್ರಯತ್ನಿಸಬೇಕು.

ಭಯದ ಲಕ್ಷಣಗಳೇನು?
ಭಯ ಎಂದರೆ ಮನುಷ್ಯನಲ್ಲಿ ಕೆಲವೊಂದು ಬದಲಾವಣೆಗಳಾಗುತ್ತದೆ. ಸಾಮಾನ್ಯವಾಗಿ ಕೆಲವೊಬ್ಬರು ನಿದ್ರಾಹೀನತೆ, ಏಕಾಗ್ರತೆಯಿರದಿರುವುದು, ಬೆಚ್ಚಿ ಬೀಳುವುದು ಕೂಡ ಭಯದ ಸೂಚನೆಗಳು. ಅದರ ಜತೆಗೆ ಉಸಿರಾಟದ ವೇಗ ಹೆಚ್ಚತೊಡಗುತ್ತದೆ. ತಲೆ ತಿರುಗಿದಂತಾಗುತ್ತದೆ. ಬಾಯಿ ಒಣಗುತ್ತದೆ. ಹೃದಯ ಬಡಿತ ಹೆಚ್ಚಾಗುತ್ತದೆ. ಅತಿಸಾರ, ಭೇದಿಯೂ ಕಾಣಿಸಿಕೊಳ್ಳಬಹುದು.

ಭಯ ಎಂದಾಗ ತೀವ್ರವಾಗಿ ಬೆವರುವುದನ್ನು ನೋಡುತ್ತೇವೆ. ಗಂಟಲಿನಲ್ಲಿ ಏನೋ ಸಿಕ್ಕಂತೆ ಆಗಿ ಎಂಜಲು ನುಂಗಲು ಕಷ್ಟವಾಗುತ್ತದೆ. ಮಾತು ತೊದಲುತ್ತದೆ. ಇಲ್ಲ ಸಲ್ಲದ ವಿಚಾರಗಳು ಮನಸ್ಸಿಗೆ ಸುಳಿಯಲಾರಂಭಿಸುತ್ತದೆ. ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಬರುತ್ತದೆ. ಕೈ-ಕಾಲಿನಲ್ಲಿ ನಿಶಕ್ತಿ ಉಂಟಾಗುತ್ತದೆ. ಮಾತು ತೊದಲುತ್ತದೆ. ಈ ಎಲ್ಲ ಲಕ್ಷಣಗಳು ಮನುಷ್ಯನಲ್ಲಿ ತೀವ್ರ ಭಯವಾದಾಗ ಕಾಣಿಸಿಕೊಳ್ಳುತ್ತದೆ.

ಸೆಲ್ಫ್ ಹಿಪ್ನಾಟಿಸಂ ಪರಿಹಾರ
ನಮಗೆ ನಾವೇ ಧೈರ್ಯ ಹೇಳುವುದಕ್ಕೆ ಸೆಲ್ಫ್ ಹಿಪ್ನಾಟಿಸಂ ಎಂದು ಹೇಳಬಹುದು.
ನಾಳೆಯ ಬಗ್ಗೆ ಕೆಲವರು ಇಂದೇ ಭಯ ಬಿದ್ದು ತಮ್ಮ ಜೀವನವನ್ನು ಹಾಳುಗೆಡುವವರಿದ್ದಾರೆ. ಹೀಗಿರುವಾಗ ಯಾರಿಗೂ ಅಂಜಬೇಕಿಲ್ಲ ಎಂದು ಮನಸ್ಸಿನಲ್ಲಿಯೇ ನಮಗೆ ನಾವೇ ಧೈರ್ಯ ಹೇಳಬೇಕು. ಆ ಸಮಯ ಯಾವುದಕ್ಕೂ ಭಯ ಪಡದೆ ಗುರಿ ತಲುಪಲು ಸಾಧ್ಯವಿದೆ.

ವಯೋಮಾನಕ್ಕೆ ತಕ್ಕಂತೆ ಭಯ
ಇತ್ತೀಚಿನ ದಿನಗಳಲ್ಲಿ ಭಯ ಎನ್ನುವುದು ಒಂದು ಸಾಮಾನ್ಯ ಖಾಯಿಲೆ ಯಾಗಿದೆ. ಮಕ್ಕಳಿಗೆ, ಯುವಕರಿಗೆ ಸೇರಿದಂತೆ ಬೇರೆ ಬೇರೆ ವಯೋಮಾನಕ್ಕೆ ತಕ್ಕಂತೆ ಭಯ ಇರಬಹುದು. ಮನುಷ್ಯನಿಗೆ ತನ್ನಲ್ಲೇ ಧೈರ್ಯ ಇದ್ದಾಗ ಯಾವುದೇ ಭಯ ಸುಳಿಯುವುದಿಲ್ಲ. ಭಯ ಎನ್ನುವುದು ಖಾಯಿಲೆಯಾದಾಗ ವೈದ್ಯರನ್ನು ಸಂಪರ್ಕಿಸಬೇಕು.
– ಡಾ| ಸುಭೋದ್‌ ಭಂಡಾರಿ, ವೈದ್ಯರು

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next