ಯಾದಗಿರಿ: ಉದ್ಯಮಗಳನ್ನು ಪ್ರಾರಂಭಿಸಲುಬೇಕಾಗುವ ಎಲ್ಲ ಮಾಹಿತಿಗಳನ್ನುಪಡೆದು ಸ್ವಯಂ ಉದ್ಯಮ ಪ್ರಾರಂಭಿಸಿಆರ್ಥಿಕ ಅಭಿವೃದ್ಧಿ ಸಾಧಿಸಬೇಕು.ಮಹಿಳೆಯರು ಸ್ವಯಂ ಉದ್ಯೋಗದಿಂದಸ್ವಾವಲಂಬಿಯಾಗಲು ಸಾಧ್ಯ ಎಂದುಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್.ಹೇಳಿದರು.
ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿಕೇಂದ್ರ ಧಾರವಾಡ, ಕೌಶಲಾಭಿವೃದ್ಧಿ,ಉದ್ಯಮಶೀಲತೆ ಹಾಗೂ ಜೀವನೋಪಾಯಇಲಾಖೆ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿನಗರದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದಉದ್ಯಮಶೀಲತಾ ಅಭಿವೃದ್ಧಿ ತರಬೇತಿಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು.
ಕೆಲಸ ಮಾಡಲು ನೂರಾರುದಾರಿಗಳಿರುತ್ತವೆ. ವಿದ್ಯಾವಂತರು ಸ್ವಯಂಉದ್ಯೋಗ ಪ್ರಾರಂಭಿಸಲು ಮುಂದೆಬರಬೇಕು. ಕೈಗಾರಿಕಾ ಮತ್ತು ಸೇವಾವಿಭಾಗದಲ್ಲಿ ಉದ್ಯಮಗಳನ್ನು ಪ್ರಾರಂಭಿಸಲುಸಾಕಷ್ಟು ಅವಕಾಶಗಳು ಲಭ್ಯವಿರುತ್ತವೆ.ಇಂದು ಚೀನಾ ದೇಶ ಜಗತ್ತಿನಲ್ಲಿಯೇಸಣ್ಣ ಪ್ರಮಾಣದ ಕೈಗಾರಿಕೆ ಸ್ಥಾಪಿಸುವಲ್ಲಿಮುಂದಿದೆ. ಹಾಗೆಯೇ ನಮ್ಮಲ್ಲಿಯೂ ಸಣ್ಣಸಣ್ಣ ಪ್ರಮಾಣದ ಉತ್ಪಾದನಾ ಚಟುವಟಿಕೆಮತ್ತು ಸೇವಾ ಚಟುವಟಿಕೆ ಸ್ಥಾಪಿಸಲುಯುವಶಕ್ತಿ ಮುಂದೆ ಬರಬೇಕು ಎಂದರು.
ಸಿಡಾಕ್‌ನ ಜಂಟಿ ನಿರ್ದೇಶಕ ಜಿ.ಯು.ಹುಡೇದ ಮಾತನಾಡಿ, 10 ದಿನಗಳಅವಧಿಯ ತರಬೇತಿಯಲ್ಲಿ ಸಾಧನಾಪ್ರೇರಣಾ ತರಬೇತಿ, ಸ್ವಯಂ ಉದ್ಯಮಗಳನ್ನುಸ್ಥಾಪನೆ ಮಾಡುವ ವಿಧಾನ, ಸ್ವಯಂಉದ್ಯೋಗಕ್ಕೆ ಇರುವ ಸೌಲಭ್ಯಗಳ ಕುರಿತುಮಾಹಿತಿ, ಉದ್ದಿಮೆ ಆಯ್ಕೆ ಮಾಡುವವಿಧಾನ, ಯೋಜನಾ ವರದಿ ತಯಾರಿಕೆ,ಮಾರುಕಟ್ಟೆ ಸಮೀಕ್ಷೆ ಮಾಡುವ ವಿಧಾನ,ಬ್ಯಾಂಕ್ ವ್ಯವಹಾರಗಳು, ಉದ್ಯಮಸ್ಥಾಪನೆಗೆ ಇರುವ ಸೌಲಭ್ಯಗಳು ಮತ್ತು ಇತರಸಂಬಂಧಪಟ್ಟ ವಿಷಯಗಳ ಬಗ್ಗೆ ತರಬೇತಿನೀಡಲಾಗುವುದು ಎಂದರು.
ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿಪ್ರಭುದೊರೆ ಅಧ್ಯಕ್ಷತೆ ವಹಿಸಿ ಮಾತನಾಡಿ,ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿಕೌಶಲ ಮೈಗೂಡಿಸಿಕೊಳ್ಳುವಂತೆ ಮತ್ತುಉದ್ಯಮ ಸ್ಥಾಪನೆಗೆ ಬೇಕಾಗುವ ಮಾಹಿತಿಅವಶ್ಯಕತೆ ಬಗ್ಗೆ ವಿವರಿಸಿದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕಿ ರೇಖಾ ಮ್ಯಾಗೇರಿ ಕೈಗಾರಿಕಾಕೇಂದ್ರದ ಯೋಜನೆಗಳ ಮಾಹಿತಿ ನೀಡಿದರು.ಲೀಡ್ ಬ್ಯಾಂಕ್ ವ್ಯವಸ್ಥಾಪಕ ಭೀಮರಾವ್‌ಪಾಂಚಾಳ ಉದ್ಯಮಕ್ಕೆ ಸಂಬಂಧಿಸಿದಬ್ಯಾಂಕ್ ವ್ಯವಹಾರದ ಬಗ್ಗೆ ಮಾಹಿತಿನೀಡಿದರು. ಸಮಾರಂಭದಲ್ಲಿ ಜಿಲ್ಲೆಯ ಭಾವಿಉದ್ಯಮಶೀಲರು ಭಾಗವಹಿಸಿದ್ದರು.