ಮಂಡ್ಯ: ಹಿಂದಿನ ದಿನಗಳಲ್ಲಿ ಹಿರಿಯರು ಮಕ್ಕಳೊಂದಿಗಿದ್ದು ಸನ್ನಡತೆ, ಸನ್ಮಾರ್ಗದತ್ತ ಕೊಂಡೊಯ್ಯುತ್ತಿದ್ದರು, ಆದರೆ, ಪ್ರಸ್ತುತ ಹಿರಿಯರು ಮಕ್ಕಳೊಂದಿಗಿಲ್ಲದಿರುವುದೇ ಮಕ್ಕಳು ಅಡ್ಡದಾರಿ ಹಿಡಿಯಲು ಕಾರಣ ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ವೈ.ಡಿ.ಲೀಲಾ ಕಳವಳ ವ್ಯಕ್ತಪಡಿಸಿದರು.
ನಗರದ ಇಂಡಿಯನ್ ಪಬ್ಲಿಕ್ ಸ್ಕೂಲ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಮಾತೃದೇವೋಭವ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಅವರು, ಹಿಂದೆಲ್ಲಾ ಅವಿ ಭಕ್ತ ಕುಟುಂಬಗಳು ಇದ್ದವು. ಮನೆಯ ಹಿರಿಯರು, ಕಿರಿಯರೆಲ್ಲರೂ ಮಕ್ಕಳೊಂದಿಗಿನ ಒಡ ನಾಟ, ಬಾಂಧವ್ಯ ಗಟ್ಟಿಯಾಗಿತ್ತು. ಮಕ್ಕಳಲ್ಲಿ ಪ್ರೀತಿ, ಆಪೆಯತೆ, ಸ್ನೇಹ ಸೌಹಾರ್ದತೆಗೆ ಪೂರಕ ವಾತಾವರಣವಿತ್ತು. ಆದರೆ, ಇಂದು ಅವಿ ಭಕ್ತ ಕುಟುಂಬಗಳೆಲ್ಲವೂ ವಿಭಕ್ತ ಕುಟುಂಬಗಳಾಗಿವೆ ಎಂದು ವಿಷಾದಿಸಿದರು.
ಸಕಾರಾತ್ಮ ಭಾವನೆ: ನಾನು, ನನ್ನ ಹೆಂಡತಿ, ಮಕ್ಕಳು ಎಂಬ ಸ್ವಾರ್ಥದಿಂದ ದ್ವೇಷ, ಅಸೂಯೆ ಹೆಚ್ಚುತ್ತಿದೆ. ಇದರಿಂದ ಮಕ್ಕಳಲ್ಲಿ ಸಕಾರಾತ್ಮ ಭಾವನೆಗಳು ಕುಸಿದು ಅಡ್ಡದಾರಿ ಹಿಡಿಯಲು ಕಾರಣವಾಗಿದೆ. ಪೋಷಕರು ಮಕ್ಕಳ ಮೇಲೆ ಅತಿಯಾದ ಪ್ರೀತಿ ತೋರುವುದರಿಂದ ಕೆಲವೊಮ್ಮೆ ಹಾಳು ಮಾಡುತ್ತೇವೆ. ಮಕ್ಕಳಲ್ಲಿ ವಿಶಾಲ ಮನೋಭಾವನೆ ಬೆಳೆಯುವಂತೆ ಪೋಷಕರು ಉತ್ತಮ ಆಲೋಚನೆ ತುಂಬಲು ಯತ್ನಿಸಬೇಕು.
ಮಹಿಳೆ ಶ್ರಮಜೀವಿ: ಮಹಿಳಾ ದಿನಾಚರಣೆಯನ್ನು ಮಾ.8ರಂದು ಇಡೀ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜ್ಯ ಸ್ಥಾನಮಾನ ನೀಡಲಾಗಿದೆ. ಇಡೀ ಕುಟುಂಬದ ನಿರ್ವಹಣೆ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ. ಜೀವನ ಪರ್ಯಂತ ಕುಟುಂಬಕ್ಕಾಗಿ ಶ್ರಮಿಸುತ್ತಾಳೆ. ಆದರೂ ಮಹಿಳೆಯರ ಮೇಲಿನ ಶೋಷಣೆ ತಪ್ಪಿಲ್ಲ.
ಸ್ವಯಂ ವಿವೇಚನೆಯಿಂದ ಮಾತ್ರ ಮಹಿಳಾ ಶೋಷಣೆ ತಡೆಯಲು ಸಾಧ್ಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪೋಷಕರ ಪಾದಪೂಜೆ ಮಾಡಿದರು. ಕೆ.ಪಿ.ಅರುಣಕುಮಾರಿ, ಬಿ.ಎಸ್.ಅನುಪಮ, ಶಾಲಿನಿ, ಕೆ.ಪಿ.ಮಂಜುಳ ರವೀಂದ್ರಸ್ವಾಮಿ, ಎಚ್.ಎಸ್.ಲಕ್ಷಿ ಲಿಂಗಪ್ಪ, ಪೂರ್ಣಿಮ, ತಸೀನಾ ಭಾಗವಹಿಸಿದ್ದರು.