Advertisement
ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ತಮಗಾಗಿ ಮಾತ್ರವಲ್ಲದೆ ಜಗತ್ತಿಗಾಗಿಯೂ ಅಭಿವೃದ್ಧಿ ಹೊಂದುವ ದೃಷ್ಟಿಕೋನ ಹೊಂದಿರಬೇಕು. ಮಣಿಪಾಲದಲ್ಲಿ ಕಲಿತ ವಿದ್ಯಾರ್ಥಿಗಳ ಗಮನ ತಮ್ಮ ಗಮ್ಯ ಸ್ಥಾನ ವನ್ನು ಮುಟ್ಟುವಂತಿರಬೇಕು ಎಂದು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಣಿಪಾಲ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ ಕರೆ ನೀಡಿದರು.
Related Articles
ಬಿಸಾಡುವ ಪೆನ್ನುಗಳ ಬದಲು ಪುನರುಪಯೋಗಿಸುವ ಪೆನ್ನುಗಳನ್ನು ಬಳಸುವ “ರೀ ಪೆನ್- ದಿ ಪೆನ್ ಬಾಕ್ಸ್’ ಯೋಜನೆಯನ್ನು ವಸಂತಿ ಪೈಯವರು ಉದ್ಘಾಟಿಸಿದರು. ಸಹ ಡೀನ್ ಡಾ| ವಿದ್ಯಾಸರಸ್ವತಿಯವರು ಯೋಜನೆಯ ಮುನ್ನೋಟ ನೀಡಿ, ಮುಳಿಯ ಪ್ರತಿಷ್ಠಾನ ದಿಂದ ಆರಂಭಿಕ ದೇಣಿಗೆಯಾಗಿ 10,000 ರೂ. ನೀಡಿದರು.
Advertisement
ಕಾಲೇಜಿನ ಡೀನ್ ಡಾ| ಕೀರ್ತಿಲತಾ ಎಂ. ಪೈ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ಡಾ| ರಜ್ವಿ ಸೇಠ್ ಅವರು ವಿದ್ಯಾರ್ಥಿ ಸಂಘದ ವರದಿಯನ್ನು ವಾಚಿಸಿದರು. ವಿದ್ಯಾರ್ಥಿಗಳ ಪರವಾಗಿ ಡಾ| ಜೋನಾತನ್ ಕೋಶಿಯವರು ಮಾತನಾಡಿದರು. ಡಾ| ಆನಂದದೀಪ ಶುಕ್ಲಾ ಮತ್ತು ಡಾ| ಶ್ರುತಿ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಪ್ರಶಸ್ತಿ ಪ್ರದಾನ2019ರ ಶ್ರೇಷ್ಠ ಪ್ರಬಂಧ ಮಂಡನೆಗಾಗಿ ಕನ್ಸರ್ವೇಟಿವ್ ಡೆಂಟಿಸ್ಟ್ರಿ ಆ್ಯಂಡ್ ಎಂಡೋಡಾಂಟಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ|ವಾಸುದೇವ ಬಲ್ಲಾಳ್ ಅವರಿಗೆ ಡಾ| ಟಿಎಂಎ ಪೈ ಚಿನ್ನದ ಪದಕವನ್ನು ಮತ್ತು ಶ್ರೇಷ್ಠ ಬೋಧನೋಪಕರಣಕ್ಕಾಗಿ ಡಾ| ಸುನಿಲ್ ಎಸ್. ನಾಯಕ್ ಮತ್ತು ಡಾ| ಅನುಪಮ ಸಿಂಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ| ಸೋಹಮ್ ಮಿತ್ರಾ ಅವರಿಗೆ ಶ್ರೇಷ್ಠ ನಿರ್ಗಮನ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು.