Advertisement
ಗಾಳಿ ಮಳೆ ಸಹಿತ ವಿವಿಧ ಕಾರಣಗಳಿಗೆ ವಿದ್ಯುತ್ ಪರಿವರ್ತಕಗಳಿಗೆ ನಿರಂತರ ಹಾನಿ ಹಾಗೂ ನಷ್ಟ ಉಂಟಾಗುತ್ತದೆ. ಎಚ್.ಟಿ. ಲೈನ್‌ನಲ್ಲಿ ಉಂಟಾಗುವ ವ್ಯತ್ಯಯವನ್ನು ತಪ್ಪಿಸಲು ವಿದ್ಯುತ್ ಪರಿವರ್ತಕದಲ್ಲಿ ಸ್ವಿಚ್ ಅಳವಡಿಸಲಾಗುತ್ತದೆ. ಯಾವುದೇ ರೀತಿಯ ಒತ್ತಡ ಉಂಟಾದ ಸಂದರ್ಭದಲ್ಲಿ ವಿದ್ಯುತ್ ಪರಿವರ್ತಕದಲ್ಲಿ ತತ್‌ಕ್ಷಣ ಸ್ವಯಂ ಆಫ್ ಆಗುತ್ತದೆ. ಪರಿವರ್ತಕದಲ್ಲಿ ಆಫ್ ಮಾಡಲು ಯಾವುದೇ ಸಿಬಂದಿ ಹೋಗಬೇಕಾದ ಆವಶ್ಯಕತೆ ಇಲ್ಲ. ಆದರೆ ಮರುಪೂರಣಕ್ಕೆ ಹೋಗಬೇಕಾಗುತ್ತದೆ.
ಕರ್ನಾಟಕ ವಿದ್ಯುತ್ ಕಾರ್ಖಾನೆ ಸೆಲ್ಫ್ಪ್ರೊ ಟೆಕ್ಟೆಡ್ ಟಿಸಿಯನ್ನು ತಯಾರಿಸುತ್ತಿದ್ದು, ಮೆಸ್ಕಾಂ ಮಂಗಳೂರು ವಿಭಾಗಕ್ಕೆ 25 ಪರಿವರ್ತಕಗಳನ್ನು ತರಿಸಲಾಗಿದೆ. ಪ್ರಾಯೋಗಿಕವಾಗಿ ಮಂಗಳೂರು ವ್ಯಾಪ್ತಿಯಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕು ವ್ಯಾಪ್ತಿಯಲ್ಲೂ ತಲಾ 2ರಂತೆ ಪ್ರಾಯೋಗಿಕ ಅಳವಡಿಕೆಗೆ ನೀಡಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ತಂತಿ ಸಮಸ್ಯೆ ಪರಿಹಾರ
ಮೆಸ್ಕಾಂನಲ್ಲಿ ವಿದ್ಯುತ್ ವ್ಯವಸ್ಥೆಗೆ ಸಂಬಂಧಪಟ್ಟಂತೆ ವಿದ್ಯುತ್ ಕಂಬದ ಪೂರೈಕೆ ಸಮರ್ಪಕವಾಗಿದ್ದರೂ ಕೆಲವು ಸಮಯ ಗಳಿಂದ ತಂತಿಯ ಕೊರತೆಯಿಂದ ಕೆಲಸಗಳಿಗೆ ತೊಂದರೆಯಾಗಿತ್ತು. ತಂತಿ ಪೂರೈಕೆಯ ನಿಟ್ಟಿನಲ್ಲಿ ಜನವರಿ ತಿಂಗಳಲ್ಲೇ ಟೆಂಡರ್ ಕರೆಯಲಾಗಿದ್ದರೂ ಚುನಾವಣ ನೀತಿಸಂಹಿತೆ ಹಾಗೂ ಆಡಳಿತಾತ್ಮಕ ಸಮಸ್ಯೆಯಿಂದ ಟೆಂಡರ್ ಅಂತಿಮಗೊಳಿಸುವ ಪ್ರಕ್ರಿಯೆ ನಡೆದಿರಲಿಲ್ಲ.
Related Articles
Advertisement
ನಗರಕ್ಕೆ ಮಾತ್ರಸ್ವಯಂ ರಕ್ಷಣಾ ಪರಿವರ್ತಕವನ್ನು ನಗರ ವ್ಯಾಪ್ತಿಯಲ್ಲಿ ಮಾತ್ರ ಅಳವಡಿಸಲಾಗುತ್ತದೆ. ಗ್ರಾಮಾಂತರ ಭಾಗಗಳಲ್ಲಿ ಇಂತಹ ಪರಿವರ್ತಕವನ್ನು ಅಳವಡಿಸಲು ಮತ್ತು ಪರಿಪೂರಣಕ್ಕೆ ಕಷ್ಟವಾಗುವುದರಿಂದ ನಗರ ಪ್ರದೇಶಗಳಲ್ಲಿ ಮಾತ್ರ ಅಳವಡಿಸಲು ತೀರ್ಮಾನಿಸಲಾಗಿದೆ. ನಗರದಲ್ಲಿ ಕಚೇರಿಗೆ ಸಮೀಪದಲ್ಲಿ ಕೆಲವೇ ಪರಿವರ್ತಕಗಳಿರುವುದರಿಂದ ನಿಭಾಯಿಸಲು ಸುಲಭವಾಗುವುದರಿಂದ ನಗರದಲ್ಲಿ ಅಳವಡಿಸಲಾಗುತ್ತದೆ. ಮಂಗಳೂರಿಗೆ ಆದ್ಯತೆ
ಹಾಲಿ ಟಿಸಿಗಳಲ್ಲಿ ಉಂಟಾಗುತ್ತಿರುವ ಒತ್ತಡವನ್ನು ನಿಭಾಯಿಸಲು ಸೆಲ್ಫ್ ಪ್ರೊಟೆಕ್ಟೆಡ್ ಟಿಸಿಯನ್ನು ಪ್ರಾಯೋಗಿಕವಾಗಿ ಅಳವಡಿಸಲು ನಿರ್ಧರಿಸಲಾಗಿದೆ. ಸಾಧಕ -ಬಾಧಕಗಳ ಅರಿವಿಲ್ಲದಿರುವುದರಿಂದ ಉಪವಿಭಾಗಗಳಲ್ಲಿ ಅಳವಡಿಸಲು ಎಂಜಿನಿಯರ್‌ಗಳು ಆರಂಭದಲ್ಲಿ ಹಿಂದೇಟು ಹಾಕಿದರೂ ಅವರಿಗೂ ಅಳವಡಿಸಲು ನೀಡಲಾಗುತ್ತದೆ. ಮಂಗಳೂರನ್ನು ಆದ್ಯತೆಯಾಗಿ ಪರಿಗಣಿಸಿದ್ದೇವೆ.
– ಮಂಜಪ್ಪ ಅಧೀಕ್ಷಕ ಎಂಜಿನಿಯರ್, ಮೆಸ್ಕಾಂ
ಮಂಗಳೂರು ವೃತ್ತ ಕಚೇರಿ ರಾಜೇಶ್ ಪಟ್ಟೆ