Advertisement

ಯುವತಿಯರಿಗೆ ಸ್ವಯಂ ರಕ್ಷಣಾ ತರಬೇತಿ

12:15 PM Oct 31, 2018 | Team Udayavani |

ಬೆಂಗಳೂರು: ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ ವತಿಯಿಂದ ಯುವತಿಯರಿಗೆ ಸ್ವಯಂ ರಕ್ಷಣೆ ಕುರಿತು ತರಬೇತಿ ನೀಡಲು “ಮಿಷನ್‌ ಸಾಹಸಿ’ ಎಂಬ ಕಾರ್ಯಕ್ರಮವನ್ನು ನಗರದ ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ಏರ್ಪಡಿಸಿಲಾಗಿತ್ತು.

Advertisement

ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಭಾಗವಹಿಸಿ, ಸ್ವಯಂ ರಕ್ಷಣೆಗಾಗಿ ತಾವು ಕಲಿತಿರುವ ಮಾರ್ಷಲ್‌ ಆರ್ಟ್ಸ್ ಮತ್ತು ಕರಾಟೆ ಕೌಶಲ್ಯಗಳನ್ನು ಪ್ರದರ್ಶಿಸಿದರು. ಜತೆಗೆ ಕಿರುಕುಳ ನೀಡಲು ಬಂದ ಪುರುಷರಿಂದ ಪಾರಾಗುವ ಪರಿ ಹಾಗೂ ಮಾನಸಿಕವಾಗಿ ಸಿದ್ಧರಾಗುವ ಕುರಿತು ಕಾಲೇಜು ವಿದ್ಯಾರ್ಥಿನಿಯರಿಗೆ “ದಿ ಮಾರ್ಷಲ್‌ ಆರ್ಟ್ಸ್ ಟ್ರಸ್ಟ್‌’ನ 250ಕ್ಕೂ ಹೆಚ್ಚು ಬ್ಲಾಕ್‌ಬೆಲ್ಟ್ ಪಟುಗಳು ಕರಾಟೆ ಪಟ್ಟುಗಳನ್ನು ಕಲಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ನಟಿ ಶ್ರುತಿ ಮಾತನಾಡಿ, ಮಹಿಳೆಯರು ಸ್ವಯಂ ರಕ್ಷಣೆ ಮಾಡಿಕೊಳ್ಳುವ ಮಟ್ಟಕ್ಕೆ ಸಮಾಜ ಅಪಾಯಕಾರಿಯಾಗಿ ಬದಲಾಗಿರುವುದು ಬೇಸರದ ವಿಚಾರ. ಮಹಿಳೆ ದೈಹಿಕ ಶಕ್ತಿಯ ಜತೆಗೆ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಲ್ಲಿ ತನಗೆ ತೊಂದರೆ ನೀಡಲು ಬಂದವರನ್ನು ಸಮರ್ಥವಾಗಿ ಎದುರಿಸಬಲ್ಲಳು. ಮುಖ್ಯವಾಗಿ ಸಮಾಜವನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಯುವತಿಯರಲ್ಲಿ ಪೋಷಕರು ತುಂಬಬೇಕು ಎಂದರು.

ಅಭಿಯಾನದಲ್ಲಿ ಮಹಾರಾಣಿ ಕಾಲೇಜು, ಅಮ್ಮಣ್ಣಿ ಕಾಲೇಜು, ವಿಜಯನಗರ ಕಲೇಜು, ಎನ್‌ಎಂಕೆಆರ್‌ವಿ ಕಾಲೇಜು, ಎಸ್‌ಜೆಪಿ ಕಾಲೇಜು, ಆರ್‌ಸಿ ಕಾಲೇಜು ಸೇರಿದಂತೆ ಇನ್ನಿತ ಕಾಲೇಜುಗಳಿಂದ ಒಂದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ವೇಳೆ ಬೆಂಗಳೂರು ವಿವಿ ಉಪಕುಲಪತಿ ಡಾ. ವೇಣುಗೋಪಾಲ್‌, ಗರುಡ ಫೌಂಡೇಷನ್‌ ಪ್ರಧಾನ ಟ್ರಸ್ಟಿ ಮೇದಿನಿ ಉದಯ್‌, ದಿ ಮಾರ್ಷಲ್‌ ಆರ್ಟ್ಸ್ ಟ್ರಸ್ಟ್‌ ಗ್ರ್ಯಾಂಡ್‌ ಮಾಸ್ಟರ್‌ ಡಾ. ಪ್ರವೀಣ್‌ ರಂಕಾ, ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷನಾರಾಯಣ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next