Advertisement

ಕೊಹ್ಲಿ ಆಯ್ಕೆಗೆ ಲಂಚ ಕೇಳಿದ್ದ ಆಯ್ಕೆಗಾರರು!

12:36 PM May 20, 2020 | mahesh |

ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ಅಪ್ರತಿಮ ಕ್ರಿಕೆಟ್‌ ಪ್ರತಿಭೆಯಾಗಿ ಬೆಳೆದು ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಹೃದಯ ಗೆದ್ದಿರುವ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ತಮ್ಮ ಕ್ರಿಕೆಟ್‌ ಜೀವನದ ಆರಂಭದ ದಿನಗಳಲ್ಲಿ ತಂಡದೊಳಗೆ ಅವಕಾಶಕ್ಕಾಗಿ ಪರದಾಟ ನಡೆಸಿದ್ದರು.

Advertisement

ಪ್ರತಿಭೆ ಇದ್ದರೂ ಕೊಹ್ಲಿಗೆ ರಾಜ್ಯ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ, ತಂಡಕ್ಕೆ ಕೊಹ್ಲಿಯ ಆಯ್ಕೆ ವಿಷಯ ಬಂದಾಗ ಆಯ್ಕೆಗಾರರು ಅವರ ತಂದೆಯ ಬಳಿ ಲಂಚಕ್ಕಾಗಿ ಆಮಿಷವೊಡ್ಡಿದ್ದರು. “ನಿಮ್ಮ ಮಗನ ಆಯ್ಕೆಗೆ ಹೆಚ್ಚುವರಿ ಸ್ವಲ್ಪ ಕೊಡಬೇಕಾಗಿ ಬರಬಹುದು’ ಎಂದು ಹೇಳಿದ್ದರಂತೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಕೊಹ್ಲಿ ತಂದೆ, “ನೀವು ನನ್ನ ಮಗನನ್ನು ಆಯ್ಕೆ ಮಾಡಲು ಬಯಸುವುದಾದರೆ ಅದು ಸಂಪೂರ್ಣವಾಗಿ ಅರ್ಹತೆಯ ಮೇಲಿರಲಿ, ನಾನು ನಿಮಗೆ ಒಂದು ರೂಪಾಯಿಯೂ ಕೊಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದರಂತೆ. ಈ ಸ್ಫೋಟಕ ವಿಷಯವನ್ನು ವಿರಾಟ್‌ ಕೊಹ್ಲಿ ಭಾರತ ಫ‌ುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಜತೆಗೆ ಇನ್ಸ್ಟಾಗ್ರಾಮ್‌ನಲ್ಲಿ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

“ನನ್ನ ತವರು ರಾಜ್ಯದಲ್ಲಿ ಕೆಲವೊಮ್ಮೆ ನ್ಯಾಯಸಮ್ಮತವಲ್ಲದ ವಿಷಯಗಳು ನಡೆಯುತ್ತಿರುತ್ತವೆ, ಆಯ್ಕೆ ವಿಚಾರ ಬಂದಾಗ ಕೆಲವರು ನ್ಯಾಯಯುತವಾಗಿ ನಡೆದುಕೊಳ್ಳಲಿಲ್ಲ, ತಂಡದಲ್ಲಿ ನನ್ನ ಆಯ್ಕೆ ಖಚಿತಗೊಳ್ಳಲು ಲಂಚಕ್ಕಾಗಿ ನನ್ನ ತಂದೆಯ ಬಳಿ ಬೇಡಿಕೆ ಇಟ್ಟರು. ಆದರೆ ನನ್ನ ತಂದೆ ಅದನ್ನು ತಿರಸ್ಕರಿಸಿ, ಸರಿಯಾದ ಮಾರ್ಗದಲ್ಲಿ ಹೋಗುವುದನ್ನು, ಕ್ರಿಯೆಯ ಮೂಲಕ ಅಂದೇ ತೋರಿಸಿಕೊಟ್ಟಿದ್ದರು ಎಂದು ಕೊಹ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next