Advertisement

ಸೌರ ವಿದ್ಯುತ್ ಘಟಕಗಳ ಸಂಖ್ಯೆ ಹೆಚ್ಚಾಗಲಿ: ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್

07:11 PM Jun 01, 2022 | Team Udayavani |

ಹಾಸನ: ಸೌರವಿದ್ಯುತ್ ನವೀಕರಿಸಬಹುದಾದ ಸಂಪನ್ಮೂಲವಾಗಿದ್ದು, ಇದರಿಂದ ಪರಿಸರಕ್ಕೆ ಒಳಿತಾಗಲಿದೆ. ಇಂತಹ ಸೌರ ವಿದ್ಯುತ್ ಘಟಕಗಳ ಸಂಖ್ಯೆ ಸಂಖ್ಯೆ ಹೆಚ್ಚಾಗಬೇಕೆಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

Advertisement

ಬೆಂಗಳೂರಿನ ಸೆಲ್ಕೋ ಸೋಲಾರ್ ಲೈಟ್ ಪ್ರೈ.ಲಿ. ವತಿಯಿಂದ ಹಾಸನದಲ್ಲಿ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ,ಪರಿಸರ ಸಂರಕ್ಷಣೆಗೆ ಸೌರ ವಿದ್ಯುತ್ ಘಟಕ ಸಹಕಾರಿಯಾಗಿದ್ದು, ಸೌರ ವಿದ್ಯುತ್ ಬಳಕೆ ಕುರಿತು ಅರಿವು ಮೂಡಿಸುವ ಪ್ರಯತ್ನ ಇನ್ನಷ್ಟು ಹೆಚ್ಚಾಗಬೇಕು ಎಂದರು.

ಮುಖ್ಯ ಅತಿಥಿ ಜಿ.ಪಂ. ಸಿಇಒ ಕಾಂತರಾಜು ಸಂದರ್ಭೋಚಿತವಾಗಿ ಮಾತನಾಡಿದರು. ಅರಸೀಕೆರೆ ತಾಲೂಕು ಅಗ್ಗುಂದ ಗ್ರಾಮದ ಮಹಿಳಾ ಉದ್ಯಮಿ ಕೆ.ಎಂ. ನಾಗರತ್ನಮ್ಮ ಅವರನ್ನು ಸನ್ಮಾನಿಸಲಾಯಿತು. ಕಂಪೆನಿಯ ಉಪ ಮಹಾ ಪ್ರಬಂಧಕ ಗುರುಪ್ರಸಾದ್ ಶೆಟ್ಟಿ ಪ್ರಸ್ತಾವಿಸಿ, ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ನವೀನ್ ಕಾರ್ಯಕ್ರಮ ನಿರೂಪಿಸಿದರು. ಹಾಸನ ಶಾಖೆ ವ್ಯವಸ್ಥಾಪಕ ವಿಜೇತ್ ವಂದಿಸಿದರು.

ಸಮಾರೋಪ
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಸನ ಆಕಾಶವಾಣಿ ಕಾರ್ಯ ನಿರ್ವಹಣಾಧಿಕಾರಿ ಕೇಶವ ಮೂರ್ತಿ, ಮಾಧ್ಯಮಗಳು ಜನರಿಗೆ ಕೃಷಿ, ತಂತ್ರಜ್ಞಾನ, ಅಭಿವೃದ್ಧಿ ಮಾಹಿತಿ ತಿಳಿಸುವ ನಿಟ್ಟಿನಲ್ಲಿ ಮುಂದಡಿಯಬೇಕು ಎಂದರು.

Advertisement

ಸೌರ ವಿದ್ಯುತ್ ಇನ್ನಷ್ಟು ಪ್ರಚಲಿತವಾಗಲು ಜನರ ಸಹಕಾರ ಅಗತ್ಯವಾಗಿದೆ. ಅವುಗಳ ಬಳಕೆ, ಕಾರ್ಯವಿಧಾನ, ಸೌರ ವಿದ್ಯುತ್ ಅಳವಡಿಕೆಯ ಧ್ಯೆಯೋದ್ದೇಶದ ಕುರಿತು ಅರಿವು ಮೂಡಿಸಲು ಸಂಸ್ಥೆ ಸಾಕಷ್ಟು ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಕೊಂಡ ಕುರಿತು ಜಿಲ್ಲಾ ಲೀಡ್ ಬ್ಯಾಂಕ್ ನ ಮ್ಯಾನೇಜರ್ ರೇವತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಲಾರ್ ಟೈಲರಿಂಗ್ ಬಳಸಿ ಸ್ವ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಕಂಡ ಚಿಕ್ಕಮಗಳೂರಿನ ಎಸ್.ಡಿ. ಶೋಭಾ ಅವರನ್ನು ಸಮ್ಮಾನಿಸಲಾಯಿತು.ಜಿಲ್ಲಾ ಆಯುಷ್ ಅಧಿಕಾರಿ ಡಾ. ವೀಣಾಲತಾ, ಸೆಲ್ಕೋ ಕಂಪೆನಿಯ ಉಪ ಮಹಾಪ್ರಬಂಧಕ ಸುದಿಪ್ತ್ ಘೋಷ್, ಗುರುಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಚಿಕ್ಕಮಗಳೂರಿನ ಕೆ. ಆರ್. ಅಕ್ಷತಾ ಸ್ವಾಗತಿಸಿ, ನಿರೂಪಿಸಿದರು. ಸೆಲ್ಕೋ ಸಿಬ್ಬಂದಿ ದಯಾನಂದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next