Advertisement

ಅಕ್ರಮವಾಗಿ ಭಾರತಕ್ಕೆ ಬಂದ ಪಾಕ್‌ ಪ್ರಜೆ ಸೀಮಾ ಹೈದರ್‌ ಈಗ ಗರ್ಭಿಣಿ !

12:20 AM Jan 03, 2024 | Team Udayavani |

ಲಕ್ನೋ: ಭಾರತಕ್ಕೆ ಆಕ್ರಮವಾಗಿ ಬಂದಿರುವ ಪಾಕಿಸ್ಥಾನಿ ಪ್ರಜೆ ಸೀಮಾ ಹೈದರ್‌, ಆಕೆಯ ಭಾರತದ ಪತಿ ಸಚಿನ್‌ ಮೀನಾ ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. “ನಾನು ಗರ್ಭಿಣಿಯಾಗಿ ದ್ದೇನೆ. 2024 ನಮಗೆ ಫ‌ಲಪ್ರದವಾಗಲಿದೆ ಎಂದು ಆಶಿಸುತ್ತೇನೆ’ ಎಂದು ಸೀಮಾ ಹೈದರ್‌ ಹೇಳಿದ್ದಾರೆ.

Advertisement

2019ರಲ್ಲಿ ಪಬ್ಜಿ ಮೂಲಕ ಸೀಮಾಗೆ ಮೊದಲ ಬಾರಿಗೆ ಲಕ್ನೋದ ಸಚಿನ್‌ ಮೀನಾ ಪರಿಚಯವಾಯಿತು. ಆ ಸಮಯದಲ್ಲೇ ಪಾಕ್‌ ಪತಿಯೊಂದಿಗೆ ಸೀಮಾಗೆ 4 ಮಕ್ಕಳಿದ್ದರು. 2023ರ ಮಾರ್ಚ್‌ನಲ್ಲಿ ನೇಪಾಲದಲ್ಲಿ ಸಚಿನ್‌ ಮತ್ತು ಸೀಮಾ ಭೇಟಿಯಾಗಿ, ಪಶುಪತಿನಾಥ ದೇಗುಲದಲ್ಲಿ ಮದುವೆಯಾದರು. ಅನಂತರ ನೇಪಾಲದ ಮೂಲಕ ಅಕ್ರಮವಾಗಿ ನಾಲ್ವರು ಮಕ್ಕಳೊಂದಿಗೆ ಸೀಮಾ ಭಾರತ ಪ್ರವೇಶಿದರು. ಕಳೆದ ಮೇಯಲ್ಲಿ ನೋಯ್ಡಾದಲ್ಲಿ ದಂಪತಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ಅನಂತರ ಬಿಡುಗಡೆಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next