Advertisement

Noida ರಾಷ್ಟ್ರಧ್ವಜ ಹಾರಿಸಿದ ಸೀಮಾ ಹೈದರ್‌

12:15 AM Aug 15, 2023 | Team Udayavani |

ನೋಯ್ಡಾ: ಪಾಕ್‌ನಿಂದ ಭಾರತಕ್ಕೆ ಬಂದು ಪ್ರಿಯತಮ ನೊಂದಿಗೆ ನೆಲೆಸಿ ಸುದ್ದಿಯಾಗಿರುವ ಪಾಕ್‌ ಪ್ರಜೆ ಸೀಮಾ ಹೈದರ್‌ ಸೋಮವಾರ ಸ್ವಾತಂತ್ರ್ಯೋತ್ಸವದ ಅಂಗವಾಗಿ “ಹರ್‌ ಘರ್‌ ತಿರಂಗಾ’ ಅಭಿಯಾನದಡಿ ನೋ ಯ್ಡಾದ ನಿವಾಸದಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಅಷ್ಟೇ ಅಲ್ಲದೆ, “ಹಿಂದೂಸ್ಥಾನ್‌ ಜಿಂದಾ ಬಾದ್‌. ಪಾಕಿಸ್ಥಾನ್‌ ಮುರ್ದಾಬಾದ್‌’ ಎಂಬ ಘೋಷಣೆಗಳನ್ನು ಅವರು ಕೂಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಈ ವೇಳೆ ಅವರ ಪತಿ ಸಚಿನ್‌, ನ್ಯಾಯವಾದಿ ಎ.ಪಿ.ಸಿಂಗ್‌ ಹಾಗೂ ಮಕ್ಕಳು ಜತೆಗಿ ದ್ದರು. ಇನ್ನೊಂದೆಡೆ ಪ್ರಿಯತಮನ ಭೇಟಿಗಾಗಿ ಪಾಕಿಸ್ಥಾನಕ್ಕೆ ಹೋಗಿರುವ ಭಾರತೀಯ ಪ್ರಜೆ ಅಂಜು, ಪಾಕಿಸ್ಥಾನದಲ್ಲಿ ಸೋಮ ವಾರ ನಡೆದ “ಪಾಕ್‌ ಸ್ವಾತಂತ್ರ್ಯ ದಿನ’ದಲ್ಲಿ ಭಾಗವಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next