Advertisement

ಅಮೆರಿಕವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತೇನೆ, ವಿಭಜನೆಯನ್ನಲ್ಲ: ನೂತನ ಅಧ್ಯಕ್ಷ ಜೋ ಬಿಡೆನ್

12:47 PM Nov 08, 2020 | keerthan |

ವಾಷಿಂಗ್ಟನ್ ಡಿಸಿ: ಇನ್ನು ಮುಂದೆ ಅಮೆರಿಕದಲ್ಲಿ ದೇಶವನ್ನು ವಿಭಜಿಸುವ ಅಧ್ಯಕ್ಷರಿರುವುದಿಲ್ಲ, ದೇಶವನ್ನು ಒಗ್ಗೂಡಿಸುವ ಅಧ್ಯಕ್ಷರಿರುತ್ತಾರೆ ಎಂದು ಅಮೆರಿಕ ನೂತನ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

Advertisement

ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ದೇಶವನ್ನು ಉದ್ದೇಶಿಸಿ ಜೋ ಬೈಡನ್ ಮೊದಲ ಭಾಷಣ ಮಾಡಿದ್ದು, “ದೇಶದ ಜನರು ಮಾತನಾಡಿದ್ದಾರೆ, ಅವರು ನಮಗೆ ಪರಿಪೂರ್ಣ ಗೆಲುವನ್ನು ನೀಡಿದ್ದಾರೆ. ಹಿಂದಿನ ಎಲ್ಲಾ ಚುನಾವಣೆಗಿಂತ ಅತ್ಯಧಿಕ ಮತಗಳನ್ನು ನಾವು ಪಡೆದಿದ್ದೇವೆ ಎಂದರು.

“ನಾನು ಅಧ್ಯಕ್ಷನಾಗಿ ಪ್ರಮಾಣ ಮಾಡುತ್ತೇನೆ. ನಮಗೆ ಒಗ್ಗಟ್ಟು ಮತ್ತು ಒಕ್ಕೂಟ ವ್ಯವಸ್ಥೆ ಬೇಕು. ಅಧ್ಯಕ್ಷರು ಕೆಂಪು ರಾಜ್ಯಗಳು, ನೀಲಿ ರಾಜ್ಯಗಳು ಎಂದು ನೋಡುವುದಿಲ್ಲ. ಅಮೆರಿಕವಾಗಿ ನೋಡುತ್ತೇವೆ” ಎಂದು ಜೋ ಬಿಡೆನ್ ಹೇಳಿದರು.

ಟ್ರಂಪ್ ಬೆಂಬಲಿಗರು ನಮ್ಮ ಶತ್ರುಗಳಲ್ಲ. ಅವರು ಕೂಡಾ ಅಮೆರಿಕನ್ನರೇ. ಅಮೆರಿಕದಲ್ಲಿ ರಾಕ್ಷಸೀಕರಣದ ಯುಗಾಂತ್ಯದ ಆರಂಭ ಈಗಿನಿಂದಲೇ ಆರಂಭವಾಗಲಿ’ ಎಂದು ಬಿಡೆನ್ ಹೇಳಿದರು. ‘ನಾನು ಅಮೆರಿಕ ಅಧ್ಯಕ್ಷನಾಗಿ ಈ ದೇಶದ ಆತ್ಮಕ್ಕೆ ಮರುಜೀವ ತುಂಬಲು, ಈ ದೇಶದ ಬೆನ್ನೆಲುಬಾದ ಮಧ್ಯಮ ವರ್ಗದವರಿಗೆ ಪುಷ್ಟಿ ತುಂಬಲು ಮತ್ತು ಅಮೆರಿಕಕ್ಕೆ ಮತ್ತೆ ಜಾಗತಿಕ ಗೌರವ ಸಿಗಲು ನಾನು ಈ ಕಚೇರಿಯನ್ನು  ಬಳಸಿಕೊಳ್ಳುತ್ತೇನೆ ಎಂದು ಜೋ ಬಿಡೆನ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next